AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅನುಬಂಧ’ ವೇದಿಕೆಯಲ್ಲಿ ‘ಬಿಗ್ ಬಾಸ್ 10’ ಮೊದಲ ಸ್ಪರ್ಧಿಯ ಹೆಸರು ರಿವೀಲ್ ಮಾಡಿದ ಅನುಪಮಾ ಗೌಡ

ಕಲರ್ಸ್ ಕನ್ನಡದಲ್ಲಿ ‘ಅನುಬಂಧ ಅವಾರ್ಡ್ಸ್’ ಕಾರ್ಯಕ್ರಮ ಪ್ರಸಾರ ಕಂಡಿದೆ. ಧಾರಾವಾಹಿಗಳ ತಂಡದವರೆಲ್ಲ ಒಂದೆಡೆ ಸೇರಿ ಅದ್ದೂರಿಯಾಗಿ ಈ ಅವಾರ್ಡ್ಸ್ ಕಾರ್ಯಕ್ರಮ ನಡೆಸಿದ್ದಾರೆ. ಹಲವು ರೀತಿಯ ಮನರಂಜನೆ ಕಾರ್ಯಕ್ರಮಗಳು ಕೂಡ ಇತ್ತು. ಈ ವೇದಿಕೆ ಮೇಲೆ ಹೊಸ ಘೋಷಣೆ ಆಗಿದೆ.

‘ಅನುಬಂಧ’ ವೇದಿಕೆಯಲ್ಲಿ ‘ಬಿಗ್ ಬಾಸ್ 10’ ಮೊದಲ ಸ್ಪರ್ಧಿಯ ಹೆಸರು ರಿವೀಲ್ ಮಾಡಿದ ಅನುಪಮಾ ಗೌಡ
ಬಿಗ್​ಬಾಸ್ 10
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Sep 24, 2023 | 8:14 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK 10) ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಅಕ್ಟೋಬರ್ 8ರಿಂದ ಹೊಸ ಸೀಸನ್ ಆರಂಭ ಆಗುವ ಬಗ್ಗೆ ಘೋಷಣೆ ಆಗಿದೆ. ಇದರ ಜೊತೆಗೆ ಬಿಗ್ ಬಾಸ್ (Bigg Boss) ಮನೆ ಒಳಗೆ ಹೋಗುವ ಸ್ಪರ್ಧಿಗಳು ಯಾರ್ಯಾರು ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಈ ಬಗ್ಗೆ ಈಗಾಗಲೇ ಅನೇಕ ಹೆಸರುಗಳು ಹರಿದಾಡಿವೆ. ಆದರೆ, ಯಾವುದೂ ಅಧಿಕೃತವಾಗಿಲ್ಲ. ಅಧಿಕೃತ ಪಟ್ಟಿ ಸಿಗೋಕೆ ಅಕ್ಟೋಬರ್ 8ರ ರಾತ್ರಿವರೆಗೆ ಕಾಯಲೇಬೇಕು. ಈ ಮಧ್ಯೆ ಒಬ್ಬರ ಹೆಸರನ್ನು ಅಧಿಕೃತ ಮಾಡಲಾಗಿದೆ. ಅದೂ ‘ಅನುಬಂಧ ಅವಾರ್ಡ್ಸ್’ ವೇದಿಕೆ ಮೇಲೆ. ಆ ಬಗ್ಗೆ ಇಲ್ಲಿದೆ ವಿವರ.

ಕಲರ್ಸ್ ಕನ್ನಡದಲ್ಲಿ ‘ಅನುಬಂಧ ಅವಾರ್ಡ್ಸ್’ ಕಾರ್ಯಕ್ರಮ ಪ್ರಸಾರ ಕಂಡಿದೆ. ಧಾರಾವಾಹಿಗಳ ತಂಡದವರೆಲ್ಲ ಒಂದೆಡೆ ಸೇರಿ ಅದ್ದೂರಿಯಾಗಿ ಈ ಅವಾರ್ಡ್ಸ್ ಕಾರ್ಯಕ್ರಮ ನಡೆಸಿದ್ದಾರೆ. ಹಲವು ರೀತಿಯ ಮನರಂಜನೆ ಕಾರ್ಯಕ್ರಮಗಳು ಕೂಡ ಇತ್ತು. ಸೃಜನ್ ಲೋಕೇಶ್ ಹಾಗೂ ಅನುಪಮಾ ಗೌಡ ಅವರು ಈ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಈ ವೇದಿಕೆ ಮೇಲೆ ಮೊದಲ ಸ್ಪರ್ಧಿಯ ಹೆಸರು ಘೋಷಣೆ ಮಾಡಲಾಗಿದೆ! ಯಾರದು? ‘777 ಚಾರ್ಲಿ’ ಸಿನಿಮಾದ ಶ್ವಾನ ಚಾರ್ಲಿ. ಹೀಗೋಂದು ಅಚ್ಚರಿಯ ಘೋಷಣೆ ಆಗಿದೆ.

‘777 ಚಾರ್ಲಿ’ ಧಾರಾವಾಹಿ ನಿರ್ದೇಶಕ ಕಿರಣ್ ರಾಜ್ ಅವರು ‘ಅನುಬಂಧ’ ವೇದಿಕೆ ಏರಿದ್ದರು. ಈ ವೇಳೆ ಮಾತನಾಡಿದ ಅನುಪಮಾ ಗೌಡ ಈ ಬಗ್ಗೆ ಘೋಷಣೆ ಮಾಡಿದರು. ‘ಚಾರ್ಲಿ ಸಿನಿಮಾದಲ್ಲಿ ಮಿಂಚಿದರು. ಈಗ ಬಿಗ್ ಬಾಸ್​ಗೆ ಬರ್ತಿದಾರೆ’ ಎಂದು ಹೇಳಲಾಯಿತು. ಈ ವಿಚಾರ ಕೇಳಿ ಎಲ್ಲರೂ ಅಚ್ಚರಿಗೊಂಡರು.

‘ಕನ್ನಡ ಕಿರುತೆರೆ ಇತಿಹಾಸದಲ್ಲಿ ಇದೇ ಮೊದಲು. ಚಾರ್ಲಿ ಬಿಗ್ ಬಾಸ್​ಗೆ ಬರ್ತಿದಾಳೆ’ ಎಂದು ಹೇಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು ಅನುಪಮಾ ಗೌಡ. ‘ಬಿಗ್ ಬಾಸ್​ಗೆ ಟಾರ್ಚರ್ ಕೊಟ್ಟು ಬಾ. ಕೆಲವೊಂದು ರೂಲ್ಸ್ ಇದೆ. ಬಿಗ್ ಬಾಸ್ ಹಾಡು ಹಾಕಿದಾಗ ಎದ್ದೇಳಬೇಕು. ಟಾಸ್ಕ್​ ಕೊಟ್ರೆ ಮಾಡಬೇಕು. ಟಾಸ್ಕ್ ಮಾಡಿದ್ರೆ ಮಾತ್ರ ಲಕ್ಷುರಿ ಬಜೆಟ್ ಸಿಗೋದು. ಲಕ್ಷುರಿ ಬಜೆಟ್ ಸಿಕ್ಕಿದ್ರೆ ಮಾತ್ರ ನಿಂಗೆ ಮೂಳೆ ಸಿಗೋದು’ ಎಂದರು ಅನುಪಮಾ.

ಇದನ್ನೂ ಓದಿ: ‘ಅನುಬಂಧ ಅವಾರ್ಡ್ಸ್’ ರೆಡ್ ಕಾರ್ಪೆಟ್ ಮೇಲೆ ನಡೆದ ಸೆಲೆಬ್ರಿಟಿಗಳು ಇವರೇ ನೋಡಿ

ಸದ್ಯ ಚಾರ್ಲಿ ಎಂಟ್ರಿ ಯಾವ ರೀತಿಯಲ್ಲಿ  ಆಗಲಿದೆ, ಚಾರ್ಲಿ ನಿಜಕ್ಕೂ 100 ದಿನ ಕಾಲಿಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ‘ಬಿಗ್ ಬಾಸ್’ ಸೀಸನ್ 10 ಎಂಬ ಕಾರಣಕ್ಕೆ ಅದ್ದೂರಿಯಾಗಿ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:08 pm, Sun, 24 September 23