AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepika Das: ಬಿಗ್​ ಬಾಸ್​ನಿಂದ ದೀಪಿಕಾ ದಾಸ್​ ಎಲಿಮಿನೇಟ್​; 2ನೇ ಚಾನ್ಸ್​ನಲ್ಲೂ ಮುಗ್ಗರಿಸಿದ ಸೀರಿಯಲ್​ ನಟಿ

BBK9 | Bigg Boss Elimination: ದೀಪಿಕಾ ದಾಸ್​ ಎಲಿಮಿನೇಷನ್​ ಬಳಿಕ ಒಟ್ಟು 11 ಸ್ಪರ್ಧಿಗಳು ಈಗ ದೊಡ್ಮನೆಯಲ್ಲಿ ಇದ್ದಾರೆ. 9ನೇ ವಾರದಲ್ಲಿ ಬಿಗ್​ ಬಾಸ್​ ಆಟ ಮುಂದುವರಿದಿದೆ.

Deepika Das: ಬಿಗ್​ ಬಾಸ್​ನಿಂದ ದೀಪಿಕಾ ದಾಸ್​ ಎಲಿಮಿನೇಟ್​; 2ನೇ ಚಾನ್ಸ್​ನಲ್ಲೂ ಮುಗ್ಗರಿಸಿದ ಸೀರಿಯಲ್​ ನಟಿ
ದೀಪಿಕಾ ದಾಸ್
TV9 Web
| Edited By: |

Updated on:Nov 20, 2022 | 9:37 PM

Share

ಕಿರುತೆರೆ ಧಾರಾವಾಹಿಗಳ ಮೂಲಕ ಕರುನಾಡಿನಲ್ಲಿ ಮನೆಮಾತಾಗಿರುವ ನಟಿ ದೀಪಿಕಾ ದಾಸ್​ (Deepika Das) ಅವರಿಗೆ ಬಿಗ್​ ಬಾಸ್​ ಮೂಲಕ ಇನ್ನಷ್ಟು ಜನಪ್ರಿಯತೆ ಸಿಕ್ಕಿದೆ. ಆದರೆ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರಲ್ಲಿ (Bigg Boss Kannada Season 9) ಅವರ ಆಟವೀಗ ಅಂತ್ಯವಾಗಿದೆ. 8ನೇ ವಾರದಲ್ಲಿ ದೀಪಿಕಾ ದಾಸ್​ ಎಲಿಮಿನೇಟ್​ ಆಗಿದ್ದಾರೆ. ‘ಸೂಪರ್​ ಸಂಡೇ ವಿಥ್​ ಸುದೀಪ’ ಸಂಚಿಕೆಯಲ್ಲಿ ಕಿಚ್ಚ ಸುದೀಪ್​ (Kichcha Sudeep) ಅವರು ಎಲಿಮಿನೇಷನ್​ ವಿಚಾರ ಘೋಷಿಸಿದರು. ಈ ಮೊದಲು ‘ಬಿಗ್​ ಬಾಸ್​ ಕನ್ನಡ ಸೀಸನ್​ 7’ರಲ್ಲೂ ದೀಪಿಕಾ ದಾಸ್​ ಸ್ಪರ್ಧಿಸಿದ್ದರು. ಆಗ ಕೂಡ ಅವರಿಗೆ ಟ್ರೋಫಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಈ ವರ್ಷದ ಹೊಸ ಸೀಸನ್​ನಲ್ಲಿ ಅವರಿಗೆ ಮತ್ತೆ ದೊಡ್ಮನೆಗೆ ಎಂಟ್ರಿ ನೀಡುವ ಚಾನ್ಸ್​ ಸಿಕ್ಕಿತು. ಆದರೆ 2ನೇ ಅವಕಾಶದಲ್ಲೂ ಅವರು ಮುಗ್ಗರಿಸಿದ್ದಾರೆ. ಟ್ರೋಫಿ ಗೆಲ್ಲುವ ಅವರ ಕನಸು ಭಗ್ನವಾಗಿದೆ.

ಕಿಚ್ಚ ಸುದೀಪ್​ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿದ್ದಾರೆ. ಈ ಬಾರಿ ಪ್ರವೀಣರು (ಹಳಬರು) ಮತ್ತು ನವೀನರು (ಹೊಸಬರು) ಎಂಬ ಕಾನ್ಸೆಪ್ಟ್​ನಲ್ಲಿ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿತ್ತು. ದೀಪಿಕಾ ದಾಸ್​ ಅವರು ಪ್ರವೀಣರ ಗುಂಪಿನಿಂದ ಆಯ್ಕೆ ಆಗಿದ್ದರು. ಬಿಗ್​ ಬಾಸ್​ ಆಟದ ಬಗ್ಗೆ ಅವರಿಗೆ ಹೆಚ್ಚು ಅನುಭವ ಇತ್ತು. ಹಾಗಿದ್ದರೂ ಕೂಡ ಫಿನಾಲೆ ತಲುಪಲು ಅವರು ವಿಫಲರಾಗಿದ್ದಾರೆ.

9ನೇ ವಾರದಲ್ಲಿ ಬಿಗ್​ ಬಾಸ್​ ಆಟ ಮುಂದುವರಿದಿದೆ. ಒಟ್ಟು 11 ಸ್ಪರ್ಧಿಗಳು ಈಗ ದೊಡ್ಮನೆಯಲ್ಲಿ ಇದ್ದಾರೆ. ಪ್ರಶಾಂತ್​ ಸಂಬರ್ಗಿ, ರೂಪೇಶ್​ ರಾಜಣ್ಣ, ರೂಪೇಶ್​ ಶೆಟ್ಟಿ, ಅಮೂಲ್ಯಾ ಗೌಡ, ಕಾವ್ಯಶ್ರೀ ಗೌಡ, ವಿನೋದ್​ ಗೊಬ್ಬರಗಾಲ, ಅರುಣ್​ ಸಾಗರ್​, ರಾಕೇಶ್​ ಅಡಿಗ, ಅನುಪಮಾ ಗೌಡ, ದಿವ್ಯಾ ಉರುಡುಗ, ಆರ್ಯವರ್ಧನ್​ ಗುರೂಜಿ ನಡುವೆ ಹಣಾಹಣಿ ಮುಂದುವರಿದಿದೆ.

ಇದನ್ನೂ ಓದಿ
Image
Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
Image
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
Image
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
Image
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

ಕಲರ್ಸ್​ ಕನ್ನಡ ವಾಹಿನಿಯಲ್ಲಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಪ್ರಸಾರ ಆಗುತ್ತಿದೆ. ಸ್ಪರ್ಧಿಗಳ ಸಂಖ್ಯೆ ಕಡಿಮೆ ಆದಂತೆಲ್ಲ ಪೈಪೋಟಿಯ ಕಾವು ಹೆಚ್ಚುತ್ತಿದೆ. 11 ಸ್ಪರ್ಧಿಗಳ ಪೈಕಿ ಮುಂದಿನ ವಾರ ಯಾರು ಎಲಿಮಿನೇಟ್​ ಆಗುತ್ತಾರೆ ಎಂಬ ಕೌತುಕ ಮೂಡಿದೆ. ಈ ಸೀಸನ್​ನಲ್ಲಿ 57 ದಿನಗಳು ಪೂರ್ಣ ಆಗಿವೆ. ರೂಪೇಶ್​ ರಾಜಣ್ಣ, ಪ್ರಶಾಂತ್​ ಸಂಬರ್ಗಿ ಅವರು ಅಬ್ಬರದ ಆಟ ಪ್ರದರ್ಶಿಸುತ್ತಿದ್ದಾರೆ. ಅರುಣ್​ ಸಾಗರ್​ ಹಾಗೂ ವಿನೋದ್​ ಗೊಬ್ಬರಗಾಲ ಅವರು ಹಾಸ್ಯದ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ರೂಪೇಶ್​ ರಾಜಣ್ಣ, ಆರ್ಯವರ್ಧನ್​ ಗುರೂಜಿ, ರಾಕೇಶ್​ ಅಡಿಗ ಅವರು ಬಿಗ್​ ಬಾಸ್​ ಒಟಿಟಿ ಶೋನಿಂದ ಈವರೆಗೂ ಆಟ ಮುಂದುವರಿಸಿಕೊಂಡು ಬಂದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:37 pm, Sun, 20 November 22

Follow Us
Web contact
Web contact

TV9 Kannada

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು