AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅನುಬಂಧ ಅವಾರ್ಡ್ಸ್’ ರೆಡ್ ಕಾರ್ಪೆಟ್ ಮೇಲೆ ನಡೆದ ಸೆಲೆಬ್ರಿಟಿಗಳು ಇವರೇ ನೋಡಿ

‘ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ ಸ್ವೀಕರಿಸಿದ ಎಲ್ಲರಿಗೂ ಅಭಿನಂದನೆ. ಕಲರ್ಸ್ ಕನ್ನಡ ಟಿವಿ ಅವರಿಗೆ ಧನ್ಯವಾದ ಹೇಳುತ್ತೇನೆ’ ಎಂದರು ಸಿದ್ದರಾಮಯ್ಯ. ಜೊತೆಗೆ ಒಂದಷ್ಟು ಫನ್ ಆಟದಲ್ಲೂ ಸಿದ್ದರಾಮಯ್ಯ ಭಾಗವಹಿಸಿದ್ದರು. ಈ ಪ್ರೋಮೋಗಳು ವೈರಲ್ ಆಗುತ್ತಿವೆ.

‘ಅನುಬಂಧ ಅವಾರ್ಡ್ಸ್’ ರೆಡ್ ಕಾರ್ಪೆಟ್ ಮೇಲೆ ನಡೆದ ಸೆಲೆಬ್ರಿಟಿಗಳು ಇವರೇ ನೋಡಿ
ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Sep 22, 2023 | 2:04 PM

Share

ಹಲವು ವರ್ಷಗಳಿಂದ ಕಲರ್ಸ್ ಕನ್ನಡ ‘ಅನುಬಂಧ ಅವಾರ್ಡ್ಸ್’ (Anubandha Awards) ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಕಲರ್ಸ್ ಕನ್ನಡದ ಧಾರಾವಾಹಿ ತಂಡದವರಿಗೆ ಹಬ್ಬದ ವಾತಾವರಣ ನಿರ್ಮಾಣ ಆಗುತ್ತದೆ. ಮೊದಲೇ ಶೂಟ್ ಮಾಡಿಕೊಂಡು ಬಳಿಕ ಮೂರು ದಿನಗಳ ಕಾಲ ಇದನ್ನು ಪ್ರಸಾರ ಮಾಡಲಾಗುತ್ತದೆ. ಈ ಪದ್ಧತಿ ಮೊದಲಿನಿಂದಲೂ ರೂಢಿಯಲ್ಲಿದೆ. ಈ ಬಾರಿ 10ನೇ ವರ್ಷದ ಅವಾರ್ಡ್​ ಫಂಕ್ಷನ್. ಈ ಕಾರಣದಿಂದ ಸಖತ್ ಅದ್ದೂರಿಯಾಗಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಇಂದು (ಸೆಪ್ಟೆಂಬರ್ 22), ಶನಿವಾರ (ಸೆಪ್ಟೆಂಬರ್ 23) ಹಾಗೂ ಭಾನುವಾರ (ಸೆಪ್ಟೆಂಬರ್ 24) ‘ಅನುಬಂಧ ಅವಾರ್ಡ್ಸ್’ ಫಂಕ್ಷನ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣಲಿದೆ. ಇದರ ಝಲಕ್ ತೋರಿಸಲು ಪ್ರೋಮೋ ಹಂಚಿಕೊಳ್ಳಲಾಗುತ್ತಿದೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಹಲವು ಧಾರಾವಾಹಿಗಳು ಪ್ರಸಾರ ಕಾಣುತ್ತಿವೆ. ಒಂದೊಂದು ಧಾರಾವಾಹಿಯದ್ದು ಒಂದೊಂದು ರೀತಿಯ ಕಥೆ. ಎಲ್ಲರಲ್ಲೂ ಕುಟುಂಬದ ಭಾವನೆ ಮೂಡಿದೆ. ಈ ಕಾರಣದಿಂದಲೇ ಕಲರ್ಸ್ ಕನ್ನಡ ವಾಹಿನಿ ಪ್ರತಿ ವರ್ಷ ‘ಅನುಬಂಧ ಅವಾರ್ಡ್ಸ್’ ಆಯೋಜನೆ ಮಾಡುತ್ತದೆ. ಈ ವರ್ಷ ದಶಕದ ಸಂಭ್ರಮದಲ್ಲಿದೆ. ಹೀಗಾಗಿ ಸಾಕಷ್ಟು ಅದ್ದೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ.

ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕೇವಲ ಕಿರುತೆರೆಯವರಿಗೆ ಮಾತ್ರವಲ್ಲ, ಹಿರಿತೆರೆಯವರಿಗೂ ಆಹ್ವಾನ ಇದೆ. ರಮೇಶ್ ಅರವಿಂದ್, ಡಾರ್ಲಿಂಗ್ ಕೃಷ್ಣ, ನಾಗಭೂಷಣ, ಧ್ರುವ ಸರ್ಜಾ, ಡಾಲಿ ಧನಂಜಯ್, ಪ್ರಜ್ವಲ್ ದೇವರಾಜ್, ಅವರ ಪತ್ನಿ ರಾಗಿಣಿ ಚಂದ್ರನ್, ಅಭಿಷೇಕ್ ಅಂಬರೀಷ್, ಕೋಮಲ್ ಕುಮಾರ್, ರಾಕ್​ಲೈನ್ ವೆಂಕಟೇಶ್, ಲಹರಿ ವೇಲು, ತಾರಾ, ಚಿಕ್ಕಣ್ಣ, ಪ್ರೇಮ್ ಮೊದಲಾದವರು ಆಗಮಿಸಿದ್ದಾರೆ. ಅಷ್ಟೇ ಅಲ್ಲ, ಸಿಎಂ ಸಿದ್ದರಾಮಯ್ಯ ಕೂಡ ಕಾರ್ಯಕ್ರಮಕ್ಕೆ ಬಂದಿದ್ದರು.

‘ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ ಸ್ವೀಕರಿಸಿದ ಎಲ್ಲರಿಗೂ ಅಭಿನಂದನೆ. ಕಲರ್ಸ್ ಕನ್ನಡ ಟಿವಿ ಅವರಿಗೆ ಧನ್ಯವಾದ ಹೇಳುತ್ತೇನೆ’ ಎಂದರು. ಜೊತೆಗೆ ಒಂದಷ್ಟು ಫನ್ ಆಟದಲ್ಲೂ ಸಿದ್ದರಾಮಯ್ಯ ಭಾಗವಹಿಸಿದ್ದರು. ಈ ಪ್ರೋಮೋಗಳು ವೈರಲ್ ಆಗುತ್ತಿವೆ.

ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆದ ಅನೇಕರಿದ್ದಾರೆ. ಧಾರಾವಾಹಿ ಬಳಿಕ ಚಿತ್ರರಂಗದಲ್ಲಿ ಗುರುತಿಸಿಕೊಂಡವರೂ ಇದ್ದಾರೆ. ಈ ರೀತಿ ಕಲರ್ಸ್ ಕನ್ನಡದ ಮೂಲಕ ಫೇಮಸ್ ಆದವರು ವೇದಿಕೆಗೆ ಬಂದು ವಾಹಿನಿಗೆ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: ‘ಅನುಬಂಧ’ ವೇದಿಕೆ ಮೇಲೆ ‘ಮುಂಗಾರು ಮಳೆ’ ಮರು ಸೃಷ್ಟಿ; ಗಣೇಶ್ ಡೈಲಾಗ್​ಗೆ ಅಭಿಮಾನಿಗಳು ಖುಷ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ವರ್ಷ ‘ಅನುಬಂಧ ಅವಾರ್ಡ್ಸ್’ ಕಾರ್ಯಕ್ರಮ ಪ್ರಸಾರ ಕಾಣುತ್ತದೆ. ಅತ್ಯುತ್ತಮ ಅತ್ತೆ, ಅತ್ಯುತ್ತಮ ಸೊಸೆ ಹೀಗೆ ಹಲವು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಈ ಅವಾರ್ಡ್ ಕಾರ್ಯಕ್ರಮ ನೋಡಲು ವೀಕ್ಷಕರು ಕೂಡ ಕಾದು ಕೂತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ