ಬಿಗ್ ಬಾಸ್ ಮನೆಗೆ ಮಂಜ ರೀ ಎಂಟ್ರಿ: ವೈಲ್ಡ್ ಕಾರ್ಡ್ ಸ್ಪರ್ಧಿ ಅಲ್ಲ, ಕಪ್ ಕೂಡ ಸಿಗಲ್ಲ

ಈ ಮೊದಲು ಮಂಜ ಬಿಗ್ ಬಾಸ್ ಆಟದಿಂದ ಔಟ್ ಆದಾಗ ಕೆಲವು ಸ್ಪರ್ಧಿಗಳು ಖುಷಿಪಟ್ಟಿದ್ದರು. ಆದರೆ ಈಗ ಅವರು ಮತ್ತೆ ದೊಡ್ಮನೆ ಒಳಗೆ ಕಾಲಿಟ್ಟಿರುವುದರಿಂದ ಎಲ್ಲರಿಗೂ ಅಚ್ಚರಿ ಆಗಲಿದೆ. ದೀಪಾವಳಿ ಎಂಬ ಕಾರಣಕ್ಕೆ ಈ ವಾರ ಯಾರೂ ಕೂಡ ಎಲಿಮಿನೇಟ್ ಆಗಿಲ್ಲ. ಆ ಸಿಹಿ ಸುದ್ದಿಯ ನಡುವೆ ಖಾರದ ರೀತಿಯಲ್ಲಿ ಮಂಜನ ರೀ-ಎಂಟ್ರಿ ಆಗಿದೆ.

ಬಿಗ್ ಬಾಸ್ ಮನೆಗೆ ಮಂಜ ರೀ ಎಂಟ್ರಿ: ವೈಲ್ಡ್ ಕಾರ್ಡ್ ಸ್ಪರ್ಧಿ ಅಲ್ಲ, ಕಪ್ ಕೂಡ ಸಿಗಲ್ಲ
Manja
Image Credit source: Colors Kannada

Updated on: Nov 08, 2026 | 10:56 PM

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋಗೆ ಮಾಡರ್ನ್ ಮಹಾಕವಿ ಮಂಜ ವಾಪಸ್ ಬಂದಿದ್ದಾರೆ. ಇದರಿಂದಾಗಿ ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ಖಂಡಿತ ಶಾಕ್ ಆಗಲಿದೆ. ಯಾಕೆಂದರೆ, ಈ ಮೊದಲು ಮಂಜ ಅವರು ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಮೇಲೆ ನಾಲಿಗೆ ಹರಿಬಿಟ್ಟು, ಅಶ್ಲೀಲ ಮಾತುಗಳನ್ನು ಆಡಿದ್ದರು. ಆ ಕಾರಣದಿಂದಲೇ ಅವರನ್ನು ಮನೆಯಿಂದ ಹೊರಗೆ ಕಳಿಸಲಾಗಿತ್ತು. ಅಂಥ ವ್ಯಕ್ತಿಗೆ ಈಗ 2ನೇ ಅವಕಾಶ ನೀಡಲಾಗಿದೆ. ಆದ್ದರಿಂದ ಸಹಜವಾಗಿಯೇ ಎಲ್ಲರಿಗೂ ಅಚ್ಚರಿ ಆಗಲಿದೆ.

ಮಂಜ ಅವರು ಇಷ್ಟು ದಿನಗಳ ಕಾಲ ಬಿಗ್ ಬಾಸ್ ಮನೆಯಿಂದ ಹೊರಗೆ ಇದ್ದು ಶೋ ನೋಡಿದ್ದಾರೆ. ಹೊರಗಡೆ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಂಡಿದ್ದಾರೆ. ಹಾಗಾಗಿ ಅವರನ್ನು ಸ್ಪರ್ಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಹಾಗಾಗಿ ಅವರಿಗೆ ಕಪ್ ಗೆಲ್ಲುವ ಅವಕಾಶ ಇಲ್ಲ. ಕೇವಲ ಒಂದು ಜರ್ನಿ ರೀತಿಯಲ್ಲಿ ಅವರಿಗೆ ಅವಕಾಶ ನೀಡಲಾಗಿದೆ.

Loading...

ಮಾನವೀಯತೆಯ ದೃಷ್ಟಿಯಿಂದ ಮಂಜ ಅವರಿಗೆ ಈ ಅವಕಾಶ ಕೊಡಲಾಗಿದೆ. ಜೀವನಪೂರ್ತಿ ಕೆಟ್ಟ ಹೆಸರಿನಿಂದ ಬದುಕುವುದು ಬೇಡ. ಬದಲಾಗಲು ಒಂದು ಅವಕಾಶ ಇರಲಿ ಎಂಬ ಕಾರಣಕ್ಕೆ ಮಂಜ ಅವರನ್ನು ಮತ್ತೆ ಬಿಗ್ ಬಾಸ್ ಮನೆಯೊಳಗೆ ಕಳಿಸಲಾಗಿದೆ ಎಂದು ಸುದೀಪ್ ಅವರು ಹೇಳಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಮತ್ತೆ ತಪ್ಪು ಮಾಡಬಾರದು ಎಂದು ಸುದೀಪ್ ಅವರು ಮಂಜನಿಗೆ ಕಿವಿಮಾತು ಹೇಳಿದ್ದಾರೆ.

ಈ ಎರಡನೇ ಅವಕಾಶದಲ್ಲಿ ಮಂಜ ಸ್ಪರ್ಧಿ ಅಲ್ಲ. ವೈಲ್ಡ್ ಕಾರ್ಡ್ ಎಂಟ್ರಿ ಕೂಡ ಅಲ್ಲ. ಆದರೆ ಈ ವಿಷಯ ಬಿಗ್ ಬಾಸ್ ಮನೆಯೊಳಗೆ ಇರುವ ಸ್ಪರ್ಧಿಗಳಿಗೆ ತಿಳಿದಿಲ್ಲ. ಅದನ್ನು ಮಂಜ ಸಹ ಬಹಿರಂಗಪಡಿಸುವಂತಿಲ್ಲ. ಆ ಒಪ್ಪಂದದ ಮೇರೆಗೆ ಅವರನ್ನು ಬಿಗ್ ಬಾಸ್ ಮನೆಗೆ ಕಳಿಸಲಾಗಿದೆ. ಮಂಜ ಅವರ ವ್ಯಕ್ತಿತ್ವ ಬದಲಾಗಿದೆಯಾ ಅಥವಾ ಅವರು ಮತ್ತೆ ಮೊದಲಿನಂತೆ ವರ್ತಿಸುತ್ತಾರಾ ಎಂಬುದನ್ನು ನೋಡಲು ಪ್ರೇಕ್ಷಕರು ಕಾದಿದ್ದಾರೆ.

ಇದನ್ನೂ ಓದಿ: ‘ಯಶಸ್​ಗೆ ಆಸಿಯಾ ರಾಖಿ ಕಟ್ಟಿದ್ದು ಗಿಮಿಕ್’ ; ಬಿಗ್ ಬಾಸ್ ಮನೆಯಲ್ಲಿ ನಿಷ್ಠುರದ ಅಭಿಪ್ರಾಯ

ಒಂದು ವೇಳೆ ಮಂಜ ಮತ್ತೆ ಮೊದಲಿನ ವರ್ತನೆ ಮುಂದುವರಿಸಿದರೆ ಅವರಿಗೆ ಪುನಃ ಗೇಟ್ ಪಾಸ್ ನೀಡಲಾಗುತ್ತದೆ. ಅಸಭ್ಯ ಭಾಷೆ ಬಳಸಿದರೆ ಕೂಡಲೇ ರೆಡ್ ಕಾರ್ಡ್ ತೋರಿಸಿ ಬಿಗ್ ಬಾಸ್ ಆಟದಿಂದ ಹೊರಕ್ಕೆ ಹಾಕಲಾಗುತ್ತದೆ. ಈ ಬಗ್ಗೆ ಸುದೀಪ್ ಅವರು ನೇರವಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಮತ್ತೆ ತಪ್ಪು ಮಾಡುವುದಿಲ್ಲ ಎಂಬ ಭರವಸೆಯನ್ನು ನೀಡಿ ಮಂಜ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us