AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಟೋ ಶುಲ್ಕ ನೀಡದೆ ಕಿರುತೆರೆ ನಟಿಯ ಕಿರಿಕ್: ಅಳಲು ತೋಡಿಕೊಂಡ ಆಟೋ ಚಾಲಕ

Actress: ಪುನರ್​ವಿವಾಹ ಧಾರವಾಹಿ ನಟಿ ಪದ್ಮಿನಿ, ಆಟೋದಲ್ಲಿ ಪ್ರಯಾಣ ಮಾಡಿ 437 ರೂಪಾಯಿ ಬಿಲ್ ಮಾಡಿದ್ದಲ್ಲದೆ. ಆಟೋ ಚಾಲಕನ ಮೇಲೆ ಜಗಳ ಮಾಡಿಕೊಂಡು ಆಟೋದ ಹಣ ಕೊಡದೆ ಪರಾರಿಯಾಗಿದ್ದಾರೆ.

ಆಟೋ ಶುಲ್ಕ ನೀಡದೆ ಕಿರುತೆರೆ ನಟಿಯ ಕಿರಿಕ್: ಅಳಲು ತೋಡಿಕೊಂಡ ಆಟೋ ಚಾಲಕ
ನಟಿ ಪದ್ಮಿನಿ
Follow us
ಮಂಜುನಾಥ ಸಿ.
|

Updated on: Sep 24, 2023 | 11:04 AM

ಕಿರುತೆರೆ (Tv) ನಟಿ ಪದ್ಮಿನಿ ಆಟೊ ಚಾಲಕರೊಬ್ಬರ ವಿರುದ್ಧ ಅನವಶ್ಯಕ ವಾಗ್ವಾದ ಮಾಡಿದ್ದಲ್ಲದೆ, ಆಟೋ ಶುಲ್ಕ 437 ರೂಪಾಯಿ ಹಣ ನೀಡದೆ ಹೋಗಿದ್ದಾರೆ. ಈ ಬಗ್ಗೆ ಆಟೋ ಚಾಲಕ ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದಾರೆ. ಪುನರ್​ ವಿವಾಹ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿ ಪದ್ಮಿನಿ ಆಟೋ ಪ್ರಯಾಣ ಮಾಡಿ, ಆಟೋದ ಶುಲ್ಕ ನೀಡದೆ ಜಗಳ ಮಾಡಿಕೊಂಡು ಬೇರೆ ಆಟೋದಲ್ಲಿ ಪರಾರಿಯಾಗಿದ್ದಾರೆ.

ಮಲ್ಲೇಶ್ವರದ ಮಾರ್ಗೋಸಾ ರಸ್ತೆಯಿಂದ ಬನಶಂಕರಿಗೆ ಆಟೋ ಬುಕ್ ಮಾಡಿದ್ದ ಪದ್ಮಿನಿ ಮಾರ್ಗೋಸಾ ರಸ್ತೆಯಲ್ಲಿ ಕುಲ್ದೀಪ್ ಹೆಸರಿನ ಆಟೋ ಚಾಲಕರ ಆಟೋ ಏರಿದ್ದಾರೆ. ಆಟೋ ಏರಬೇಕಾದರೆ ಹೆಚ್ಚು ಹಣ ತೋರಿಸುತ್ತಿದೆ, ಕ್ಯಾನ್ಸಲೇಷನ್ ಚಾರ್ಜ್ ಸಹ ಹಾಕಿದ್ದಾರೆ ಇತ್ಯಾದಿಗಳನ್ನು ಗೊಣಗುತ್ತಲೇ ಆಟೋ ಏರಿದರಂತೆ ಪದ್ಮಿನಿ.

ಆಟೋದಲ್ಲಿ ಬನಶಂಕರಿಗೆ ಹೋಗುವಾಗ ದಾರಿಯಲ್ಲಿ ತುಸು ಟ್ರಾಫಿಕ್ ಎದುರಾಗಿದೆ. ಇದರಿಂದ ಆಟೋ ಚಾಲಕನ ಮೇಲೆ ಸಿಟ್ಟಾದ ಪದ್ಮಿನಿ. ಯಾಕೆ ಈ ರಸ್ತೆಯಲ್ಲಿ ಕರೆತಂದಿರಿ, ಟ್ರಾಫಿಕ್ ಹೆಚ್ಚಾಗಿದೆ. ನೀವು ಸರಿಯಾಗಿ ಗಾಡಿ ಓಡಿಸುತ್ತಿಲ್ಲ. ನನಗೆ ಲೇಟ್ ಆಗುತ್ತಿದೆ ಎಂದೆಲ್ಲ ಆಟೋ ಚಾಲಕನ ಮೇಲೆ ಜಗಳ ಮಾಡಿ, ನಾನು ಆಟೋ ಇಳಿದು ಹೋಗುತ್ತೇನೆ ಎಂದು ಚಕ್ಕನೆ ಆಟೋ ಇಳಿದು ಬೇರೆ ಆಟೋ ಹತ್ತಿದ್ದಾರೆ.

ಇದನ್ನೂ ಓದಿ:Shwetha Prasad: ಸೌದಿ ಅರೇಬಿಯಾದಲ್ಲಿ ‘ರಾಧಾ ರಮಣ’ ಧಾರಾವಾಹಿ ನಟಿ ಶ್ವೇತಾ ಪ್ರಸಾದ್ ಸೂಪರ್​ ಫೋಟೋಶೂಟ್​

ಕೂಡಲೇ ಆಟೋ ಚಾಲಕ, ತನ್ನ ಆಟೋ ಸೈಡಿಗೆ ಹಾಕಿ ಹಣ ಪಾವತಿಸುವಂತೆ ನಟಿಯನ್ನು ಕೇಳಿದ್ದಾನೆ. ಅಪ್ಲಿಕೇಶನ್ ಪ್ರಕಾರ, 437 ರೂಪಾಯಿ ಹಣವನ್ನು ನಟಿ ನೀಡಬೇಕಿತ್ತು. ಆದರೆ ಹಣ ಕೇಳಿದ ಆಟೋ ಚಾಲಕನ ಮೇಲೆ ಜಗಳ ಮಾಡಿರುವ ನಟಿ, ಹಣ ಕೊಡುವುದಿಲ್ಲ, ಏನು ಮಾಡಿಕೊಳ್ಳುತ್ತೀಯ? ನಾನು ಊಬರ್​ಗೆ ದೂರು ದಾಖಲಿಸುತ್ತೇನೆ ಎಂದು ಏರು ದನಿಯಲ್ಲಿ ಕೂಗಾಡಿ ಹೊರಟೇ ಹೋಗಿದ್ದಾರೆ. ಹಣ ಕೊಡದೆ ಹೋಗಿದ್ದಲ್ಲದೆ ನಟಿ ಸಹ ಆಟೋ ಚಾಲಕನ ವಿರುದ್ಧ ಊಬರ್​ನಲ್ಲಿ ದೂರು ದಾಖಲಿಸಿದ್ದಾರೆ. ನಟಿಯ ವಾಗ್ವಾದವನ್ನು ಆಟೋ ಚಾಲಕ ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಸಹ ಮಾಡಿಕೊಂಡಿದ್ದಾರೆ.

ನಟಿಯ ದುರ್ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನಟಿಯ ವರ್ತನೆ ಬಗ್ಗೆ ನೆಟ್ಟಿಗರು ಚೀಮಾರಿ ಹಾಕಿದ್ದಾರೆ. ಆಟೋ ಚಾಲಕ ಸಹ ನಟಿಯ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ