AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK9: 50 ದಿನಕ್ಕೆ ಅಚ್ಚರಿ​ ನೀಡಿದ ಬಿಗ್​ ಬಾಸ್​; ಈ ವಾರ ಆಗಲೇ ಇಲ್ಲ ಎಲಿಮಿನೇಷನ್​; ಆದ್ರೂ ಇತ್ತು ಶಾಕ್​

Bigg Boss Elimination: ತಾವು ಎಲಿಮಿನೇಟ್​ ಆದರೂ ಪರವಾಗಿಲ್ಲ ಎಂಬ ಮನಸ್ಥಿತಿಯಲ್ಲಿ ಆರ್ಯವರ್ಧನ್​ ಗುರೂಜಿ ಇದ್ದರು. ಆದರೆ ಈ ವಾರ ಎಲಿಮಿನೇಷನ್​ ಇಲ್ಲ ಎಂಬ ಸತ್ಯ ಗೊತ್ತಾದಾಗ ಅವರು ಕಣ್ಣೀರು ಹಾಕಿದರು.

BBK9: 50 ದಿನಕ್ಕೆ ಅಚ್ಚರಿ​ ನೀಡಿದ ಬಿಗ್​ ಬಾಸ್​; ಈ ವಾರ ಆಗಲೇ ಇಲ್ಲ ಎಲಿಮಿನೇಷನ್​; ಆದ್ರೂ ಇತ್ತು ಶಾಕ್​
ಕಿಚ್ಚ ಸುದೀಪ್
TV9 Web
| Edited By: |

Updated on: Nov 13, 2022 | 10:12 PM

Share

‘ಬಿಗ್​ ಬಾಸ್​ ಕನ್ನಡ ಸೀಸನ್​ 9’ (Bigg Boss Kannada Season 9) ರಿಯಾಲಿಟಿ ಶೋನಲ್ಲಿ 50 ದಿನ ಕಳೆದಿದೆ. ಈವರೆಗೂ ಈ ಸೀಸನ್​ನಲ್ಲಿ 6 ಮಂದಿ ಬಿಗ್​ ಬಾಸ್​ ಮನೆಯಿಂದ ಔಟ್​ ಆಗಿದ್ದಾರೆ. ಆದರೆ 7ನೇ ವಾರದಲ್ಲಿ ಅಚ್ಚರಿ ನೀಡಲಾಗಿದೆ. ಯಾಕೆಂದರೆ ಈ ವಾರ ಯಾರೂ ಕೂಡ ಎಲಿಮಿನೇಟ್​ ಆಗಿಲ್ಲ. ಆರ್ಯವರ್ಧನ್​ ಗುರೂಜಿ (Aryavardhan Guruji), ರೂಪೇಶ್​ ರಾಜಣ್ಣ, ಅನುಪಮಾ ಗೌಡ, ಅರುಣ್​ ಸಾಗರ್​, ಅಮೂಲ್ಯ ಗೌಡ, ದಿವ್ಯಾ ಉರುಡುಗ ಅವರು ನಾಮಿನೇಟ್​ ಆಗಿದ್ದರು. ಶನಿವಾರವೇ ಕಿಚ್ಚ ಸುದೀಪ್ ​(Kichcha Sudeep) ಅವರು ಎಲಿಮಿನೇಷನ್​ ಪ್ರಕ್ರಿಯೆ ಆರಂಭಿಸಿದರು. ಭಾನುವಾರದ ಎಪಿಸೋಡ್​ನಲ್ಲೂ ಸ್ಪರ್ಧಿಗಳ ಎದೆಯಲ್ಲಿ ಢವ ಢವ ಜೋರಾಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ಎಲಿಮಿನೇಷನ್​ ಇಲ್ಲ ಎಂಬುದನ್ನು ಬಿಗ್​ ಬಾಸ್​ ಘೋಷಿಸಿದರು.

ಎಲಿಮಿನೇಷನ್​ ಪ್ರಕ್ರಿಯೆಯ ಕೊನೇ ಹಂತದಲ್ಲಿ ರೂಪೇಶ್​ ರಾಜಣ್ಣ ಮತ್ತು​ ಆರ್ಯವರ್ಧನ್​ ಗುರೂಜಿ ಅವರು ಡೇಂಜರ್​ ಝೋನ್​ನಲ್ಲಿ ಇದ್ದರು. ಅಂತಿಮವಾಗಿ ಆರ್ಯವರ್ಧನ್​ ಎಲಿಮಿನೇಟ್​ ಎಂದು ಸುದೀಪ್​ ಹೇಳಿದರು. ಎಲ್ಲರಿಗೂ ವಿದಾಯ ಹೇಳಿ, ದೊಡ್ಮನೆಯಿಂದ ಹೊರಡಲು ಗುರೂಜಿ ಸಿದ್ಧವಾದರು. ಆದರೆ ಬಾಗಿಲು ಬಳಿ ಬಂದು ನಿಂತ ಅವರಿಗೆ ಶಾಕ್ ಕಾದಿತ್ತು. ಹೊರಹೋಗಲು ಬಾಗಿಲು ತೆರೆಯಲೇ ಇಲ್ಲ! ‘ಈ ವಾರ ಎಲಿಮಿನೇಷನ್​ ಇಲ್ಲ. ಹಾಗಾಗಿ ಆರ್ಯವರ್ಧನ್​ ವಾಪಸ್​ ಮನೆ ಒಳಗೆ ಹೋಗಬೇಕು’ ಎಂದು ಘೋಷಿಸಿದಾಗ ಎಲ್ಲರೂ ಖುಷಿಯಿಂದ ಕುಣಿದಾಡಿದರು.

ಭಾನುವಾರದ ಸಂಚಿಕೆ ಶುರುವಾದಾಗ ಎಲಿಮಿನೇಟ್​ ಆದರೂ ಪರವಾಗಿಲ್ಲ ಎಂಬ ಮನಸ್ಥಿತಿಯಲ್ಲಿ ಆರ್ಯವರ್ಧನ್​ ಗುರೂಜಿ ಇದ್ದರು. ಮಗಳನ್ನು ನೋಡಬೇಕು ಎಂಬ ತವಕ ಅವರಲ್ಲಿ ಹೆಚ್ಚಾಗಿತ್ತು. ಅದಕ್ಕಾಗಿ ಅವರು ತುದಿಗಾಲಿನಲ್ಲಿ ನಿಂತಿದ್ದರು. ಅಂತಿಮ ಹಂತದಲ್ಲಿ ‘ನನ್ನನ್ನೇ ಕಳಿಸಿ, ರೂಪೇಶ್​ ರಾಜಣ್ಣ ಅವರನ್ನು ಉಳಿಸಿಕೊಳ್ಳಿ’ ಎಂದು ಓಪನ್​ ಆಗಿಯೇ ಅವರು ಹೇಳಿದ್ದರು. ಆದರೆ ಅವರು ನಿರೀಕ್ಷಿಸಿದಂತೆ ಆಗಲಿಲ್ಲ. ತಾವು ಎಲಿಮಿನೇಟ್​ ಆಗುತ್ತಿಲ್ಲ ಎಂಬ ಸತ್ಯ ಗೊತ್ತಾದಾಗ ಆರ್ಯವರ್ಧನ್​ ಗುರೂಜಿ ಅವರು ಕಣ್ಣೀರು ಹಾಕಿದರು.

ಇದನ್ನೂ ಓದಿ
Image
Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
Image
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
Image
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
Image
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

ಬಿಗ್​ ಬಾಸ್​ ಶೋ 50 ದಿನ ಪೂರೈಸಿದ್ದಕ್ಕಾಗಿ ವಿಶೇಷ ವಿಡಿಯೋ ಪ್ರದರ್ಶಿಸಲಾಯಿತು. ಅದನ್ನು ನೋಡಿ ಸ್ಪರ್ಧಿಗಳೆಲ್ಲರೂ ಖುಷಿಪಟ್ಟರು. ತಮ್ಮ ಜರ್ನಿಯನ್ನು ತಾವೇ ನೋಡಿ ಎಲ್ಲರ ಮುಖದಲ್ಲೂ ನಗು ಮೂಡಿತು. ಇನ್ನೂ ಚೆನ್ನಾಗಿ ಆಡಬೇಕು ಎಂಬ ಹುಮ್ಮಸ್ಸು ಎಲ್ಲರಿಗೂ ಬಂದಿದೆ.

ಕಿಚ್ಚನ ಚಪ್ಪಾಳೆ ಪಡೆದ ರಾಕೇಶ್​ ಅಡಿಗ:

ಬಿಗ್​ ಬಾಸ್​ ಒಟಿಟಿ ಶೋನಿಂದ ಟಿವಿ ಸೀಸನ್​ಗೆ ಎಂಟ್ರಿ ಪಡೆದು ಎಲ್ಲರ ಗಮನ ಸೆಳೆಯುತ್ತಿರುವ ರಾಕೇಶ್​ ಅಡಿಗ ಅವರು ಈ ವಾರ ಕಿಚ್ಚನ ಚಪ್ಪಾಳೆ ಪಡೆದುಕೊಂಡಿದ್ದಾರೆ. 50 ದಿನಗಳ ಪರ್ಫಾರ್ಮೆನ್ಸ್​ ಆಧರಿಸಿ ಅವರಿಗೆ ಈ ವಾರ ಚಪ್ಪಾಳೆ ನೀಡಲಾಗಿದೆ. 12 ಸ್ಪರ್ಧಿಗಳ ನಡುವೆ ಈಗ ಪೈಪೋಟಿ ಮುಂದುವರಿದಿದೆ. ಕಳೆದ ವಾರ ಸಾನ್ಯಾ ಐಯ್ಯರ್​ ಎಲಿಮಿನೇಟ್​ ಆಗಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?