ಲಾಜಿಕ್ ಇಟ್ಟು ವಾದಿಸಿ ಮಂಜು ಮುಖವಾಡ ಬಯಲು ಮಾಡಿದ ರಜತ್

‘ನಿನ್ನ ಪ್ರಾಣಪಕ್ಷಿ ಹಾರಿಹೋಗುತ್ತಿತ್ತು’ ಎಂದು ಮಂಜುಗೆ ರಜತ್ ಹೇಳಿದ್ದನ್ನೇ ಇಟ್ಟುಕೊಂಡು ದೊಡ್ಡ ರಂಪಾಟ ಮಾಡಲಾಗಿತ್ತು. ಆದರೆ ಉಗ್ರಂ ಮಂಜು ಈ ಮೊದಲು ಇದಕ್ಕಿಂತಲೂ ಹೆಚ್ಚು ಖಾರವಾಗಿ ಮಾತನಾಡಿದ್ದರು. ಆ ವಿಷಯವನ್ನು ಈಗ ರಜತ್ ನೆನಪಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮಂಜುಗೆ ರಜತ್ ಕಠಿಣ ಪೈಪೋಟಿ ನೀಡುತ್ತಿದ್ದಾರೆ.

ಲಾಜಿಕ್ ಇಟ್ಟು ವಾದಿಸಿ ಮಂಜು ಮುಖವಾಡ ಬಯಲು ಮಾಡಿದ ರಜತ್
Rajat, Ugram Manju
Follow us
ಮದನ್​ ಕುಮಾರ್​
|

Updated on: Dec 18, 2024 | 10:24 PM

ಉಗ್ರಂ ಮಂಜು ಅವರು ಮೊದಲ ದಿನದಿಂದಲೂ ಬಹುತೇಕರನ್ನು ಕಂಟ್ರೋಲ್ ಮಾಡುತ್ತಿದ್ದರು. ಆದರೆ ವೈಲ್ಡ್ ಕಾರ್ಡ್​ ಮೂಲಕ ಬಿಗ್ ಬಾಸ್ ಮನೆಗೆ ಬಂದಿರುವ ರಜತ್ ಅವರನ್ನು ಕಂಟ್ರೋಲ್ ಮಾಡಲು ಮಂಜುಗೆ ಸಾಧ್ಯವಾಗಿಲ್ಲ. ಅನೇಕ ಸಂದರ್ಭಗಳಲ್ಲಿ ಮಂಜು ತಪ್ಪು ಮಾಡಿದ್ದರೂ ಕೂಡ ಅದನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಆದರೆ ರಜತ್ ಎದುರು ಮಂಜು ಅವರ ಆ ಚಾಲಾಕಿತನ ನಡೆಯುತ್ತಿಲ್ಲ. ಮಂಜು ಮುಖವಾಡ ಹಾಕಿಕೊಂಡಿದ್ದಾರೆ ಎಂಬುದನ್ನು ರಜತ್ ವಿವರಿಸಿ ಹೇಳಿದ್ದಾರೆ. ಮಂಜುಗೆ ಎರಡು ಮುಖ ಇದೆ ಎಂಬುದಕ್ಕೆ ರಜತ್ ಅವರು ಸೂಕ್ತ ಉದಾಹರಣೆ ನೀಡಿದ್ದಾರೆ.

ಡಿಸೆಂಬರ್​ 17ರ ಸಂಚಿಕೆಯಲ್ಲಿ ರಜತ್ ಮತ್ತು ಉಗ್ರಂ ಮಂಜು ಅವರ ನಡುವೆ ದೊಡ್ಡ ಜಗಳ ಆಗಿತ್ತು ಇಬ್ಬರೂ ಕೂಡ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ಆ ಸಂದರ್ಭದಲ್ಲಿ ಇಡೀ ಮನೆಯವರು ಮಧ್ಯ ಪ್ರವೇಶಿಸಿ ಜಗಳ ತಪ್ಪಿಸಿದ್ದರು. ‘ನೀನು ನನ್ನ ತಂಟೆಗೆ ಬಂದಿದ್ದರೆ ನಿನ್ನ ಪ್ರಾಣಪಕ್ಷಿ ಹಾರಿ ಹೋಗುತ್ತಿತ್ತು. ನಾವು ಟಾಟಾ ಎನ್ನುತ್ತಿದ್ದೆವು’ ಎಂದು ಮಂಜುಗೆ ರಜತ್ ಹೇಳಿದ್ದರು. ಆ ಮಾತಿಗೆ ಮಂಜು ಆಕ್ಷೇಪ ವ್ಯಕ್ತಪಡಿಸಿದ್ದರು.

‘ಪ್ರಾಣಪಕ್ಷಿ ಹಾರಿಹೋಗುತ್ತದೆ’ ಎಂಬಂತಹ ಮಾತು ಆಡಿದಾಗ ಸ್ಪರ್ಧಿಗಳ ಕುಟುಂಬದವರಿಗೆ ನೋವಾಗುತ್ತದೆ ಎಂಬ ಸೆಂಟಿಮೆಂಟ್ ಸಮರ್ಥನೆ ಮೂಲಕ ರಜತ್ ಅವರನ್ನು ಕೆಟ್ಟವರನ್ನಾಗಿ ಬಿಂಬಿಸಲು ಉಗ್ರಂ ಮಂಜು, ಗೌತಮಿ ಮುಂತಾದವರು ಪ್ರಯತ್ನಿಸಿದ್ದರು. ಆದರೆ ಆ ಮಾತನ್ನು ರಜತ್ ಅವರು ಒಪ್ಪಿಕೊಂಡಿಲ್ಲ. ಮರುದಿನ, ಅಂದರೆ, ಡಿಸೆಂಬರ್​ 18ರ ಸಂಚಿಕೆಯಲ್ಲಿ ರಜತ್ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ‘ನಿಮ್ಮ ಪಕ್ಕ ಕೂರುವುದೇ ದೊಡ್ಡ ಸಮಸ್ಯೆ’: ಉಗ್ರಂ ಮಂಜು ವರ್ತನೆಗೆ ಗೌತಮಿ ಬೇಸರ

ಈ ಮೊದಲು ಉಗ್ರಂ ಮಂಜು ಕೂಡ ಇನ್ನೊಬ್ಬರ ಸಾವನ್ನು ಬಯಸುವ ರೀತಿಯಲ್ಲಿ ಮಾತನಾಡಿದ್ದರು. ಮಂಜು ಎಲ್ಲರನ್ನೂ ಮಾನಸಿಕವಾಗಿ ಕುಗ್ಗಿಸುತ್ತಾರೆ ಎಂದು ಐಶ್ವರ್ಯಾ ಹೇಳಿದಾಗ, ‘ಅಷ್ಟು ಕುಗ್ಗುವಂತವರಾಗಿದ್ದರೆ ಆತ್ಮಹತ್ಯೆ ಮಾಡಿಕೊಂಡು ಸಾಯಿರಿ’ ಎಂದು ಉಗ್ರಂ ಮಂಜು ಕೂಗಾಡಿದ್ದರು. ಅದೇ ವಿಚಾರವನ್ನು ಈಗ ರಜತ್ ಮತ್ತೆ ನೆನಪಿಸಿದ್ದಾರೆ. ‘ಮಂಜು ಹೇಳಿದರೆ ಸರಿ, ನಾನು ಹೇಳಿದರೆ ತಪ್ಪಾ?’ ಎಂದು ರಜತ್ ಲಾಜಿಕ್ ಸಹಿತ ಪ್ರಶ್ನೆ ಮಾಡಿದ್ದಾರೆ. ಆ ಮೂಲಕ ಮಂಜು ಮುಖವಾಡವನ್ನು ಕಳಚಲು ಅವರು ಪ್ರಯತ್ನಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮುಖ್ಯಮಂತ್ರಿ ಮಾತಾಡುತ್ತಿದ್ದರೂ ಹೊರಗೆ ಹೋದ ವಿರೋಧಪಕ್ಷಗಳ ಶಾಸಕರು
ಮುಖ್ಯಮಂತ್ರಿ ಮಾತಾಡುತ್ತಿದ್ದರೂ ಹೊರಗೆ ಹೋದ ವಿರೋಧಪಕ್ಷಗಳ ಶಾಸಕರು
ಜಮೀರ್ ಉತ್ತರದಿಂದ ಬಿಜೆಪಿ ಸಮಾಧಾನವಾಗದಿದ್ದಾಗ ಮುಖ್ಯಮಂತ್ರಿ ಉತ್ತರ
ಜಮೀರ್ ಉತ್ತರದಿಂದ ಬಿಜೆಪಿ ಸಮಾಧಾನವಾಗದಿದ್ದಾಗ ಮುಖ್ಯಮಂತ್ರಿ ಉತ್ತರ
ಪ್ರಿನ್ಸಿಪಾಲ್​ಗೆ ಅಡುಗೆ ಮಾಡಿಕೊಡಲು 8ನೇ ಕ್ಲಾಸ್ ಹುಡುಗನಿಗೆ ಒತ್ತಾಯ
ಪ್ರಿನ್ಸಿಪಾಲ್​ಗೆ ಅಡುಗೆ ಮಾಡಿಕೊಡಲು 8ನೇ ಕ್ಲಾಸ್ ಹುಡುಗನಿಗೆ ಒತ್ತಾಯ
ಸದನದಲ್ಲಿ ಸಚಿವ ಜಮೀರ್ ಅಹ್ಮದ್ ನೆರವಿಗೆ ಧಾವಿಸಿದ ಸಿದ್ದರಾಮಯ್ಯ
ಸದನದಲ್ಲಿ ಸಚಿವ ಜಮೀರ್ ಅಹ್ಮದ್ ನೆರವಿಗೆ ಧಾವಿಸಿದ ಸಿದ್ದರಾಮಯ್ಯ
ವಿರೋಧಪಕ್ಷದವರು ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸಬೇಕು: ಮುಖ್ಯಮಂತ್ರಿ
ವಿರೋಧಪಕ್ಷದವರು ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸಬೇಕು: ಮುಖ್ಯಮಂತ್ರಿ
Amit Shah Press Meet Live:ಅಮಿತ್​ ಶಾ ತುರ್ತು ಸುದ್ದಿಗೋಷ್ಠಿ ನೇರಪ್ರಸಾರ
Amit Shah Press Meet Live:ಅಮಿತ್​ ಶಾ ತುರ್ತು ಸುದ್ದಿಗೋಷ್ಠಿ ನೇರಪ್ರಸಾರ
ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ ಚೈತ್ರಾ ಕುಂದಾಪುರ
ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ ಚೈತ್ರಾ ಕುಂದಾಪುರ
ಧರಣಿ ಮರೆತು ಸಚಿವೆ ಜತೆ ಸೆಲ್ಫೀ ತೆಗೆದುಕೊಂಡ ಅಂಗನವಾಡಿ ಕಾರ್ಯಕರ್ತೆಯರು!
ಧರಣಿ ಮರೆತು ಸಚಿವೆ ಜತೆ ಸೆಲ್ಫೀ ತೆಗೆದುಕೊಂಡ ಅಂಗನವಾಡಿ ಕಾರ್ಯಕರ್ತೆಯರು!
ಬೆಂಗಳೂರು ಬೆಳೆದರೆ ಅದು ರಾಜ್ಯದ ಬೆಳವಣಿಗೆ ಅಲ್ಲ: ಲಕ್ಷ್ಮಣ ಸವದಿ
ಬೆಂಗಳೂರು ಬೆಳೆದರೆ ಅದು ರಾಜ್ಯದ ಬೆಳವಣಿಗೆ ಅಲ್ಲ: ಲಕ್ಷ್ಮಣ ಸವದಿ
ಮತ್ತೇ ಮುನ್ನೆಲೆಗೆ ಬಂದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಣಿಗಳ ಜಗಳ
ಮತ್ತೇ ಮುನ್ನೆಲೆಗೆ ಬಂದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಣಿಗಳ ಜಗಳ