AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೀತಾ ರಾಮ’ ಮಾತ್ರವಲ್ಲ ತೆಲುಗಿನ ಈ ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ ಗಗನ್ ಚಿನ್ನಪ್ಪ

ಗಗನ್ ಚಿನ್ನಪ್ಪ ಅವರು ಕಿರುತೆರೆ ಮೂಲಕ ಫೇಮಸ್ ಆದವರು. ಅವರು ಶಿಕ್ಷಣ ಮುಗಿಸಿದ ಬಳಿಕ ಕೆಲಸಕ್ಕೆ ಸೇರಿದರು. ಆದರೆ, ಪ್ಯಾಷನ್ ಅವರನ್ನು ಸೆಳೆಯಿತು. ಕಿರುತೆರೆ ಲೋಕಕ್ಕೆ ಅವರು ಕಾಲಿಟ್ಟರು. ಗಗನ್ ಅವರು ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ನವೆಂಬರ್ 14, 2022ರಿಂದ ಪ್ರಸಾರ ಆರಂಭಿಸಿದೆ.

‘ಸೀತಾ ರಾಮ’ ಮಾತ್ರವಲ್ಲ ತೆಲುಗಿನ ಈ ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ ಗಗನ್ ಚಿನ್ನಪ್ಪ
ಗಗನ್​ ಚಿನ್ನಪ್ಪ ತೆಲುಗು ಧಾರಾವಾಹಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 21, 2023 | 6:24 PM

Share

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಸೀತಾ ರಾಮ’ ಧಾರಾವಾಹಿ (Seetha Rama Serial) ಸಾಕಷ್ಟು ಗಮನ ಸೆಳೆಯುತ್ತಿದೆ. ಈ ಧಾರಾವಾಹಿಯಲ್ಲಿ ಗಗನ್ ಚಿನ್ನಪ್ಪ (Gagan Chinnappa), ವೈಷ್ಣವಿ ಗೌಡ, ರೀತು ಸಿಂಗ್, ಮುಖ್ಯಮಂತ್ರಿ ಚಂದ್ರು, ಅಶೋಕ್ ಮೊದಲಾದವರು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ಎಲ್ಲರ ಗಮನ ಸೆಳೆಯುತ್ತಿದೆ. ಈ ಧಾರಾವಾಹಿ ಕಥಾ ನಾಯಕ ಗಗನ್ ಚಿನ್ನಪ್ಪ ಅವರ ಪಾತ್ರ ಅನೇಕರಿಗೆ ಇಷ್ಟವಾಗುತ್ತಿದೆ. ಅವರು ತೆಲುಗಿನಲ್ಲೂ ಒಂದು ಧಾರಾವಾಹಿಯಲ್ಲಿ (Telugu Serial) ನಟಿಸುತ್ತಿದ್ದಾರೆ ಎನ್ನುವ ವಿಚಾರ ನಿಮಗೆ ಗೊತ್ತೇ? ಆ ಬಗ್ಗೆ ಇಲ್ಲಿದೆ ವಿವರ. ಗಗನ್ ಚಿನ್ನಪ್ಪ ಅವರು ಕಿರುತೆರೆ ಮೂಲಕ ಫೇಮಸ್ ಆದವರು. ಅವರು ಶಿಕ್ಷಣ ಮುಗಿಸಿದ ಬಳಿಕ ಕೆಲಸಕ್ಕೆ ಸೇರಿದರು. ಆದರೆ, ಪ್ಯಾಷನ್ ಅವರನ್ನು ಸೆಳೆಯಿತು. ಕಿರುತೆರೆ ಲೋಕಕ್ಕೆ ಅವರು ಕಾಲಿಟ್ಟರು. ‘ಮಂಗಳ ಗೌರಿ ಮದುವೆ’ ಅವರು ನಟಿಸಿದ ಮೊದಲ ಧಾರಾವಾಹಿ. ಈ ಧಾರಾವಾಹಿಯಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಅವರು ತೆಲುಗು ಕಿರುತೆರೆಗೂ ಕಾಲಿಟ್ಟರು.

ಗಗನ್ ಅವರು ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯ ಹೆಸರು ‘ಕೃಷ್ಣ ಮುಕುಂದ ಮುರಾರಿ’. ಈ ಧಾರಾವಾಹಿ ನವೆಂಬರ್ 14, 2022ರಿಂದ ಪ್ರಸಾರ ಆರಂಭಿಸಿದೆ. ಸ್ಟಾರ್ ಮಾ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8:30ಕ್ಕೆ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಗಗನ್ ಚಿನ್ನಪ್ಪ ಅವರು ಮುರಾರಿ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಪ್ರೇರಣಾ ಕಂಬಮ್, ಯಶ್ಮಿ ಗೌಡ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಪ್ರೀತಿ-ಪ್ರೇಮ ವಿಚಾರದಲ್ಲಿ ಮುಕ್ತವಾಗಿ ಮಾತನಾಡಿದ ಗಗನ್​ ಚಿನ್ನಪ್ಪ; ಆ ಸೀನಿಯರ್​ ಹುಡುಗಿ ಯಾರು?

ಗಗನ್ ಅವರಿಗೆ ತೆಲುಗು ಕಿರುತೆರೆಯಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಈ ಧಾರಾವಾಹಿ ಹೆಸರಲ್ಲಿ ಹಲವು ಫ್ಯಾನ್​ ಪೇಜ್​ಗಳು ಸೃಷ್ಟಿ ಆಗಿದ್ದು, ಸಾವಿರಾರು ಜನರು ಇದನ್ನು ಹಿಂಬಾಲಿಸುತ್ತಿದ್ದಾರೆ. ಗಗನ್ ಅವರನ್ನು ಅಲ್ಲಿಯವರು ಸಖತ್ ಇಷ್ಟಪಟ್ಟಿದ್ದಾರೆ. ಈ ಬಗ್ಗೆ ಅವರಿಗೆ ಖುಷಿ ಇದೆ. ಎರಡೂ ಧಾರಾವಾಹಿಯ ಶೂಟಿಂಗ್​ನ ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಗಗನ್ ಚಿನ್ನಪ್ಪ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 72 ಸಾವಿರ ಜನ ಹಿಂಬಾಲಕರಿದ್ದಾರೆ. ಅವರು ಧಾರಾವಾಹಿಯ ಪ್ರಮೋಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಅವರಿಗೆ ದಿನ ಕಳೆಂದಂತೆ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿದೆ.

Seetha Raama: ಸೀತಾ ರಾಮರ ನಡುವಿನ ವಿಷಯದಲ್ಲಿ ಅಶೋಕ್ ತೊಳಲಾಟ; ಪ್ರಿಯಾಗೆ ಪ್ರಾಣಸಂಕಟ!

ಸೀತಾ ರಾಮ ಧಾರಾವಾಹಿ ಕಥೆ ಏನು?

‘ಸೀತಾ ರಾಮ’ ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ರಾಮ (ಗಗನ್ ಚಿನ್ನಪ್ಪ) ದೊಡ್ಡ ಉದ್ಯಮ ಕುಟುಂಬದ ಹಿನ್ನೆಲೆಯವನು. ತಂದೆ-ತಾಯಿ ಇಬ್ಬರೂ ಮೃತಪಟ್ಟಿದ್ದಾರೆ. ತಾತ (ಮುಖ್ಯಮಂತ್ರಿ ಚಂದ್ರು) ಹಾಗೂ ಚಿಕ್ಕಮ್ಮನೇ (ಪೂಜಾ ಲೋಕೇಶ್) ಈತನಿಗೆ ಸರ್ವಸ್ವ. ವಿದೇಶದಲ್ಲಿ ಸೆಟಲ್ ಆಗಿರೋ ಈತ ಭಾರತಕ್ಕೆ ಬಂದಿದ್ದಾನೆ. ಇಲ್ಲಿ ಸೀತೆ (ವೈಷ್ಣವಿ ಗೌಡ) ಪರಿಚಯ ಆಗುತ್ತದೆ. ಆಕೆಗೆ ಸಿಹಿ (ರೀತು ಸಿಂಗ್) ಹೆಸರಿನ ಮಗಳೂ ಇದ್ದಾಳೆ. ಗಗನ್ ಹಾಗೂ ಸಿಹಿ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿದೆ. ಈ ಕಾರಣದಿಂದಲೇ ರಾಮನಿಗೆ ಸೀತೆ ಮತ್ತಷ್ಟು ಹತ್ತಿರ ಆಗುತ್ತಿದ್ದಾಳೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ