
ಬಿಗ್ಬಾಸ್ ಸೀಸನ್ ಪ್ರಾರಂಭವಾಗಿದೆ. ಕನ್ನಡ ಮಾತ್ರವೇ ಅಲ್ಲದೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಬಿಗ್ಬಾಸ್ ಸೀಸನ್ ಪ್ರಾರಂಭ ಆಗಿದ್ದು, ಎಲ್ಲೆಡೆ ಒಂದೇ ದಿನ ಕಾರ್ಯಕ್ರಮ ಶುರುವಾಗಿದೆ. ಬಿಗ್ಬಾಸ್ನಲ್ಲಿ ನಾನಾ ರೀತಿಯ ವ್ಯಕ್ತಿತ್ವದ ಸ್ಪರ್ಧಿಗಳು ಬರುತ್ತಾರೆ. ಜನರ ಗಮನ ಸೆಳೆಯಲು ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ತಮಿಳು ಬಿಗ್ಬಾಸ್ನಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಬಿಗ್ಬಾಸ್ ಶುರು ಆಗಿ ಒಂದೇ ದಿನಕ್ಕೆ ಸ್ಪರ್ಧಿಯೊಬ್ಬ ಬಿಗ್ಬಾಸ್ ಮನೆಯಿಂದ ಎಸ್ಕೇಪ್ ಆಗಲು ಯತ್ನಿಸಿದ್ದಾನೆ.
ತಮಿಳಿನಲ್ಲಿ ಬಿಗ್ ಬಾಸ್ ಸೀಸನ್ 10 ಅನ್ನು ನಟ ವಿಜಯ್ ಸೇತುಪತಿ ನಿರೂಪಣೆ ಮಾಡುತ್ತಿದ್ದಾರೆ. ಈ ಬಾರಿಯ ಸೀಸನ್ ಒಳ್ಳೆಯ ಆರಂಭವನ್ನು ಪಡೆದುಕೊಂಡಿದೆ. ಆದರೆ ಶೋ ಶುರುವಾಗಿ ಒಂದು ದಿನ ಮುಗಿಯುತ್ತಿದ್ದಂತೆ ಒಬ್ಬ ಸ್ಪರ್ಧಿ ಮನೆಯಿಂದಲೇ ಎಸ್ಕೇಪ್ ಆಗುವ ಯತ್ನ ಮಾಡಿದ್ದಾನೆ. ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕನ್ನಡ ಬಿಗ್ಬಾಸ್ ಆರಂಭವಾದ ದಿನವೇ ತಮಿಳು ಸೀಸನ್ ಸಹ ಆರಂಭವಾಗಿದ್ದು 19 ಸ್ಪರ್ಧಿಗಳು ಶೋನಲ್ಲಿ ಭಾಗವಹಿಸಿದ್ದಾರೆ. ಇವರುಗಳಲ್ಲಿ ‘ಕುಕ್ ವಿತ್ ಕೋಮಲಿ’ ಕಾರ್ಯಕ್ರಮದ ಮೂಲಕ ಜನಪ್ರಿಯರಾದ ಅನ್ಸರ್ ಕೂಡ ಇದರಲ್ಲಿ ಪಾಲ್ಗೊಂಡಿದ್ದರು. ಆದರೆ ಕಾರ್ಯಕ್ರಮ ಆರಂಭವಾದ ಎರಡೇ ದಿನಕ್ಕೆ ಅನ್ಸರ್, ಬಿಗ್ಬಾಸ್ ಮನೆಯಿಂದ ಹೊರಗೆ ಹೋಗುವ ಪ್ರಯತ್ನ ಮಾಡಿದ್ದಾರೆ. ಅನ್ಸರ್, ಮೊದಲಿಗೆ ಬಿಗ್ಬಾಸ್ನ ಮುಖ್ಯ ಗೇಟನ್ನು ತಟ್ಟಿದ್ದಾರೆ. ಯಾರೂ ತೆರೆಯದಿದ್ದಾಗ ಗೋಡೆ ಹತ್ತಿ ಮೇಲೆ ಹೋಗಿದ್ದಾರೆ. ಆದರೆ ಅವರು ಹೊರಗೆ ಹೋಗಲು ಯಶಸ್ವಿ ಆಗಿದ್ದಾರೆ ಇಲ್ಲವೋ ಎಂಬುದು ಖಾತ್ರಿ ಆಗಿಲ್ಲ.
ಅನ್ಸರ್, ಗೋಡೆ ಹತ್ತಿ ಹೊರಗೆ ಹೋಗುವ ಪ್ರಯತ್ನ ಮಾಡುತ್ತಿರುವ ವಿಡಿಯೋ ಅನ್ನು ತಮಿಳು ಬಿಗ್ಬಾಸ್ ಹಂಚಿಕೊಂಡಿದೆ. ಆದರೆ ಅನ್ಸರ್ ಹೊರಗೆ ಹೋಗಲು ಯಶಸ್ವಿ ಆಗಿದ್ದಾರಾ ಇಲ್ಲವಾ ಎಂಬುದು ತಿಳಿದಿಲ್ಲ. ಆದರೆ ವಿಡಿಯೋನಲ್ಲಿ ತೋರಿಸಿರುವಂತೆ ಅನ್ಸರ್ ಗೋಡೆಯನ್ನು ಹತ್ತಿ ಬಹುತೇಕ ಮೇಲೆ ತಲುಪಿದ್ದಾರೆ. ಆದರೆ ಅಲ್ಲಿಂದ ಆಚೆ ಬದಿಗೆ ಇಳಿಯಲು ಯಶಸ್ವಿ ಆಗಿದ್ದಾರೆಯೇ ಇಲ್ಲವೇ ಎಂಬುದು ತಿಳಿದು ಬಂದಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:23 am, Wed, 9 September 26