
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಈ ವಾರದ (ಅ.20) ನಾಮಿನೇಷನ್ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಬಾರಿ ಡಿಫರೆಂಟ್ ಆಗಿ ನಾಮಿನೇಷನ್ ಪ್ರಕ್ರಿಯೆ ನಡೆಸಲಾಯಿತು. ಬೇರೆ ಸ್ಪರ್ಧಿಗಳ ಬೆಂಬಲದಿಂದ ತಾವು ಸೇಫ್ ಆಗಬೇಕಿತ್ತು. ಅದಕ್ಕಾಗಿ ಸ್ಪರ್ಧಿಗಳು ವಿವಿಧ ಬಗೆಯ ತಂತ್ರಗಾರಿಕೆ ಮಾಡಿದರು. ಆದರೆ ಯಾವುದೂ ಉಪಯೋಗಕ್ಕೆ ಬರಲಿಲ್ಲ. ಕೆಲವರ ಲೆಕ್ಕಾಚಾರ ಕೈ ಕೊಟ್ಟಿತು. ಈ ವಾರ ಎಲಿಮಿನೇಟ್ ಆಗಲು ಆರು ಸ್ಪರ್ಧಿಗಳನ್ನು ನಾಮಿನೇಟ್ ಮಾಡಲಾಗಿದೆ.
ಸೋನಿಕಾ ಗೌಡ, ಆಸಿಯಾ, ತಾಂಡವ್ ರಾಮ್, ಸೌಂದರ್ಯಾ ಶೆಟ್ಟಿ, ಕುಮಾರಿ, ಲಕ್ಷ್ಮಿ ಗೌಡ ಅವರು ನಾಮಿನೇಟ್ ಆಗಿದ್ದಾರೆ. ನಾಮಿನೇಟ್ ಆಗಿರುವ ಸದಸ್ಯರು ಬಿಗ್ ಬಾಸ್ ನೀಡುವ ಮುಂದಿನ ಆದೇಶದ ತನಕ ಕಾರಾಗೃಹದಲ್ಲಿ ಇರಬೇಕು ಎಂದು ತಿಳಿಸಲಾಗಿದೆ. ಕೈದಿಗಳ ರೀತಿ ಬಟ್ಟೆ ಕೊಟ್ಟು ಈ ಸ್ಪರ್ಧಿಗಳನ್ನು ಜೈಲಿಗೆ ಕಳಿಸಲಾಗಿದೆ.
ತಾವು ನಾಮಿನೇಟ್ ಆಗಿದ್ದಕ್ಕೆ ಆಸಿಯಾ ಅವರು ತುಂಬಾ ಬೇಸರ ಮಾಡಿಕೊಂಡರು. ‘ಕಳೆದ ವಾರ ಕೂಡ ನನಗೆ ಹೀಗೆಯೇ ಆಯಿತು’ ಎಂದು ಅವರು ಕಣ್ಣೀರು ಹಾಕಿದರು. ‘ಆದರೆ ಜನರು ನನ್ನ ಆಟ ನೋಡುತ್ತಾರೆ’ ಎಂದು ಅವರು ಭರವಸೆ ಕೂಡ ವ್ಯಕ್ತಪಡಿಸಿದರು. ಈ ವಾರ ಅವರು ಸೇಫ್ ಆಗುತ್ತಾರಾ ಅಥವಾ ಎಲಿಮಿನೇಟ್ ಆಗುತ್ತಾರಾ ಎಂಬುದನ್ನು ತಿಳಿಯುವ ಕೌತುಕ ಮನೆ ಮಾಡಿದೆ.
ಕುಮಾರಿ ಮತ್ತು ಲಕ್ಷ್ಮಿ ಗೌಡ ಅವರು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಬಂದವರು. ತಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸಲು ಅವರಿಗೆ ಇನ್ನೂ ಸೂಕ್ತವಾಗಿ ಸಮಯವೇ ಸಿಕ್ಕಿಲ್ಲ. ಈಗ ಅವರು ನಾಮಿನೇಟ್ ಆಗಿರುವುದರಿಂದ ಅವರು ಡೇಜಂರ್ ಝೋನ್ನಲ್ಲಿ ಇದ್ದಾರೆ. ಹಾಗಾಗಿ ಅವರಿಗೆ ಢವಢವ ಶುರುವಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯ ಮೈಕ್ ಬೆಲೆ ಹೇಳಿದ ಸುದೀಪ್; ಈ ಪ್ರೈಸ್ನಲ್ಲಿ ಬುಲೆಟ್ ಬೈಕ್ ಬರುತ್ತೆ
ಸೋನಿಕಾ ಕೂಡ ವೈಲ್ಡ್ ಕಾರ್ಡ್ ಸ್ಪರ್ಧಿ. ಅವರ ಆಟದ ಬಗ್ಗೆಯೂ ಕೆಲವು ಸ್ಪರ್ಧಿಗಳಿಗೆ ಅಸಮಾಧಾನ ಇದೆ. ಒಂದು ವೇಳೆ ಪ್ರೇಕ್ಷಕರಿಗೂ ಇದೇ ಅಭಿಪ್ರಾಯ ಹೆಚ್ಚಿದರೆ ಅವರು ಬಿಗ್ ಬಾಸ್ ಮನೆಯಿಂದ ಔಟ್ ಆಗುವ ಸಾಧ್ಯತೆ ಇರುತ್ತದೆ. ಇನ್ನು, ಸೌಂದರ್ಯಾ ಶೆಟ್ಟಿ ಅವರು ಈಗತಾನೇ ತಮ್ಮ ಅಸಲಿ ಆಟ ಆರಂಭಿಸಿದ್ದಾರೆ. ಆದರೂ ಅವರ ಸ್ಥಾನ ಕೂಡ ಅಪಾಯದಲ್ಲೇ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.