‘ಅವಳಿಗೆ ಗಾಂಚಲಿ ಜಾಸ್ತಿ’; ಭವ್ಯಾ ಬಗೆಗಿನ ಅಭಿಪ್ರಾಯ ಬದಲಿಸಿಕೊಂಡ ತ್ರಿವಿಕ್ರಂ
‘ಬಿಗ್ ಬಾಸ್ ಕನ್ನಡ ಸೀಸನ್ 11’ ರಲ್ಲಿ ತ್ರಿವಿಕ್ರಂ ಮತ್ತು ಭವ್ಯಾ ನಡುವೆ ಗೆಳೆತನ ಹಾಗೂ ಮುನಿಸು ಎರಡೂ ಇದೆ. ಭವ್ಯಾ ಅವರ ಮೈಕ್ ಅನ್ನು ತ್ರಿವಿಕ್ರಂ ಬಚ್ಚಿಟ್ಟಿದ್ದರಿಂದ ಅವರ ನಡುವೆ ಜಗಳ ನಡೆದಿದೆ. ಆದಾಗ್ಯೂ, ಈ ಜಗಳ ಕೆಲವೇ ಗಂಟೆಗಳಲ್ಲಿ ಸರಿಹೋಗಿದೆ. ಇವರ ನಡುವೆ ಅನೇಕ ಬಾರಿ ಈ ಘಟನೆ ನಡೆದಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ತ್ರಿವಿಕ್ರಂ ಹಾಗೂ ಭವ್ಯಾ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿರೋದು ತಿಳಿದೇ ಇದೆ. ಇಬ್ಬರೂ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಇದು ಅವರ ಆಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವ ಬಗ್ಗೆ ಸುದೀಪ್ ಎಚ್ಚರಿಕೆ ನೀಡಿದ್ದರು. ಆದರೆ, ಆ ಬಗ್ಗೆ ಇವರು ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಈಗ ಭವ್ಯಾ ಬಗೆಗಿನ ಅಭಿಪ್ರಾಯವನ್ನು ತ್ರಿವಿಕ್ರಂ ಬದಲಿಸಿಕೊಂಡರೇ ಎಂಬ ಪ್ರಶ್ನೆ ಮೂಡುವಂತೆ ಆಗಿದೆ.
‘ಬಿಗ್ ಬಾಸ್’ ಮನೆಯಲ್ಲಿ ತ್ರಿವಿಕ್ರಂ ಅವರಿಂದ ಭವ್ಯಾ ದೂರ ಹೋಗಲು ಪ್ರಯತ್ನಿಸಿದರೂ ಅದು ಸಾಧ್ಯವಾಗುತ್ತಿಲ್ಲ. ಭವ್ಯಾ ವಿಚಾರದಲ್ಲಿ ತ್ರಿವಿಕ್ರಂ ಕೂಡ ಇದೇ ಪರಿಸ್ಥಿತಿಯಲ್ಲಿ ಇದ್ದಾರೆ. ಈ ಕಾರಣಕ್ಕೆ ಸಮಯ ಸಿಕ್ಕಾಗಲೆಲ್ಲ ಒಟ್ಟಿಗೆ ಇರುತ್ತಾರೆ. ಈಗ ಭವ್ಯಾ ಅವರ ಮೈಕ್ನ ತ್ರಿವಿಕ್ರಂ ಬಚ್ಚಿಟ್ಟಿದ್ದರು. ಇದಕ್ಕೆ ಭವ್ಯಾ ಅವರಿಗೆ ಸಾಕಷ್ಟು ಕೋಪ ಬಂದಿದೆ.
ಯಾರೇ ಮೈಕ್ ಹಾಕದೇ ಓಡಾಡಿದರೆ ಬಿಗ್ ಬಾಸ್ ‘ಮೈಕ್ ಧರಿಸಿಕೊಳ್ಳಿ’ ಎಂಬ ಘೋಷಣೆ ಮಾಡುತ್ತಾರೆ. ತ್ರಿವಿಕ್ರಂ ಮೈಕ್ ಬಚ್ಚಿಟ್ಟಿದ್ದರಿಂದ ಭವ್ಯಾ ಅವರು ಮೌನವಾಗಿಯೇ ಬಂದು ಮೈಕ್ ಹುಡುಕುವ ಪ್ರಯತ್ನ ಮಾಡಿದರು. ಆದರೆ, ಮೈಕ್ ಸಿಕ್ಕಿಲ್ಲ. ಮೈಕ್ ಇಲ್ಲದ ಕಾರಣ ಮೌನವಾಗಿ ಮನೆಯಲ್ಲ ಸುತ್ತಾಡುತ್ತಿದ್ದರು. ಆಗ, ಬಿಗ್ ಬಾಸ್ ಕಡೆಯಿಂದ ಮೈಕ್ ಧರಿಸಿಕೊಳ್ಳುವಂತೆ ಆದೇಶ ಬಂತು.
ಆಗ ತ್ರಿವಿಕ್ರಂ ಅವರು ಬಚ್ಚಿಟ್ಟಿದ್ದ ಮೈಕ್ನ ಅವರ ಹಾಸಿಗೆಯ ಮೇಲೆ ಇಟ್ಟಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಭವ್ಯಾ ಅವರು ಮೈಕ್ನ ತೆಗೆದುಕೊಂಡು ಹೋಗಿದ್ದಾರೆ. ಮೈಕ್ ತೆಗೆದುಕೊಳ್ಳುವಾಗ ಅವರಲ್ಲಿ ಕೋಪ ಎದ್ದು ಕಾಣುತ್ತಿತ್ತು. ಈ ಬಗ್ಗೆ ಮನೆಯ ಇತರರು ತ್ರಿವಿಕ್ರಂ ಬಳಿ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಅವರು, ‘ಅವಳಿಗೆ ಗಾಂಚಲಿ’ ಎಂದು ಉತ್ತರಿಸಿದರು.
ಇದನ್ನೂ ಓದಿ: ‘ಅವರ ತಂಗಿಯರು ನೋಡ್ತಾ ಇರಲ್ವಾ’; ಗೌತಮಿ ಪ್ರಶ್ನೆಗೆ ಮಂಕಾದ ಹನುಮಂತ; ಮಾಡಿದ ತಪ್ಪೇನು?
ಭವ್ಯಾ ಹಾಗೂ ತ್ರಿವಿಕ್ರಂ ಮಧ್ಯೆ ಎಷ್ಟೇ ಮುನಿಸು ಮೂಡಿದರೂ ಕೆಲವೇ ಗಂಟೆಗಳಲ್ಲಿ ಅದು ಸರಿ ಹೋಗುತ್ತದೆ ಎಂಬುದು ವೀಕ್ಷಕರಿಗೂ ತಿಳಿದಿದೆ. ಇದು ಕೂಡ ಹಾಗೆಯೇ ಆಗಿದೆ. ಈ ರೀತಿಯ ಘಟನೆ ಈ ಮೊದಲು ಸಾಕಷ್ಟು ಬಾರಿ ಆಗಿದೆ. ಫನ್ಗೋಸ್ಕರ ಇವರು ಜಗಳ ಆಡಿಕೊಂಡಿದ್ದೂ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.