ಸಾಲದಬಾಧೆ ವದಂತಿ; ಲೈವ್ ಬಂದು ಅಸಲಿ ವಿಚಾರ ಹೇಳಿದ ಗೋಲ್ಡ್ ಸುರೇಶ್

ಗೋಲ್ಡ್ ಸುರೇಶ್ ಎಲಿಮಿನೇಟ್ ಆಗಲು ಕಾರಣ ಏನು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿವೆ. ಆರಂಭದಲ್ಲಿ ಗೋಲ್ಡ್ ಸುರೇಶ್ ತಂದೆ ಮೃತಪಟ್ಟರು ಎಂದು ವರದಿ ಆಯಿತು. ಆದರೆ, ಈ ಬಗ್ಗೆ ಅವರ ತಂದೆಯೇ ಸ್ಪಷ್ಟನೆ ಕೊಟ್ಟರು. ಈಗ ಅವರೇ ಲೈವ್ ಬಂದು ಈ ಬಗ್ಗೆ ಮಾತನಾಡಿದ್ದಾರೆ.

ಸಾಲದಬಾಧೆ ವದಂತಿ; ಲೈವ್ ಬಂದು ಅಸಲಿ ವಿಚಾರ ಹೇಳಿದ ಗೋಲ್ಡ್ ಸುರೇಶ್
ಗೋಲ್ಡ್ ಸುರೇಶ್
Follow us
ರಾಜೇಶ್ ದುಗ್ಗುಮನೆ
|

Updated on: Dec 19, 2024 | 12:57 PM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಗೋಲ್ಡ್ ಸುರೇಶ್ ಅವರು ಎಕ್ಸಿಟ್ ಆಗಿದ್ದಾರೆ. ಇದಕ್ಕೆ ಕಾರಣ ಏನು ಎಂಬ ಬಗ್ಗೆ ಚರ್ಚೆ ನಡೆಯಿತು. ಆರಂಭದಲ್ಲಿ ಅವರ ತಂದೆ ನಿಧನ ಹೊಂದಿದ್ದಾರೆ ಎನ್ನಲಾಗಿತ್ತು. ಆ ಬಳಿಕ ಅದು ಸುಳ್ಳು ಎನ್ನುವ ವಿಚಾರ ತಿಳಿಯಿತು. ಆ ಬಳಿಕ ಬಂದಿದ್ದೇ ಸಾಲಬಾಧೆ ವಿಚಾರ. ಅವರು ಸಾಲ ಮಾಡಿಕೊಂಡಿದ್ದಕ್ಕೆ ಹೊರ ಬಂದರು ಎಂದು ಹೇಳಲಾಯಿತು. ಈಗ ಕಲರ್ಸ್ ಕನ್ನಡ ಇನ್​ಸ್ಟಾಗ್ರಾಮ್​ನಲ್ಲಿ ಲೈವ್​​ನಲ್ಲಿ ಬಂದ ಸುರೇಶ್ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

‘ಬಿಗ್ ಬಾಸ್​ನಿಂದ ಆಫರ್ ಬಂದಾಗ ಶಾಕ್ ಹಾಗೂ ಖುಷಿ ಎರಡೂ ಆಯಿತು. ಅವರು ಯಾಕೆ ನನಗೆ ಆಫರ್ ಕೊಟ್ಟರು ಗೊತ್ತಿಲ್ಲ. ಆದರೆ, ಈ  ಜರ್ನಿ ರೋಚಕ ಆಗಿತ್ತು. ಎಲ್ಲೋ ಇದ್ದವನನ್ನು ಗುರುತಿಸಿ, ಕರೆದಿದ್ದಾರೆ. ಬಿಗ್ ಬಾಸ್ ಮನೆ ಒಳಗೆ ಹೋಗಿ ಸುಮಾರು ದಿನ ಆಡಿ ಬಂದಿದ್ದೇನೆ’ ಎಂದು ಖುಷಿ ಹೊರಹಾಕಿದರು ಗೋಲ್ಡ್ ಸುರೇಶ್.

ಹೊರ ಬಂದ ವಿಚಾರಕ್ಕೆ ಸ್ಪಷ್ಟನೆ ನೀಡಿರುವ ಅವರು, ‘ನಾನು ಹೊರಗೆ ಬಿಸ್ನೆಸ್ ಹ್ಯಾಂಡಲ್ ಮಾಡ್ತಾ ಇದ್ದೆ. ಅದನ್ನು ನಾನೇ ನೋಡಿಕೊಳ್ಳುತ್ತಾ ಇದ್ದೆ. ನಾನು ಬಿಗ್ ಬಾಸ್​ಗೆ ಹೋಗುವಾಗ ಅದನ್ನು ಪತ್ನಿಗೆ ವಹಿಸಿ ಬಂದಿದ್ದೆ. ಆದರೆ, ಅದನ್ನು ಹ್ಯಾಂಡಲ್ ಮಾಡೋಕೆ ಅವರಿಗೆ ಆಗಿಲ್ಲ. ಒತ್ತಡ ಜಾಸ್ತಿ ಆಯ್ತು. ಎಲ್ಲಿ ನಿರ್ಧಾರ ತಗೊಳ್ಳುವಾಗ ಎಡವುತ್ತೇನೋ ಎನ್ನುವ ಭಯ ಇತ್ತು. ಹೀಗಾಗಿ ನಾನು ಹೊರ ಬಂದೆ. ನಾನು ಹೊರಗೆ ಪತ್ನಿಗೆ ಸಹಾಯ ಮಾಡಬೇಕಿತ್ತು. ಈಗ ಯಾವುದೇ ತೊಂದರೆಗಳಿಲ್ಲ. ಉದ್ಯಮವೂ ಸರಿಹಾದಿ​ಗೆ ಬಂದಿದೆ’ ಎಂದಿದ್ದಾರೆ ಅವರು.

ಬಿಗ್ ಬಾಸ್ ಮನೆ ಎಷ್ಟು ಮುಖ್ಯವೋ ಹೊರಗಿರುವ ಉದ್ಯಮ ಕೂಡ ಅಷ್ಟೇ ಮುಖ್ಯ ಎಂದು ಅವರು ಹೇಳಿದ್ದಾರೆ. ‘ನನಗೆ ಉದ್ಯಮ ಕೂಡ ಮುಖ್ಯ. ನನ್ನ ನಂಬಿರುವ ಸುಮಾರು ಕುಟುಂಬದವರಿಗೆ ನಾನು ಸಹಾಯ ಮಾಡಬೇಕಿತ್ತು’ ಎಂದಿದ್ದಾರೆ ಸುರೇಶ್.

ಇದನ್ನೂ ಓದಿ: ಗೋಲ್ಡ್ ಸುರೇಶ್ ದೊಡ್ಮನೆಯಿಂದ ಹೊರ ಹೋಗಲು ಅಸಲಿ ಕಾರಣ ಹೊರಬಿತ್ತು; ವಿವರಿಸಿದ ಐಶ್ವರ್ಯಾ

ಹೊರಗೆ ಹರಿದಾಡುತ್ತಿರುವ ವದಂತಿ ಬಗ್ಗೆ ಮಾತನಾಡಿರುವ ಅವರು, ‘ಸಾಕಷ್ಟು ಸುದ್ದಿ ಹರಿದಾಡುತ್ತಿದೆ. ಸುದ್ದಿ ಮಾಡುವವರು ಮಾಡಲಿ. ನಾನು ಏನು ಎಂಬುದು ಎಲ್ಲರಿಗೂ ಗೊತ್ತಿದೆ. ನನ್ನ ಆಪ್ತರಿಗೆ ನನ್ನ ಬಗ್ಗೆ ಗೊತ್ತಿದೆ. ನನಗೆ ಅಷ್ಟು ಸಾಕು. ಕಾಲಿನ ಗಾಯದಿಂದ ತುಂಬಾ ವೀಕ್ ಆಗಿ ಬಂದಿದ್ದೇನೆ. ಆರೋಗ್ಯದ ಸಮಸ್ಯೆ ಕಾಡ್ತಾ ಇತ್ತು. ಆರೋಗ್ಯ ಸುಧಾರಿಸುತ್ತಿದೆ. ಎಲ್ಲರೂ ತುಂಬಾನೇ ಸಪೋರ್ಟ್ ಮಾಡಿದ್ದೀರಾ. ಎಲ್ಲರಿಗೂ ಥ್ಯಾಂಕ್ಸ್. ಮತ್ತೆ ಅವಕಾಶ ಸಿಕ್ಕರೆ ಹೋಗುತ್ತೇನೆ. ನಿರಾಸೆ ಆಗಿದ್ರೆ ಕ್ಷಮಿಸಿ’ ಎಂದಿದ್ದಾರೆ ಸುರೇಶ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ