ಕಳೆದ ವಾರ ಮನೆಗೆ ಬಂದ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿಗಳು ಬಹಳ ಅಗ್ರೆಸ್ಸಿವ್ ಆಗಿ ಆಟ ಆಡುತ್ತಿದ್ದಾರೆ. ಶೋಭಾ ಹಾಗೂ ರಜತ್ ಅವರುಗಳು ವೈಲ್ಡ್ ಕಾರ್ಡ್ ಮೂಲಕ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ರಜತ್ ಅಂತೂ ತಾನು ಅತ್ಯಂತ ಅಗ್ರೆಸ್ಸಿವ್ ಎಂದು ಬಂದ ದಿನವೇ ತೋರಿಸಿದ್ದಾರೆ. ಅದರಂತೆ ಆಟ ಸಹ ಆಡುತ್ತಿದ್ದಾರೆ. ಆದರೆ ಈ ವಾರ ನಡೆದ ಟಾಸ್ಕ್ಗಳಲ್ಲಿ ಅವರು ತುಸು ಹೆಚ್ಚಾಗಿಯೇ ಅಗ್ರೆಸ್ಸಿವ್ ಆಗಿದ್ದಾರೆ. ಆದರೆ ಸುದೀಪ್ ಇಂದು ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ ವಾರ ನಡೆದ ಟಾಸ್ಕ್ನಲ್ಲಿ ರಜತ್ ತೀರಾ ಅಗ್ರೆಸ್ಸಿವ್ ಆಗಿ ಆಡಿದ್ದು, ಆಟಗಾರ ಸುರೇಶ್ ಅವರ ಬಗ್ಗೆ ಅವಾಚ್ಯ ಶಬ್ದ ಬಳಸಿದ್ದಾರೆ. ಈ ಹಿಂದೆ ಲಾಯರ್ ಜಗದೀಶ್ ಅವಾಚ್ಯ ಶಬ್ದಗಳನ್ನು ಬಳಸಿ ಮನೆಯಿಂದ ಹೊರಗೆ ಹೋಗಿದ್ದಾರೆ. ಆದರೆ ಈಗ ಮತ್ತೆ ಮನೆಯಲ್ಲಿ ಅವಾಚ್ಯ ಶಬ್ದಗಳು ಕೇಳಿ ಬಂದಿವೆ. ಇದೇ ಕಾರಣಕ್ಕೆ ರಜತ್ಗೆ ಕಳಪೆ ನೀಡಿ ಜೈಲಿಗೆ ಸಹ ಅಟ್ಟಲಾಗಿತ್ತು.
ಶನಿವಾರದ ಎಪಿಸೋಡ್ನಲ್ಲಿ ವಾರದ ಪಂಚಾಯಿತಿ ನಡೆಸಿಕೊಟ್ಟ ಸುದೀಪ್, ಸುರೇಶ್ ವಿರುದ್ಧ ಅವಾಚ್ಯ ಶಬ್ದ ಬಳಸಿದ ರಜತ್ಗೆ ಸಣ್ಣದಾಗಿ ಕ್ಲಾಸ್ ತೆಗೆದುಕೊಂಡರು. ಕನ್ನಡದಲ್ಲಿ ಹಲವಾರು ಮಾತುಗಳಿವೆ ಆದರೆ ಆ ಮಾತುಗಳನ್ನು ಏಕೆ ಬಳಸಿದಿರಿ ಎಂದು ಪ್ರಶ್ನೆ ಮಾಡಿದ ಸುದೀಪ್, ಅಂದು ಬಳಸಿದ ಮಾತುಗಳನ್ನು ಈಗ ಇಲ್ಲಿ ನನ್ನ ಎದುರು ಬಳಸಿ ನೋಡೋಣ’ ಎಂದು ಸವಾಲು ಹಾಕಿದರು. ‘ಕೋಪದಲ್ಲಿದ್ದಾಗ ಇದೇ ಭಾಷೆ ಬಳಸುವೆ ಅನ್ನುತ್ತೀರಿ, ಈ ಮನೆಯಲ್ಲಿ ಕೋಪ ಬರುವ ಸನ್ನಿವೇಶ ಸಾಕಷ್ಟು ಬರುತ್ತವೆ, ಆಗೆಲ್ಲ ಹೀಗೆಯೇ ಮಾತನಾಡುತ್ತೀರಾ’ ಎಂದರು.
ಇದನ್ನೂ ಓದಿ:ವೈಲ್ಡ್ ಕಾರ್ಡ್ ಮೂಲಕ ಬಿಗ್ಬಾಸ್ಗೆ ಎಂಟ್ರಿ ಕೊಟ್ಟ ಗ್ಲಾಮರ್ ಗೊಂಬೆ
‘ಅಂದು ಕೋಪದಲ್ಲಿ ಮಾತನಾಡಿದೆ ಮತ್ತೆ ಮಾತನಾಡುವುದಿಲ್ಲ’ ಎಂದು ರಜತ್ ಕ್ಷಮೆ ಕೇಳಿದರಾದರೂ, ಯಾರೇ ಆಗಲಿ ಸೋಲುತ್ತೀರಿ, ಗೆಲ್ಲುತ್ತೀರಿ, ಬಹಳ ಕಷ್ಟಪಟ್ಟು ಆಡುತ್ತಿದ್ದೀರಿ ಆದರೆ ಅವಾಚ್ಯ ಶಬ್ದ ಬಳಸಿ, ಜಗಳ ಮಾಡಿ, ಕೈ ಮಾಡಿ ಇಂಥಹಾ ಸಿಲ್ಲಿ ಕಾರಣಗಳಿಗೆ, ನಿಮ್ಮ ಗುಂಡಿಯನ್ನು ನೀವೇ ತೋಡಿಕೊಂಡು ಮನೆಯಿಂದ ಹೊರಗೆ ಹೋಗಬೇಡಿ’ ಎಂದು ಎಲ್ಲರಿಗೂ ಬುದ್ಧಿವಾದ ಹೇಳಿದರು ಸುದೀಪ್.
ಹೊರಗಡೆಯಿಂದ ಮನೆಗೆ ಬಂದ ರಜತ್, ‘ಶೋ ಟಿಆರ್ಪಿ ಚೆನ್ನಾಗಿದೆ. ಜನರಿಗೆ ಇದು ಇಷ್ಟ ಆಗ್ತಿದೆ, ಇದು ಇಷ್ಟ ಆಗ್ತಿಲ್ಲ’ ಎಂದು ಹೇಳಿದ್ದರು. ಇದರ ಬಗ್ಗೆ ಅಸಮಾಧಾನಗೊಂಡು ಮಾತನಾಡಿದ ಸುದೀಪ್, ಹೊರಗಡೆಯದ್ದು ಒಳಗೆ ಹೇಳಲಿ ಎಂದು ಕಳಿಸಿಕೊಟ್ಟಿದ್ದಾ ಎಂದು ಕೇಳಿದರು. ಅದಕ್ಕೆ ರಜತ್ ಮತ್ತೊಮ್ಮೆ ರಿಪೀಟ್ ಮಾಡಲ್ಲ ಎಂದರು. ಅದಕ್ಕೆ ಸುದೀಪ್, ಮತ್ತೆ ಹಾಗೆ ಮಾಡಿದರೆ ಬಾಗಿಲು ತೆಗೆದು ಹೊರಗೆ ಕಳಿಸುತ್ತೇನೆ. ಬಾಗಿಲಿನ ಒಂದು ಕೀ ನನ್ನ ಹತ್ತಿರ ಇದೆ’ ಎಂದು ಎಚ್ಚರಿಕೆ ಕೊಟ್ಟರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ