ಬಿಗ್ ಬಾಸ್​ನಿಂದ ಬಂದ ನಾಲ್ಕು ದಿನಗಳ ಬಳಿಕ ಸಿಹಿ ಸುದ್ದಿ ಕೊಟ್ಟ ಕಾರ್ತಿಕ್ ಮಹೇಶ್

ಬಿಗ್ ಬಾಸ್ ಜನವರಿ 28ರಂದು ಕೊನೆ ಆಯಿತು. ಫಿನಾಲೆಯಲ್ಲಿ ಕಾರ್ತಿಕ್ ಗೆಲುವು ಕಂಡಿದ್ದಾರೆ. ಈಗ ಅವರು ಹೊಸ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಇನ್​ಸ್ಟಾಗ್ರಾಮ್​ನಲ್ಲಿ ಲೈವ್ ಬರೋ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವಿಚಾರ ಫ್ಯಾನ್ಸ್​ಗೆ ಖುಷಿ ನೀಡಿದೆ.

ಬಿಗ್ ಬಾಸ್​ನಿಂದ ಬಂದ ನಾಲ್ಕು ದಿನಗಳ ಬಳಿಕ ಸಿಹಿ ಸುದ್ದಿ ಕೊಟ್ಟ ಕಾರ್ತಿಕ್ ಮಹೇಶ್
ಕಾರ್ತಿಕ್

Updated on: Feb 01, 2024 | 2:48 PM

ಕಾರ್ತಿಕ್ ಮಹೇಶ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರ (BBK 10) ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆಗಿದ್ದ ಅವರು ಈಗ ‘ಬಿಗ್ ಬಾಸ್’ ವಿನ್ ಆಗಿ ಜನಪ್ರಿಯತೆ ಪಡೆದಿದ್ದಾರೆ. 50 ಲಕ್ಷ ರೂಪಾಯಿ ಜೊತೆ ಕಾರು ಹಾಗೂ ಬೈಕ್ ಅವರಿಗೆ ಗಿಫ್ಟ್ ಆಗಿ ಸಿಕ್ಕಿದೆ. ಬಿಗ್ ಬಾಸ್ ಮನೆಯಿಂದ ಹೊರ ಬಂದು ನಾಲ್ಕು ದಿನ ಕಳೆದಿದೆ. ಈ ಸಂದರ್ಭದಲ್ಲಿ ಅವರು ಫ್ಯಾನ್ಸ್​ಗೆ ಸಿಹಿ ಸುದ್ದಿ ಒಂದನ್ನು ನೀಡಿದ್ದಾರೆ. ಇದನ್ನು ಕೇಳಿ ಫ್ಯಾನ್ಸ್ ಖುಷಿಯಾಗಿದ್ದಾರೆ.

ಜನವರಿ 28ರಂದು ಬಿಗ್ ಬಾಸ್ ಕೊನೆ ಆಯಿತು. ಫಿನಾಲೆಯಲ್ಲಿ ಕಾರ್ತಿಕ್ ಗೆಲುವು ಕಂಡರು. ಈಗ ಅವರು ಹೊಸ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಲೈವ್ ಬರೋ ಬಗ್ಗೆ ಮಾಹಿತಿ ನೀಡಿದ್ದಾರೆ. karthi_mahesh ಇನ್​ಸ್ಟಾಗ್ರಾಮ್ ಖಾತೆ ಮೂಲಕ ಇಂದು (ಫೆಬ್ರವರಿ 1) ಸಂಜೆ ಆರು ಗಂಟೆಗೆ ಲೈವ್ ಬರೋದಾಗಿ ಅವರು ಮಾಹಿತಿ ನೀಡಿದ್ದಾರೆ. ಈ ವೇಳೆ ಅಭಿಮಾನಿಗಳು ತಮ್ಮ ಪ್ರಶ್ನೆಗಳನ್ನು ಅವರ ಮುಂದೆ ಇಡಬಹುದು. ಇದಕ್ಕೆ ಕಾರ್ತಿಕ್ ಉತ್ತರ ನೀಡುತ್ತಾರೆ.

ಕಾರ್ತಿಕ್ ಮಾಡಿರೋ ಪೋಸ್ಟ್..

ಬಿಗ್ ಬಾಸ್ ಪೂರ್ಣಗೊಂಡ ಬೆನ್ನಲ್ಲೇ ರೀಯೂನಿಯನ್ ಆಗಿತ್ತು. ಈ ವೇಳೆ ನಮ್ರತಾ ಗೌಡ, ವಿನಯ್ ಗೌಡ, ಕಾರ್ತಿಕ್ ಮಹೇಶ್ ಹಾಗೂ ಸಂಗೀತಾ ಶೃಂಗೇರಿ ಒಂದೆಡೆ ಸೇರಿದ್ದರು. ಆದರೆ, ಎಲ್ಲಿಯೂ ಕಾರ್ತಿಕ್ ಹಾಗೂ ಸಂಗೀತಾ ಒಟ್ಟಿಗೆ ಇರೋ ಫೋಟೋ ಶೇರ್ ಮಾಡಿಕೊಂಡಿಲ್ಲ. ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್ ಹಾಗೂ ಸಂಗೀತಾ ಮಧ್ಯೆ ಕಿರಿಕ್ ಆಗಿತ್ತು. ಇದು ಹೊರ ಬಂದ ಬಳಿಕವೂ ಮುಂದುವರಿದಂತೆ ಕಾಣುತ್ತಿದೆ. ಈ ಕಾರಣದಿಂದಲೇ ಇಬ್ಬರೂ ಒಟ್ಟಿಗೆ ಪೋಸ್ ಕೊಟ್ಟಿಲ್ಲ ಎನ್ನಲಾಗುತ್ತಿದೆ. ಈ ಬಗ್ಗೆ ಲೈವ್​ನಲ್ಲಿ ಪ್ರಶ್ನೆ ಎದುರಾಗೋ ಸಾಧ್ಯತೆ ಇದೆ.

ಇದನ್ನೂ ಓದಿ: ‘ಬಿಗ್ ಬಾಸ್ ಮನೆ ಈಗಲೂ ನಮ್ಮನ್ನು ಕಾಡುತ್ತದೆ’; ಹೊರಗೆ ಬಂದು ಅನುಭವ ಹೇಳಿಕೊಂಡ ಸಂಗೀತಾ ಶೃಂಗೇರಿ

ಈ ಬಾರಿ ಬಿಗ್ ಬಾಸ್​ನಲ್ಲಿ ವಿನಯ್ ಗೌಡ, ಸಂಗೀತಾ ಶೃಂಗೇರಿ, ನಮ್ರತಾ ಗೌಡ ಅವರಂಥ ಘಟಾನುಘಟಿ ಸ್ಪರ್ಧಿಗಳು ಆಗಮಿಸಿದ್ದರು. ಅವರನ್ನು ಹಿಂದಿಕ್ಕಿ ಕಾರ್ತಿಕ್ ಗೆಲುವು ಕಂಡಿದ್ದಾರೆ. ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us