ತ್ರಿವಿಕ್ರಮ್, ಚೈತ್ರಾ ಕುಂದಾಪುರಗೆ ಕಿಚ್ಚ ಸುದೀಪ್ ಕ್ಲಾಸ್

|

Updated on: Dec 22, 2024 | 11:32 AM

Bigg Boss Kannada: ಕಿಚ್ಚ ಸುದೀಪ್ ಶನಿವಾರದ ಎಪಿಸೋಡ್​ನಲ್ಲಿ ಹಲವು ಸ್ಪರ್ಧಿಗಳ ಆಟ, ಮಾತು, ನಡೆಗಳನ್ನು ಪ್ರಶ್ನೆ ಮಾಡಿದರು. ತ್ರಿವಿಕ್ರಮ್ ಹಾಗೂ ಚೈತ್ರಾ ಕುಂದಾಪುರ ಈ ವಾರ ಆಡಿದ ರೀತಿಯನ್ನು ವಿಶೇಷವಾಗಿ ಟೀಕೆ ಮಾಡಿದರು. ತ್ರಿವಿಕ್ರಮ್ ಈ ವಾರ ಉತ್ತಮ ಪಡೆದುಕೊಂಡರೂ ಸಹ ಸುದೀಪ್​ರ ಟೀಕೆಗೆ ಗುರಿಯಾದರು.

ತ್ರಿವಿಕ್ರಮ್, ಚೈತ್ರಾ ಕುಂದಾಪುರಗೆ ಕಿಚ್ಚ ಸುದೀಪ್ ಕ್ಲಾಸ್
Bigg Boss Kannada
Follow us on

ಬಿಗ್​ಬಾಸ್ ಶನಿವಾರದ ಎಪಿಸೋಡ್​ ಎಂದಿನಂತೆ ಕಿಚ್ಚ ಸುದೀಪ್ ಮನೆ ಮಂದಿಯ ತಪ್ಪುಗಳನ್ನು ಎತ್ತಿ ತೋರಿಸಿದರು. ಕೆಲವರ ಮಾತು, ನಡೆಯನ್ನು ಟೀಕೆ ಮಾಡಿದರು. ಹನುಮಂತ ಹಾಗೂ ಇನ್ನು ಕೆಲವರಿಗೆ ಕಟು ಪದದಲ್ಲಿ ಎಚ್ಚರಿಕೆ ನೀಡಿದರು. ವಿಶೇಷವಾಗಿ ಚೈತ್ರಾ ಕುಂದಾಪುರ, ಹನುಮಂತು ಮತ್ತು ಈ ವಾರದ ಉತ್ತಮ ಎನಿಸಿಕೊಂಡಿರುವ ತ್ರಿವಿಕ್ರಮ್ ಸಹ ಸುದೀಪ್​ರಿಂದ ಟೀಕೆ ಎದುರಿಸಿದರು. ತ್ರಿವಿಕ್ರಮ್​ಗಂತೂ ನೀವು ಯಾಕೋ ತ್ಯಾಗರಾಜ ಆಗುತ್ತಿದ್ದೀರಿ ಎಂದ ಸುದೀಪ್ ಪರೋಕ್ಷವಾಗಿ ಮನೆಯಿಂದ ಹೊರಗೆ ಹೋಗಬೇಕಾಗುತ್ತದೆ ಎಂಬ ಸುಳಿವು ನೀಡಿದಂತಿತ್ತು.

ತ್ರಿವಿಕ್ರಮ್ ಕಳೆದ ವಾರ ಚೆನ್ನಾಗಿಯೇ ಆಡಿದ್ದರು. ಆದರೆ ತಮ್ಮ ತಂಡದ ಇತರರು ಬಹಳ ಚೆನ್ನಾಗಿ ಆಡಿದ್ದಾರೆ ಹಾಗಾಗಿ ತಮ್ಮನ್ನು ತಾವೇ ನಾಮಿನೇಟ್ ಮಾಡಿಕೊಂಡರು. ಆದರೆ ಇದನ್ನು ಬಿಗ್​ಬಾಸ್​ ಒಪ್ಪಲಿಲ್ಲ. ಕೊನೆಗೆ ಮನೆಯ ಇತರೆ ಸದಸ್ಯರ ಬಳಿ ಮನವಿ ಮಾಡಿಕೊಂಡು ಎಲ್ಲರೂ ತಮ್ಮನ್ನೆ ನಾಮಿನೇಟ್ ಮಾಡಿರೆಂದು ಹೇಳಿದರು. ಕೊನೆಗೆ ಎಲ್ಲರೂ ತ್ರಿವಿಕ್ರಮ್ ಹೆಸರು ತೆಗೆದುಕೊಂಡ ಕಾರಣ ಅವರು ನಾಮಿನೇಟ್ ಆದರು.

ಇದರ ಬಗ್ಗೆ ಮಾತನಾಡಿದ ಸುದೀಪ್, ‘ನೀವು ತ್ಯಾಗರಾಜ ರೀತಿ ಕಾಣ್ತಾ ಇದೀರಾ’ ಎಂದ ಸುದೀಪ್, ನಿಮಗಾಗಿ ನೀವು ಆಡಿ ಎಂದರು. ಇಂಥಹಾ ‘ತ್ಯಾಗಗಳು’ ನೋಡಲು ಸೂಕ್ತವಾಗಿ ಕಾಣುವುದಿಲ್ಲ. ಹೀರೋ ಆಗುವ ಭ್ರಮೆಯಲ್ಲಿ ಮಾಡುವ ಇಂಥಹಾ ತ್ಯಾಗಗಳು ನಿಮ್ಮನ್ನು ವೀಕ್ ಆಗಿರುವಂತೆ ಬಿಂಬಿಸುತ್ತವೆ ಎಂದರು. ಅಲ್ಲದೆ ಇದೇ ಕಾರಣಕ್ಕೆ (ನಾಮಿನೇಟ್) ನೀವು ಹೊರಗೆ ಹೋಗುವ ಸಾಧ್ಯತೆಯೂ ಇದೆ ಎಂದು ಪರೋಕ್ಷವಾಗಿ ಹೇಳಿದರು.

ಇದನ್ನೂ ಓದಿ:ಬಿಗ್​ಬಾಸ್ ಕನ್ನಡ: ಈ ಬಾರಿ ಯಾರಿಗೆ ಸಿಕ್ತು ಕಿಚ್ಚನ ಚಪ್ಪಾಳೆ?

ಇನ್ನು ಚೈತ್ರಾ ಕುಂದಾಪುರ ಅವರಿಗಂತೂ ಸುದೀಪ್ ತುಸು ಖಾರವಾಗಿಯೇ ಮಾತನಾಡಿದರು. ಚೈತ್ರಾ ಕುಂದಾಪುರ ಕಳೆದ ವಾರ ಟಾಸ್ಕ್​ ಒಂದಕ್ಕೆ ಉಸ್ತುವಾರಿ ಆಗಿದ್ದರು. ಆ ಟಾಸ್ಕ್​ ಅನ್ನು ಎಷ್ಟು ಸಾಧ್ಯವೋ ಅಷ್ಟು ಕೆಟ್ಟದಾಗಿ ನಡೆಸಿಕೊಟ್ಟರು. ತಾವು ಹೇಳಿದ್ದೆ ಆಗಬೇಕು ಎನ್ನುವ ಉಮೇದಿನಲ್ಲಿ ತಪ್ಪು ನಿರ್ಣಯಗಳು, ಪೂರ್ವಾಗ್ರಹಪೀಡಿತ ನಿರ್ಣಯಗಳನ್ನು ನೀಡಿದರು. ಇದರಿಂದ ಆಟವೇ ರದ್ದಾಗಿ ಹೋಯ್ತು. ಈ ವಿಷಯದ ಬಗ್ಗೆ ಮಾತನಾಡಿದ ಸುದೀಪ್, ‘ನಿಮ್ಮ ಉಸ್ತುವಾರಿ ಹೇಸಿಗೆ ಅನಿಸಿತು’ ಎಂದು ನೇರವಾಗಿಯೇ ಹೇಳಿದರು.

ಇಂದು ಭಾನುವಾರದ ಎಪಿಸೋಡ್​ನಲ್ಲಿ ಎಲಿಮಿನೇಷನ್ ಇದ್ದು, ತ್ರಿವಿಕ್ರಮ್ ಅಥವಾ ಚೈತ್ರಾ ಇಬ್ಬರಲ್ಲಿ ಒಬ್ಬರು ಮನೆಯಿಂದ ಹೊರಗೆ ಹೋಗಲಿದ್ದಾರೆ ಎನ್ನಲಾಗುತ್ತಿದೆ. ಚೈತ್ರಾ ಅವರೇ ಮನೆಯಿಂದ ಹೊರಗೆ ಹೋಗಬೇಕು ಎಂದು ಮನೆ ಮಂದಿ ಹೇಳುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:16 am, Sun, 22 December 24