AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್​ಗೆ ಕೌಂಟರ್ ಕೊಟ್ಟ ಹನುಮಂತ; ಎಲ್ಲರೂ ಶಾಕ್

ಬಿಗ್ ಬಾಸ್ ಕನ್ನಡದಲ್ಲಿ ಹನುಮಂತ ಅವರು ತಮ್ಮ ಮೌನದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಸುದೀಪ್ ಅವರು ಹನುಮಂತರ ಈ ತಂತ್ರವನ್ನು ಗಮನಿಸಿ, ಅವರೊಂದಿಗೆ ಮಾತನಾಡಿದ್ದಾರೆ. ಹನುಮಂತ ತಮ್ಮ ಸಣ್ಣ ಉತ್ತರಗಳ ಮೂಲಕ ಎಲ್ಲರ ಮೆಚ್ಚುಗೆ ಗಳಿಸುತ್ತಿದ್ದಾರೆ. ಸುದೀಪ್ ಅವರು ಹನುಮಂತರನ್ನು ಬುದ್ಧಿವಂತ ಆಟಗಾರ ಎಂದು ಹೊಗಳಿದ್ದಾರೆ.

ಸುದೀಪ್​ಗೆ ಕೌಂಟರ್ ಕೊಟ್ಟ ಹನುಮಂತ; ಎಲ್ಲರೂ ಶಾಕ್
ಹನುಮಂತ-ಸುದೀಪ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Dec 27, 2024 | 7:43 AM

Share

‘ಬಿಗ್ ಬಾಸ್’ ಮನೆಯಲ್ಲಿ ಹನುಮಂತ ಅವರು ಸೈಲೆಂಟ್ ಆಗಿದ್ದಾರೆ. ಹಾಗಂದ ಮಾತ್ರಕ್ಕೆ ಅವರು ಸೈಲೆಂಟ್ ಅಲ್ಲವೇ ಅಲ್ಲ. ಅವರು ಸುಮ್ಮನೆ ಇದ್ದುಕೊಂಡೇ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರು ಮಾತಿನ ಮೂಲಕ ಮೆಚ್ಚುಗೆ ಪಡೆಯುತ್ತಿದ್ದಾರೆ. ಉದ್ದ ಸಾಲುಗಳನ್ನು ಹೇಳದೇ ಒಂದೇ ಒಂದು ವಾಕ್ಯಗಳ ಮೂಲಕ ಎಲ್ಲರ ಮೆಚ್ಚುಗೆ ಪಡೆಯುತ್ತಾರೆ. ಈಗ ಅವರು ಸುದೀಪ್​ಗೆ ಕೌಂಟರ್ ಕೊಟ್ಟು ಸುದ್ದಿ ಆಗಿದ್ದಾರೆ. ಶನಿವಾರದ (ಡಿಸೆಂಬರ್ 21) ಎಪಿಸೋಡ್​ನಲ್ಲಿ ಈ ವಿಚಾರ ಚರ್ಚೆಗೆ ಬಂದಿದೆ.

ಸುದೀಪ್ ಅವರು ಯಾವುದೇ ಪ್ರಶ್ನೆ ಮಾಡಿದರೂ, ಹಾಗೇನು ಇಲ್ರಿ, ಎಲ್ಲಾ ಚೆನ್ನಾಗೈತ್ರಿ ಎಂಬ ಉತ್ತರ ಹನುಮಂತ ಅವರ ಕಡೆಯಿಂದ ಬರುತ್ತಿತ್ತು. ಇದನ್ನು ಸುದೀಪ್ ಅವರು ಕೂಡ ಗಮನಿಸಿದ್ದಾರೆ. ಈ ಕಾರಣದಿಂದಲೇ ಸುದೀಪ್ ಅವರು ಹನುಮಂತ ಬಳಿ ಒಂದು ವಿಚಾರವನ್ನು ಸ್ಪಷ್ಟವಾಗಿ ಹೇಳಿದರು. ‘ಹಾಗೇನು ಇಲ್ರಿ, ಎಲ್ಲಾ ಚೆನ್ನಾಗೈತ್ರಿ ಬಿಟ್ಟು ಬೇರೆ ಮಾತನ್ನು ಹೇಳಬೇಕು’ ಎಂದು ಸುದೀಪ್ ಕಂಡೀಷನ್ ಹಾಕಿದರು. ಇದಕ್ಕೆ ಹನುಮಂತ ಒಪ್ಪಿದರು.

‘ಹೇಗಿತ್ತು ಈ ವಾರ’ ಎಂದು ಸುದೀಪ್ ಕೇಳಿದರು. ‘ಭೇಷ್ ಇತ್ತುರೀ’ ಎಂದರು ಹನುಮಂತ. ಈ ಮಾತಿಗೆ ಎಲ್ಲರೂ ಚಪ್ಪಾಳೆ ತಟ್ಟಿದರು. ಸುದೀಪ್ ಅವರು ಮಾತು ಬಾರದೆ ಒಂದು ನಿಮಿಷ ಸುಮ್ಮನಿದ್ದರು. ಆ ಬಳಿಕ ಬೇರೆ ಟಾಪಿಕ್​ಗೆ ಹೋದರು.

ಸುದೀಪ್ ಅವರು ಹನುಮಂತ ಅವರನ್ನು ನಿರಂತರವಾಗಿ ಹೊಗಳುತ್ತಾ ಬರುತ್ತಿದ್ದಾರೆ. ‘ಇಡೀ ಮನೆಯಲ್ಲಿ ಹನುಮಂತ ಅವರೇ ಬುದ್ಧಿವಂತ ಆಟಗಾರ’ ಎಂದು ಸುದೀಪ್ ಸಾಕಷ್ಟು ಬಾರಿ ಹೇಳಿದ್ದಾರೆ. ಈ ಮಾತು ಹನುಮಂತ ಅವರಿಗೆ ಸ್ಫೂರ್ತಿ ನೀಡುತ್ತಾ ಇದೆ. ಹನುಮಂತ ಅವರು ವಾರ ಕಳೆದಂತೆ ಆಟ ಬದಲಾಯಿಸಿಕೊಳ್ಳುವ ಪ್ರಯತ್ನದಲ್ಲಿ ಇದ್ದಾರೆ.

ಇದನ್ನೂ ಓದಿ: ಹನುಮಂತನ ಮದುವೆಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡ ಗೋಲ್ಡ್ ಸುರೇಶ್

ಹನುಮಂತ ಅವರು ಗಾಯಕನಾಗಿ ಫೇಮಸ್ ಆದವರು. ಅವರು ಹಾವೇರಿ ಮೂಲದವರು. ಅವರು ಹಲವು ರಿಯಾಲಿಟಿ ಶೋಗಳನ್ನು ನೋಡಿ ಬಂದಿದ್ದಾರೆ. ಈಗ ಬಿಗ್ ಬಾಸ್​ನೂ ಚಾಲಾಕಿತನ ಉಪಯೋಗಿಸಿ ಆಡುತ್ತಾ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:13 pm, Sat, 21 December 24

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ