‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada Season 10) ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಈ ಬಾರಿ ದೊಡ್ಮನೆಗೆ ಯಾರೆಲ್ಲ ಬರ್ತಾರೆ ಎನ್ನುವ ಬಗ್ಗೆ ಕುತೂಹಲ ಮೂಡಿದೆ. ಈಗಾಗಲೇ ಆಯ್ಕೆ ಬಹುತೇಕ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಸುದೀಪ್ (Sudeep) ಅವರು ‘ಬಿಗ್ ಬಾಸ್’ ಪ್ರಸಾರದ ಸಮಯ ತಿಳಿಸಿದ್ದಾರೆ. ಹೊಸ ಪ್ರೋಮೋ ಮೂಲಕ ಈ ವಿಚಾರವನ್ನು ರಿವೀಲ್ ಮಾಡಲಾಗಿದೆ. ಈ ವಿಚಾರ ಕೇಳಿ ಬಿಗ್ ಬಾಸ್ ಪ್ರಿಯರು ಖುಷಿ ಪಟ್ಟಿದ್ದಾರೆ.
‘ಬಿಗ್ ಬಾಸ್’ ಆರಂಭ ಆಗುತ್ತದೆ ಎಂದಾಗಿನಿಂದಲೂ ಅದರ ಪ್ರಸಾರದ ಸಮಯದ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇತ್ತು. ಅದಕ್ಕೆ ಉತ್ತರ ಸಿಕ್ಕಿದೆ. ಪ್ರತಿ ದಿನ ರಾತ್ರಿ 9:30ಕ್ಕೆ ಬಿಗ್ ಬಾಸ್ ಆರಂಭ ಆಗಲಿದೆ. ಈ ವಿಚಾರವನ್ನು ಹೊಸ ಪ್ರೋಮೋ ಮೂಲಕ ತಿಳಿಸಲಾಗಿದೆ. ಇನ್ನು, ಸ್ಪರ್ಧಿಗಳನ್ನು ಪರಿಚಯಿಸುವ ದಿನ ಅಂದರೆ ಮೊದಲ ದಿನ (ಅಕ್ಟೋಬರ್ 8) ಬಿಗ್ ಬಾಸ್ ಸಂಜೆ 6 ಗಂಟೆಗೆ ಆರಂಭ ಆಗಲಿದೆ.
ಇನ್ನು, 10 ದಿನಗಳಲ್ಲಿ ಬಿಗ್ ಬಾಸ್ ಆರಂಭ ಆಗಲಿದೆ. ಕಳೆದ ಬಾರಿಯಂತೆ ಈ ಬಾರಿಯೂ ಬಿಗ್ ಬಾಸ್ಗೆ ಯೂಟ್ಯೂಬರ್ಸ್, ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ಸ್, ಕಲಾವಿದರು ಬರಲಿದ್ದಾರಂತೆ. ದೊಡ್ಮನೆಗೆ ಬರೋರು ಯಾರ್ಯಾರು ಎನ್ನುವ ಕುರಿತು ಹಲವು ಹೆಸರು ಚರ್ಚೆಯಲ್ಲಿದೆ.
ಇದನ್ನೂ ಓದಿ: ‘ಅನುಬಂಧ’ ವೇದಿಕೆಯಲ್ಲಿ ‘ಬಿಗ್ ಬಾಸ್ 10’ ಮೊದಲ ಸ್ಪರ್ಧಿಯ ಹೆಸರು ರಿವೀಲ್ ಮಾಡಿದ ಅನುಪಮಾ ಗೌಡ
‘ಬಿಗ್ ಬಾಸ್ ಕನ್ನಡ ಸೀಸನ್ 10’ ಸಖತ್ ಗ್ರ್ಯಾಂಡ್ ಆಗಿ ಇರಲಿದೆ. ಕಿಚ್ಚ ಸುದೀಪ್ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸುದೀಪ್ ಆ್ಯಂಕರಿಂಗ್ ನೋಡಲು ಅನೇಕರು ಕಾದಿದ್ದಾರೆ. ಸದ್ಯ ಅವರು ‘ಮ್ಯಾಕ್ಸ್’ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರೆ. ಇದರ ಮಧ್ಯೆ ಅವರು ಬಿಗ್ ಬಾಸ್ ಕೆಲಸವನ್ನೂ ಮಾಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ