
‘ಬಿಗ್ ಬಾಸ್ ಕನ್ನಡ ಸೀಸನ್ 9’ (BBK 9) ಕುತೂಹಲ ಹೆಚ್ಚಿಸಿಕೊಳ್ಳುತ್ತಿದೆ. ಈಗಾಗಲೇ ಸುಮಾರು ಎರಡು ತಿಂಗಳು ಪೂರ್ಣಗೊಂಡ ಹೊರತಾಗಿಯೂ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿಲ್ಲ. ಹೀಗಿರುವಾಗಲೇ ಒಂದು ಅಚ್ಚರಿಯ ಅಪ್ಡೇಟ್ ಸಿಕ್ಕಿದೆ. ಇಡೀ ಬಿಗ್ ಬಾಸ್ (Bigg Boss) ಮನೆ ಕಾಡಾಗಿದೆ. ಅಷ್ಟೇ ಅಲ್ಲ ಹೊಸ ಸ್ಪರ್ಧಿಯ ಎಂಟ್ರಿ ಆಗಿದೆ. ಅದು ದೀಪಿಕಾ ದಾಸ್ (Deepika Das) ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಅವರ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ದೀಪಿಕಾ ದಾಸ್ ಅವರು ಸ್ಟ್ರಾಂಗ್ ಕಂಟೆಸ್ಟಂಟ್ ಆಗಿ ಗುರುತಿಸಿಕೊಂಡಿದ್ದರು. ಮನೆಯಲ್ಲಿ ಅವರು ಉತ್ತಮ ಆಟ ಪ್ರದರ್ಶನ ಮಾಡುತ್ತಿದ್ದರು. ಇದರ ಹೊರತಾಗಿಯೂ ಅವರು ಬಿಗ್ ಬಾಸ್ ಮನೆಯಿಂದ ಕಳೆದ ವೀಕೆಂಡ್ನಲ್ಲಿ ಔಟ್ ಆಗಿದ್ದರು. ಆದರೆ, ದೀಪಿಕಾ ದಾಸ್ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಕಳುಹಿಸಿಯೇ ಇಲ್ಲ ಎನ್ನಲಾಗುತ್ತಿದೆ. ಅವರನ್ನು ಸೀಕ್ರೆಟ್ ರೂಂನಲ್ಲಿ ಇರಿಸಲಾಗಿತ್ತು ಎಂದು ವರದಿ ಆಗಿದೆ. ಈಗ ಅವರು ಬಿಗ್ ಬಾಸ್ಗೆ ಕಂಬ್ಯಾಕ್ ಮಾಡಿದ್ದಾರೆ.
ಕಲರ್ಸ್ ಕನ್ನಡ ವಾಹಿನಿ ಹೊಸ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಇಡೀ ಬಿಗ್ ಬಾಸ್ ಮನೆ ಕಾಡಾಗಿದೆ. ಸ್ಪರ್ಧಿಗಳು ತಮಗೆ ಸಿಕ್ಕ ಸೌಕರ್ಯಗಳನ್ನು ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಗೋಣಿ ಚೀಲದಲ್ಲೇ ಬಟ್ಟೆ ಮಾಡಿಕೊಂಡಿದ್ದಾರೆ. ಹೀಗಾಗಿ, ಸ್ಪರ್ಧಿಗಳು ಕಾಡಾಗಿರುವ ಗಾರ್ಡನ್ ಏರಿಯಾದಲ್ಲೇ ವಾಸ ಮಾಡಬೇಕು. ಊಟ ತಿಂಡಿ ಎಲ್ಲವೂ ಅಲ್ಲಿಯೇ.
ತರಕಾರಿಗಳನ್ನು ಪಡೆಯಲು ಬಿಗ್ ಬಾಸ್ ಕಡೆಯಿಂದ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್ನ ಗೆದ್ದು ಮನೆಯವರು ತರಕಾರಿ ಪಡೆದರು. ಆಗಲೇ ಬಿಗ್ ಬಾಸ್ ಕಡೆಯಿಂದ ಒಂದು ಘೋಷಣೆ ಆಗಿದೆ. ‘ಮತ್ತೊಂದು ಸದಸ್ಯ ಈ ಆಟವನ್ನು ಆಡಿ ತರಕಾರಿ ಗೆದ್ದುಕೊಂಡಿದ್ದಾನೆ’ ಎಂದು ಬಿಗ್ ಬಾಸ್ ಹೇಳಿದರು.
ಇದನ್ನೂ ಓದಿ: ಕನ್ನಡ ಬಿಗ್ ಬಾಸ್ ವೈಲ್ಡ್ ಕಾರ್ಡ್ ಎಂಟ್ರಿ ಬಗ್ಗೆ ವೀಕ್ಷಕರಿಗೆ ಮೂಡಿದೆ ಅನುಮಾನ
ಇದು ದೀಪಿಕಾ ದಾಸ್ ಎನ್ನಲಾಗಿದೆ. ದೀಪಿಕಾ ದಾಸ್ ಕೈಯಲ್ಲಿ ಕಡಗ ಇತ್ತು. ಇಂದು ಎಂಟ್ರಿ ಕೊಡುತ್ತಿರುವ ಹೊಸ ಸದಸ್ಯನ ಕೈಯಲ್ಲೂ ಕಡಗ ಇದೆ. ಹೀಗಾಗಿ, ವೀಕ್ಷಕರು ಈ ಬಗ್ಗೆ ಊಹೆ ಮಾಡಿದ್ದಾರೆ. ಇಂದಿನ (ನವೆಂಬರ್ 22) ಎಪಿಸೋಡ್ನಲ್ಲಿ ಆ ವಿಚಾರ ರಿವೀಲ್ ಆಗಲಿದೆ.
Published On - 10:59 am, Tue, 22 November 22