‘ಈ ಗಾಂಚಲಿ ನಮ್ಮತ್ರ ಬೇಡಮ್ಮ’: ಹನುಮಂತಗೆ ಮೊದಲ ಬಾರಿ ಸುದೀಪ್ ಕ್ಲಾಸ್

| Updated By: ಮಂಜುನಾಥ ಸಿ.

Updated on: Dec 22, 2024 | 7:19 AM

Bigg Boss Kannada: ಶನಿವಾರದ ಎಪಿಸೋಡ್​ನಲ್ಲಿ ಕಿಚ್ಚ ಸುದೀಪ್ ಮನೆಯ ಹಲವು ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡರು. ಅದರಲ್ಲೂ ಹನುಮಂತುಗೆ ಕೆಲವು ಎಚ್ಚರಿಕೆಗಳನ್ನು ಕೊಟ್ಟರು. ಇನ್ನೊಮ್ಮೆ ಹಾಗೆ ಮಾತನಾಡಿದ್ರೆ ಎಷ್ಟೇ ವೋಟ್ ಬಿದ್ದಿದ್ದರೂ ಸಹ ಹೊರಗೆ ಕಳಿಸೋ ಜವಾಬ್ದಾರಿ ನನ್ನದು ಎಂದು ಎಚ್ಚರಿಕೆ ಕೊಟ್ಟರು ಸುದೀಪ್.

‘ಈ ಗಾಂಚಲಿ ನಮ್ಮತ್ರ ಬೇಡಮ್ಮ’: ಹನುಮಂತಗೆ ಮೊದಲ ಬಾರಿ ಸುದೀಪ್ ಕ್ಲಾಸ್
Hanumantha (1)
Follow us on

ಬಿಗ್ ಬಾಸ್ ಮನೆಯಲ್ಲಿ ಹನುಮಂತ ಅವರನ್ನು ಸುದೀಪ್ ಸದಾ ಹೊಗಳುತ್ತಾ ಬರುತ್ತಿದ್ದರು. ಅವರ ಮಾತಿಗೆ ಮೆಚ್ಚುಗೆ ಸೂಚಿಸುತ್ತಿದ್ದರು. ಆದರೆ, ಈ ವಾರ ಬೇರೆಯದೇ ರೀತಿಯಲ್ಲಿ ಎಪಿಸೋಡ್ ಸಾಗಿದೆ. ಸುದೀಪ್ ಅವರು ಹನುಮಂತ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದಕ್ಕೆ ಹನುಮಂತ ಅವರು ಸೈಲೆಂಟ್ ಆಗಿ ತಲೆ ಆಡಿಸಿದ್ದಾರೆ. ಸುದೀಪ್ ಅವರು ಹನುಮಂತ ಬಳಿ ಇಷ್ಟು ಕಠಿಣವಾಗಿ ನಡೆದುಕೊಂಡಿದ್ದು ಇದೇ ಮೊದಲು ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ.

ಬಿಗ್ ಬಾಸ್ ಪ್ರತಿ ವಾರ ಕಷ್ಟ ಪಟ್ಟು ಟಾಸ್ಕ್​ಗಳ ರಚನೆ ಮಾಡಿ ಅದನ್ನು ನೀಡುತ್ತಾರೆ. ಇದನ್ನು ಸ್ಪರ್ಧಿಗಳು ಆಡಬೇಕು. ಆದರೆ, ಅವರು ಮಾಡುವ ಎಡವಟ್ಟು ತನದಿಂದ ಕೆಲವೊಮ್ಮೆ ಟಾಸ್ಕ್ ರದ್ದಾದ ಉದಾಹರಣೆ ಇದೆ. ಈ ವಾರವೂ ಹಾಗೆಯೇ ಆಗಿದೆ. ದೊಡ್ಮನೆಯಲ್ಲಿ ಫಲಿತಾಂಶ ಘೋಷಿಸಲು ಸ್ಪರ್ಧಿಗಳು ಒಪ್ಪದ ಕಾರಣ ಟಾಸ್ಕ್ ರದ್ದಾಗಿದೆ. ಇದು ಸುದೀಪ್ ಕೋಪಕ್ಕೆ ಕಾರಣ ಆಗಿದೆ. ಅವರು ಈ ಬಗ್ಗೆ ಕ್ಲಾಸ್ ತೆಗೆದುಕೊಳ್ಳುವಾಗ ಕಠಿಣ ಎಚ್ಚರಿಕೆ ನೀಡಿದ್ದಾರೆ.

‘ಸರಿಯಾಗಿ ಟಾಸ್ಕ್ ಆಡಿ. ಕೆಲವೊಮ್ಮೆ ಉಸ್ತುವಾರಿಗಳಾಗಿ ನೀವು ನಡೆದುಕೊಳ್ಳೊದು ಸರಿ ಇರಲ್ಲ. ಅದನ್ನು ಸರಿ ಮಾಡಿಕೊಳ್ಳಿ. ಚೈತ್ರಾ ಅವರು ನಡೆಸಿಕೊಟ್ಟ ಉಸ್ತುವಾರಿ ನನಗೆ ಹೇಸಿಗೆ ತಂದಿತ್ತು. ಮಾತಾಡಿದ್ರೆ ಫೌಲ್ ಎನ್ನುತ್ತಾರೆ. ನಿಮ್ಮದೇ ರೂಲ್ಸ್ ಮಾಡಿಕೊಂಡಿದ್ರಿ’ ಎಂದರು ಸುದೀಪ್. ಆ ಬಳಿಕ ಹನುಮಂತ ಅವರ ವಿಚಾರಕ್ಕೆ ಬಂದರು.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಭೂತ, ಬಿದ್ದು ಒದ್ದಾಡಿದ ಚೈತ್ರಾ, ಮನೆ ಮಂದಿಗೆ ಭಯ

ಹನುಮಂತ ಮಾತು ಎತ್ತಿದರೆ, ‘ಟಾಸ್ಕ್ ರದ್ದಾದರೂ ತೊಂದರೆ ಇಲ್ಲ’ ಎನ್ನುತ್ತಿದ್ದರು. ಇದನ್ನು ಸುದೀಪ್ ಖಂಡಿಸಿದ್ದಾರೆ. ‘ಹನುಮಂತು ಅವರೇ ನಿಮ್ಮ ಬಾಯಿಂದ ಈ ಟಾಸ್ಕ್ ರದ್ದಾದ್ರೂ ತೊಂದರೆ ಇಲ್ಲ ಎಂಬ ಮಾತು ಬಂದ್ರೆ… ಎಷ್ಟೇ ವೋಟ್ ಬಿದ್ರು ನಿಮ್ಮನ್ನು ಹೊರಗೆ ಕಳಿಸೋ ಜವಾಬ್ದಾರಿ ನನ್ನದು. ಈ ರೀತಿ ಗಾಂಚಲಿ ಮಾತುಗಳು ಯಾರಿಂದಲೂ ಬೇಡಮ್ಮ. ಇದು ಯಾರಪ್ಪನ ಆಸ್ತೀನು ಅಲ್ಲಮ್ಮ. ರದ್ದಾಗೇಬೇಕೋ ಅಥವಾ ಬೇಡವೋ ಎಂಬುದನ್ನು ಬಿಗ್ ಬಾಸ್ ಹೇಳ್ತಾರೆ’ ಎಂದರು ಸುದೀಪ್.

ಈ ಮಾತಿಗೆ ಹನುಮಂತ ಅವರು ಸೈಲೆಂಟ್ ಆದರು. ಅವರಿಗೆ ಏನು ಹೇಳಬೇಕು ಎಂಬುದು ಗೊತ್ತಾಗದೆ ಸೈಲೆಂಟ್ ಆದರು. ಅವರು ಸುಮ್ಮನೆ ತಲೆ ಆಡಿಸಿದರು. ಸದ್ಯ ಶನಿವಾರದ (ಡಿಸೆಂಬರ್ 21) ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ