
ಬಿಗ್ಬಾಸ್ ಮನೆಗೆ ಈ ವಾರ ಐವರು ಅತಿಥಿಗಳು ಬಂದಿದ್ದರು. ರೆಸಾರ್ಟ್ ಟಾಸ್ಕ್ ಅನ್ನು ಬಿಗ್ಬಾಸ್ ಈ ವಾರ ನೀಡಿದ್ದರು. ಅದರಂತೆ ಬಿಗ್ಬಾಸ್ ಮನೆಗೆ ಬಂದ ಅತಿಥಿಗಳ ಆತಿಥ್ಯವನ್ನು ಸ್ಪರ್ಧಿಗಳು ಮಾಡಬೇಕಿತ್ತು. ಮಾಜಿ ಸ್ಪರ್ಧಿಗಳಾದ ಉಗ್ರಂ ಮಂಜು, ತ್ರಿವಿಕ್ರಮ್, ಮೋಕ್ಷಿತಾ, ಚೈತ್ರಾ ಕುಂದಾಪುರ, ರಜತ್ ಅವರುಗಳು ಬಿಗ್ಬಾಸ್ ಮನೆಗೆ ಬಂದಿದ್ದರು. ವಾರವೆಲ್ಲ ಸ್ಪರ್ಧಿಗಳು ಅತಿಥಿಗಳ ಆತಿಥ್ಯ ಮಾಡಿದರು. ಕೆಲವು ಬಾರಿ ಜಗಳಗಳು ನಡೆದವು, ಅತಿಥಿಗಳು ಸಹ ಕೆಲವೆಡೆ ಎಲ್ಲೆ ಮೀರಿ ವರ್ತಿಸಿದರು. ಆದರೆ ಶುಕ್ರವಾರಕ್ಕೆ ಟಾಸ್ಕ್ ಅಂತ್ಯವಾಗಿದ್ದು, ಶನಿವಾರ ಅತಿಥಿಗಳು ಮತ್ತು ಸ್ಪರ್ಧಿಗಳು ಎಲ್ಲರೂ ಸುದೀಪ್ ಮುಂದೆ ‘ವಿಚಾರಣೆ’ ಎದುರಿಸಿದರು. ಈ ವೇಳೆ ಸುದೀಪ್ ಅವರು ಒಂದೊಳ್ಳೆ ಟ್ವಿಸ್ಟ್ ನೀಡಿದರು.
ಬಿಗ್ಬಾಸ್ ಮನೆಗೆ ಬಂದ ಅತಿಥಿಗಳಿಗೆ ಇಂದು (ಶನಿವಾರ) ಕೊನೆಯ ದಿನವಾಗಿತ್ತು. ಕೊನೆಯ ದಿನವಾದ್ದರಿಂದ ಅತಿಥಿಗಳು ಬಿಗ್ಬಾಸ್ ಮನೆ ಬಿಟ್ಟು ಹೋಗಲೇ ಬೇಕಿತ್ತು. ಆದರೆ ಟ್ವಿಸ್ಟ್ ಕೊಟ್ಟ ಸುದೀಪ್, ಬಂದ ಐವರಲ್ಲಿ ಮೂವರು ಅತಿಥಿಗಳು ಮಾತ್ರವೇ ಮರಳಿ ಹೋಗುತ್ತಾರೆ. ಇಬ್ಬರು ಮನೆಯಲ್ಲಿಯೇ ಉಳಿದುಕೊಳ್ಳಲಿದ್ದಾರೆ ಎಂದಿದ್ದರು. ಎಲ್ಲರಿಗೂ ಇದು ಶಾಕ್ ನೀಡಿತು. ನಿಮ್ಮ ಪ್ರಕಾರ ಯಾರು ಉಳಿದುಕೊಳ್ಳಬೇಕು ಎಂಬ ಪ್ರಶ್ನೆಗೆ ಬಹುತೇಕ ಸ್ಪರ್ಧಿಗಳು ಮೋಕ್ಷಿತಾ ಹೆಸರು ಹೇಳಿದರು. ಕೆಲವರು ಚೈತ್ರಾ, ತ್ರಿವಿಕ್ರಮ್ ಹೆಸರು ತೆಗೆದುಕೊಂಡರು. ಕಡಿಮೆ ತೆಗೆದುಕೊಂಡ ಹೆಸರು ರಜತ್ ಅವರದ್ದಾಗಿತ್ತು.
ಇದನ್ನೂ ಓದಿ:‘ದಮ್ಮಯ್ಯ ಬಿಟ್ಟುಬಿಡಿ’; ಸುದೀಪ್ ಎದುರು ಬೇಡಿಕೊಂಡ ರಜತ್
ಆದರೆ ಸುದೀಪ್ ಅವರು ಮದುವೆ ನಿಶ್ಚಯವಾಗಿರುವ ಉಗ್ರಂ ಮಂಜು ಅವರನ್ನು ಮನೆಯಿಂದ ನಿರ್ಗಮಿಸುವಂತೆ ಹೇಳಿದರು. ಅವರು ಅತಿಥಿಯಾಗಿ ಬಿಗ್ಬಾಸ್ ಮನೆಗೆ ಬಂದಿದ್ದಕ್ಕೆ ಧನ್ಯವಾದ ಹೇಳಿದರು. ಬಳಿಕ ಮಂಜಣ್ಣನ ಮುದ್ದಿನ ತಂಗಿ ಮೋಕ್ಷಿತಾ ಅವರಿಗೂ ಸಹ ವಿದಾಯ ಹೇಳಿದರು. ಅದಾದ ಬಳಿಕ ‘ಮುದ್ದುಲಕ್ಷ್ಮಿ’ ಧಾರಾವಾಹಿಯಲ್ಲಿ ಬ್ಯುಸಿ ಆಗಿರುವ ತ್ರಿವಿಕ್ರಮ್ ಅವರಿಗೂ ಸಹ ವಿದಾಯ ಹೇಳಿದರು. ರಜತ್ ಹಾಗೂ ಚೈತ್ರಾ ಕುಂದಾಪುರ ಅವರು ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳಾಗಿ ಮುಂದುವರೆಯಲಿದ್ದಾರೆ ಎಂದರು.
ಚೈತ್ರಾ ಕುಂದಾಪುರ ಹಾಗೂ ರಜತ್ ಅವರುಗಳು ವೈಲ್ಡ್ ಎಂಟ್ರಿ ಆಗಿ ಬಿಗ್ಬಾಸ್ ಮನೆಗೆ ಹೋಗಿದ್ದಾರೆ. ಈ ಹಿಂದೆ ಸೂರಜ್, ರಘು ಮತ್ತು ರಿಶಾ ಅವರುಗಳು ವೈಲ್ಡ್ ಕಾರ್ಡ್ ಮೂಲಕ ಬಂದಿದ್ದರು. ಅವರಲ್ಲಿ ರಿಶಾ ಈಗಾಗಲೇ ಮನೆಗೆ ಹೋಗಿದ್ದಾರೆ. ಈಗ ರಜತ್ ಮತ್ತು ಚೈತ್ರಾ ಕುಂದಾಪುರ ಅವರು ಬಂದಿದ್ದಾರೆ. ಆದರೆ ಸುದೀಪ್ ಹೇಳಿರುವಂತೆ. ರಜತ್ ಮತ್ತು ಚೈತ್ರಾ ಅವರು ಸ್ಪರ್ಧಿಗಳಾಗಿ ಬಿಗ್ಬಾಸ್ ಮನೆಯಲ್ಲಿ ಇರುತ್ತಾರೆ ಆದರೆ ಅದರಲ್ಲಿಯೂ ಟ್ವಿಸ್ಟ್ ಇರಲಿದೆಯಂತೆ. ಆದರೆ ಆ ಟ್ವಿಸ್ಟ್ ಏನು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ