‘ಕನ್ನಡ ಬಿಗ್ ಬಾಸ್ ಸೀಸನ್ 8’ ಪೂರ್ಣಗೊಂಡ ಬೆನ್ನಲ್ಲೇ ಮಿನಿ ಬಿಗ್ ಬಾಸ್ ಆರಂಭಕ್ಕೆ ಕಲರ್ಸ್ ಕನ್ನಡ ವಾಹಿನಿ ಸಿದ್ಧತೆ ನಡೆಸಿದೆ. ಈಗಾಗಲೇ ಕಲರ್ಸ್ ಕನ್ನಡ ವಾಹಿನಿ ಸೀರಿಯಲ್ನಲ್ಲಿ ನಟಿಸುತ್ತಿರುವ ಕಲಾವಿದರು ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಈಗ ವೀಕೆಂಡ್ನಲ್ಲಿ ಈ ಎಪಿಸೋಡ್ ನಡೆಸಿ ಕೊಡೋರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಬಿಗ್ ಬಾಸ್ ಮಿನಿ ಸೀಸನ್ ಕೆಲವೇ ದಿನಗಳ ಕಾಲ ನಡೆಯಲಿದೆ. ಸಾಕಷ್ಟು ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಇಷ್ಟು ದಿನ ಕೇವಲ ಹೊರಗಿನಿಂದ ಬಿಗ್ ಬಾಸ್ ಮನೆ ನೋಡುತ್ತಿದ್ದ ಸೀರಿಯಲ್ ಕಲಾವಿದರಿಗೆ ಬಿಗ್ ಬಾಸ್ ಮನೆ ಒಳಗೆ ಕಾಲಿಡುವ ಅವಕಾಶ ಸಿಕ್ಕಿದೆ. ಕೆಲವೇ ದಿನಗಳ ಕಾಲ ಹೊರ ಜಗತ್ತಿನ ಸಂಪರ್ಕ ತೊರೆದು ಧಾರಾವಾಹಿ ಕಲಾವಿದರು ಬಿಗ್ ಬಾಸ್ ಮನೆ ಒಳಗೆ ಹೋಗಿದ್ದಾರೆ. ಶನಿವಾರ ಹಾಗೂ ಭಾನುವಾರ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮ ಪ್ರಸಾರವಾಗಲಿದೆ.
ಹಾಗಾದರೆ, ಮಿನಿ ಬಿಗ್ ಬಾಸ್ ನಡೆಸಿ ಕೊಡುವವರು ಯಾರು? ಇದಕ್ಕೂ ಉತ್ತರ ಇದೆ. ಮೂಲಗಳ ಪ್ರಕಾರ ಕಿಚ್ಚ ಸುದೀಪ್ ಅವರೇ ಮಿನಿ ಸೀಸನ್ ನಡೆಸಿಕೊಡಲಿದ್ದಾರಂತೆ. ಹೀಗೊಂದು ಸುದ್ದಿ ಎಲ್ಲ ಕಡೆಗಳಲ್ಲೂ ಹರಿದಾಡಿದೆ.
ಕಿಚ್ಚ ಸುದೀಪ್ ಅವರು 8ಸೀಸನ್ಗಳನ್ನು ಅತ್ಯುತ್ತಮವಾಗಿ ನಡೆಸಿಕೊಟ್ಟಿದ್ದಾರೆ. ಅವರ ನಿರೂಪಣೆಗೆ ಫಿದಾ ಆಗದವರಿಲ್ಲ. ಅವರ ಮಾತಿನ ಶೈಲಿ, ಅವರು ಹಾಕೋ ಬಟ್ಟೆ, ಕ್ಲಾಸ್ ತೆಗೆದುಕೊಳ್ಳುವ ರೀತಿ ಅನೇಕರಿಗೆ ಇಷ್ಟವಾಗುತ್ತದೆ. ಇದೇ ಕಾರಣಕ್ಕೆ, ಬಿಗ್ ಬಾಸ್ ನೋಡುವ ಅನೇಕರಿದ್ದಾರೆ. ಮಿನಿ ಬಿಗ್ ಬಾಸ್ ಕೂಡ ಸುದೀಪ್ ಅವರೇ ನಡೆಸಿದರೆ ವೀಕ್ಷಕರನ್ನು ಹೆಚ್ಚು ಸೆಳೆಯಬಹುದು ಎನ್ನುವ ಆಲೋಚನೆ ವಾಹಿನಿಯದ್ದು. ಹೀಗಾಗಿ, ಸುದೀಪ್ಗೆ ಈ ಜವಾಬ್ದಾರಿ ನೀಡಲಾಗಿದೆ.
ಈ ಮಿನಿ ಬಿಗ್ ಬಾಸ್ ಹೇಗಿರುತ್ತದೆ? ಅದರ ರೂಪುರೇಷೆ ಏನು ಎಂಬುದನ್ನು ಕಲರ್ಸ್ ಕನ್ನಡ ವಾಹಿನಿ ಬಿಟ್ಟುಕೊಟ್ಟಿಲ್ಲ. ವೇದಿಕೆ ಮೇಲೆ ಕಿಚ್ಚ ಸುದೀಪ್ ಇರುತ್ತಾರಾ? ಎಂಬಿತ್ಯಾದಿ ಪ್ರಶ್ನೆಗೆ ಶನಿವಾರ (ಆಗಸ್ಟ್ 14) ಉತ್ತರ ಸಿಗಲಿದೆ.
ಇದನ್ನೂ ಓದಿ:
ನಾನು ಬೈಸೆಕ್ಸುವಲ್, ಮದುವೆ ಆಗೋದು ಹುಡುಗಿಯನ್ನೇ; ಅಚ್ಚರಿಯ ಹೇಳಿಕೆ ನೀಡಿದ ಬಿಗ್ ಬಾಸ್ ಸ್ಪರ್ಧಿ