ಹನುಮಂತನ ಮದುವೆಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡ ಗೋಲ್ಡ್ ಸುರೇಶ್
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಹನುಮಂತ ಮತ್ತು ಗೋಲ್ಡ್ ಸುರೇಶ್ ನಡುವೆ ಬೆಳೆದ ಆತ್ಮೀಯ ಬಾಂಧವ್ಯ ಮನೆಯಿಂದ ಹೊರಗೂ ಮುಂದುವರೆದಿದೆ. ಸುರೇಶ್ ಅವರು ಹನುಮಂತ ಅವರನ್ನು ಅಳಿಯ ಎಂದು ಕರೆದು, ಅವರ ಮದುವೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹನುಮಂತ ಹಾಗೂ ಗೋಲ್ಡ್ ಸುರೇಶ್ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು. ಸುರೇಶ್ ಅವರನ್ನು ಹನುಮಂತ ಅವರು ಮಾವ ಎಂದು ಕರೆದರೆ, ಹನುಮಂತ ಅವರನ್ನು ಸುರೇಶ್ ಅಳಿಯ ಎನ್ನುತ್ತಿದ್ದರು. ಈ ಬಾಂಧವ್ಯ ಹೊರಗೂ ಮುಂದುವರಿದಿದೆ. ಈಗ ಸುರೇಶ್ ಅವರು ಹನುಮಂತ ಅವರ ಮದುವೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.
ಬಿಗ್ ಬಾಸ್ಗೆ ಮೊದಲ ದಿನವೇ ಎಂಟ್ರಿ ಕೊಟ್ಟವರು ಗೋಲ್ಡ್ ಸುರೇಶ್. ಹನುಮಂತ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟರು. ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿತ್ತು. ಈ ಗೆಳೆತನವನ್ನು ಮನೆಯಿಂದ ಹೊರಗೂ ಮುಂದುವರಿಸಲು ಅವರು ನಿರ್ಧರಿಸಿದ್ದಾರೆ. ಈಗ ಹನುಮಂತ ಅವರ ಮದುವೆ ಜವಾಬ್ದಾರಿ ತೆಗೆದುಕೊಂಡಿದ್ದಾರೆ.
ಹನುಮಂತ ಅವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಬಾರಿ ಮದುವೆ ವಿಚಾರ ಹೇಳಿಕೊಂಡಿದ್ದಾರೆ. ದೊಡ್ಮನೆಯಿಂದ ಹೊರ ಬಂದ ಬಳಿಕ ಅವರು ಮದುವೆ ಆಗುವ ಪ್ಲ್ಯಾನ್ನಲ್ಲಿ ಇದ್ದಾರೆ. ಈ ವಿವಾಹವನ್ನು ತಾವೇ ಮಾಡೋದಾಗಿ ಗೋಲ್ಡ್ ಸುರೇಶ್ ಹೇಳಿದ್ದಾರೆ. ಈ ವಿಚಾರ ಅನೇಕರಿಗೆ ಅಚ್ಚರಿ ತರಿಸಿದೆ.
View this post on Instagram
‘ಹನುಮಂತ ನನ್ನ ಅಳಿಯ. ನನ್ನ ಪ್ರೀತಿ ಯಾವಾಗಲೂ ಅವನ ಮೇಲೆ ಇರುತ್ತದೆ. ಅವನು ಚೈನ್ ಕೇಳಿದ್ದ. ಅದನ್ನು ಕೊಟ್ಟೆ. ಆ ಬಳಿಕ ಮರಳಿ ಕೊಟ್ಟಿದ್ದಾನೆ. ಅವನ ಮದುವೆಯನ್ನು ನಾನೇ ಮಾಡ್ತೀನಿ. ಅವನ ಜೊತೆ ಅಟ್ಯಾಚ್ಮೆಂಟ್ ಬೆಳೆದಿದೆ. ಏಕೆಂದು ಗೊತ್ತಿಲ್ಲ. ಅವನು ಸಾಕಷ್ಟು ಇಷ್ಟ ಆಗಿದ್ದಾನೆ’ ಎಂದು ಸುರೇಶ್ ಹೇಳಿದ್ದಾರೆ.
ಇದನ್ನೂ ಓದಿ: ಸಾಲದಬಾಧೆ ವದಂತಿ; ಲೈವ್ ಬಂದು ಅಸಲಿ ವಿಚಾರ ಹೇಳಿದ ಗೋಲ್ಡ್ ಸುರೇಶ್
ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ಎಕ್ಸಿಟ್ ಆದರು. ಅವರು ಉದ್ಯಮವನ್ನು ನಡೆಸುತ್ತಿದ್ದಾರೆ. ಇದರ ಜವಾಬ್ದಾರಿಯನ್ನು ಪತ್ನಿಗೆ ನೀಡಿದ್ದರು. ಆದರೆ, ಅವರ ಬಳಿ ಅದನ್ನು ನಡೆಸಿಕೊಂಡು ಹೋಗಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಅವರು ದೊಡ್ಮನೆಯಿಂದ ಹೊರ ಬಂದರು. ಅವರು ಸಾಲ ಮಾಡಿಕೊಂಡಿದ್ದಾರೆ ಎಂದು ವರದಿ ಆಗಿತ್ತು. ಇದು ಸುಳ್ಳು ಎಂದು ಸುರೇಶ್ ಹೇಳಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.