ಬಾಗಿಲು ತೆಗೆದು ತ್ರಿವಿಕ್ರಂನ ಹೊರಕ್ಕೆ ಕಳುಹಿಸಿದ ಬಿಗ್ ಬಾಸ್; ಭವ್ಯಾ ಕಣ್ಣೀರ ಧಾರೆ
ಬಿಗ್ ಬಾಸ್ ಕನ್ನಡದಲ್ಲಿ ತ್ರಿವಿಕ್ರಂ ಅವರನ್ನು ಹೊರಕ್ಕೆ ಕಳುಹಿಸಲಾಗಿದೆ. ಇದು ಎಲ್ಲರನ್ನೂ ಆಘಾತಕ್ಕೀಡು ಮಾಡಿತು. ಭವ್ಯಾ ಅವರು ಗಳಗಳನೆ ಅಳುತ್ತಿದ್ದರು. ತಮ್ಮ ತಂಡವನ್ನು ಉಳಿಸಲು ತ್ರಿವಿಕ್ರಂ ತಮ್ಮನ್ನು ತಾವೇ ನಾಮಿನೇಟ್ ಮಾಡಿಕೊಂಡಿದ್ದರು. ಈ ಘಟನೆಯು ದೊಡ್ಡಮನೆಯಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಯಿತು. ಆದರೆ, ಇಲ್ಲಿ ಒಂದು ಟ್ವಿಸ್ಟ್ ಇರಲಿದೆ.
ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಂ ಅವರು ಫಿನಾಲೆ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಅವರು ಉತ್ತಮವಾಗಿ ಆಟ ಆಡುತ್ತಿದ್ದಾರೆ. ಅವರ ಆಟ ಅನೇಕರಿಗೆ ಇಷ್ಟ ಆಗಿದೆ. ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿ ಆಗಿದೆ. ಆದರೆ, ಈಗ ಅವರು ದೊಡ್ಮನೆಯ ಬಾಗಿಲ ದಾಟಿ ಹೊರ ಬಂದಿದ್ದಾರೆ. ಹಾಗಂತ ಅವರು ಎಲಿಮಿನೇಟ್ ಆದರು ಎಂದಲ್ಲ. ಈ ವಾರ ಎಲಿಮಿನೇಷನ್ ಡ್ರಾಮಾ ನಡೆದಿದೆ. ಅದರ ಭಾಗವಾಗಿ ಈ ಪ್ರಕ್ರಿಯೆ ನಡೆದಿದೆ. ತ್ರಿವಿಕ್ರಂ ನಿಜಕ್ಕೂ ಎಲಿಮಿನೇಟ್ ಆದರು ಎಂದು ಭಾವಿಸಿದ ಭವ್ಯಾ ಅವರು ಗಳಗಳನೆ ಕಣ್ಣೀರು ಹಾಕಿದರು.
ಈ ವಾರ ತ್ರಿವಿಕ್ರಂ ಅವರನ್ನು ತಮ್ಮನ್ನು ತಾವೇ ನಾಮಿನೇಟ್ ಮಾಡಿಕೊಂಡಿದ್ದರು. ತಮ್ಮ ತಂಡದವರನ್ನು ಉಳಿಸಲು ಹೋಗಿ ಅವರು ಈ ರೀತಿ ಮಾಡಿದ್ದರು. ಈ ಬಗ್ಗೆ ಸುದೀಪ್ ಅವರು ಎಚ್ಚರಿಕೆ ಕೂಡ ನೀಡಿದ್ದರು. ಆದರೆ, ತ್ರಿವಿಕ್ರಂ ಅವರಿಗೆ ತಾವು ಇದ್ದೇ ಇರುತ್ತೇವೆ ಎನ್ನುವ ಓವರ್ಕಾನ್ಫಿಡೆನ್ಸ್ ಇತ್ತು. ಅದನ್ನು ಬ್ರೇಕ್ ಮಾಡಬೇಕು ಎನ್ನುವ ಕಾರಣಕ್ಕೆ ಈ ವಾರ ಎಲಿಮಿನೇಷನ್ ಡ್ರಾಮಾ ಮಾಡಲಾಗಿದೆ.
ಈ ವಾರ ಯಾವುದೇ ವೋಟಿಂಗ್ ಲೈನ್ ತೆರೆದಿರಲಿಲ್ಲ. ಆದಾಗ್ಯೂ ಎಲಿಮಿನೇಷನ್ ಪ್ರಕ್ರಿಯೆ ನಡೆಸಲಾಯಿತು. ಅಂತಿಮವಾಗಿ ತ್ರಿವಿಕ್ರಂ ಅವರು ದೊಡ್ಮನೆಯಿಂದ ಹೊರ ಹೋಗುತ್ತಿದ್ದಾರೆ ಎಂದು ಸುದೀಪ್ ಘೋಷಣೆ ಮಾಡಿದರು. ‘ನಿಮಗೆ ನನ್ನ ಜೊತೆ ಬಂದು ಸೇರಲು ಐದು ನಿಮಿಷ ಕಾಲಾವಕಾಶ ಇದೆ’ ಎಂದರು ಕಿಚ್ಚ. ಎಲ್ಲರೂ ಇದು ಪ್ರ್ಯಾಂಕ್ ಇರಬಹುದು ಎಂದುಕೊಂಡಿದ್ದರು. ತ್ರಿವಿಕ್ರಂ ಕೂಡ ಹಾಗೆಯೇ ಅಂದುಕೊಂಡಂತೆ ಇತ್ತು. ಆದರೆ, ಹಾಗಾಗಲಿಲ್ಲ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ದೆವ್ವ ನೋಡಿ ಚೈತ್ರಾ ಕುಂದಾಪುರಗೆ ಬಂತು ಚಳಿ-ಜ್ವರ
ಬಿಗ್ ಬಾಸ್ ಗಾರ್ಡನ್ ಏರಿಯಾಗೆ ಬರುತ್ತಿದ್ದಂತೆ ಮುಖ್ಯದ್ವಾರ ಓಪನ್ ಆಯಿತು. ಅದರಿಂದ ಹೊರಕ್ಕೂ ಹೋದರು. ಆಗ ಭವ್ಯಾ ಗೌಡ ಅವರು ಅಳೋಕೆ ಆರಂಭಿಸಿದರು. ಇದು ಅವರಿಗೆ ಸಾಕಷ್ಟು ಶಾಕಿಂಗ್ ಎನಿಸಿತು. ಗೆಲ್ಲಬೇಕಿದ್ದ ಸ್ಪರ್ಧಿ ಈ ರೀತಿ ಎಲಿಮಿನೇಟ್ ಆದರಲ್ಲ ಎಂದು ಎಲ್ಲರೂ ಶಾಕ್ ಆದರು. ಈ ಬಗ್ಗೆ ದೊಡ್ಮನೆ ಒಳಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಇಂದು (ಡಿಸೆಂಬರ್ 23) ತ್ರಿವಿಕ್ರಂ ಮರಳಿ ದೊಡ್ಮನೆ ಸೇರಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.