ಕೈ-ಕೈ ಮಿಲಾಸಿಯಿಸಿದ ಬಿಗ್​​ಬಾಸ್ ಸ್ಪರ್ಧಿಗಳು, ಭಾರಿ ಹೊಡೆದಾಟ

Bigg Boss: ಬಿಗ್​​ಬಾಸ್ ಮನೆಯಲ್ಲಿ ಜಗಳಗಳು ನಡೆಯುವುದು ತೀರಾ ಸಾಮಾನ್ಯ. ಆದರೆ ನಿಯಮದ ಪ್ರಕಾರ ಯಾವ ಸ್ಪರ್ಧಿಯೂ ಸಹ ಮತ್ತೊಬ್ಬ ಸ್ಪರ್ಧಿಯ ಮೇಲೆ ಕೈ ಮಾಡುವಂತಿಲ್ಲ. ಆಗೊಮ್ಮೆ ಕೈ ಮಾಡಿದರೆ ಮನೆಯಿಂದ ಎಲಿಮಿನೇಟ್ ಮಾಡಲಾಗುತ್ತದೆ. ಆದರೆ ಇದೀಗ ಬಿಗ್​​ಬಾಸ್ ಮನೆಯಲ್ಲಿ ಭಾರಿ ಗಲಾಟೆಯೇ ನಡೆದಿದೆ. ಇಬ್ಬರು ಸ್ಪರ್ಧಿಗಳು ಬೀದಿ ರೌಡಿಗಳಂತೆ ಹೊಡೆದಾಡಿಕೊಂಡಿದ್ದಾರೆ.

ಕೈ-ಕೈ ಮಿಲಾಸಿಯಿಸಿದ ಬಿಗ್​​ಬಾಸ್ ಸ್ಪರ್ಧಿಗಳು, ಭಾರಿ ಹೊಡೆದಾಟ
Bigg Boss Tamil 09

Updated on: Nov 05, 2025 | 1:06 PM

ಬಿಗ್​​ಬಾಸ್ (Bigg Boss) ಮನೆಯಲ್ಲಿ ಜಗಳ ಸಾಮಾನ್ಯ ಆದರೆ, ಬಿಗ್​​ಬಾಸ್ ಮನೆಗೆ ಹೋಗುವ ಮುಂಚೆಯೇ ಸ್ಪರ್ಧಿಗಳಿಗೆ ಷರತ್ತು ವಿಧಿಸಲಾಗಿರುತ್ತದೆ, ಯಾರೂ ಸಹ ಯಾರ ಮೇಲೂ ಸಹ ಹಲ್ಲೆ ಮಾಡಬಾರದು, ಕೈ ಎತ್ತಬಾರದು ಎಂದು. ಒಂದೊಮ್ಮೆ ಹೀಗೆ ಯಾರ ವಿರುದ್ಧವಾದರೂ ಕೈ ಎತ್ತಿದರೆ ಕೂಡಲೇ ಆ ಸ್ಪರ್ಧಿಯನ್ನು ಎಲಿಮಿನೇಟ್ ಮಾಡಲಾಗುತ್ತದೆ. ಕನ್ನಡ ಶೋನಲ್ಲಿ ಈ ಹಿಂದೆ ಹೀಗೆ ಸಹ ಸ್ಪರ್ಧಿಯ ಮೇಲೆ ಕೈ ಮಾಡಿದವರನ್ನು ಎಲಿಮಿನೇಟ್ ಮಾಡಲಾಗಿದೆ. ಆದರೆ ಇದೀಗ ಮತ್ತೊಮ್ಮೆ ಇಂಥಹುದೇ ಒಂದು ಘಟನೆ ನಡೆದಿದೆ, ಆದರೆ ಕನ್ನಡ ಬಿಗ್​​ಬಾಸ್​​ನಲ್ಲಿ ಅಲ್ಲ ಬದಲಿಗೆ ತಮಿಳು ಬಿಗ್​​ಬಾಸ್​​ನಲ್ಲಿ.

ತಮಿಳು ಬಿಗ್​​ಬಾಸ್ ಸೀಸನ್ 09 ನಡೆಯುತ್ತಿದ್ದು, ಶೋ ಪ್ರಾರಂಭವಾಗಿ ಐದು ವಾರಗಳಾಗಿವೆ. ಮನೆಯಲ್ಲಿ ಹೆಚ್ಚಿನ ಸಂಖ್ಯೆಯ ಸದಸ್ಯರು ಇದ್ದಾರೆ. ಇದೀಗ ಇಬ್ಬರು ಸ್ಪರ್ಧಿಗಳ ಮಧ್ಯೆ ಜಗಳ ಶುರುವಾಗಿದ್ದು ಈ ಜಗಳದಲ್ಲಿ ಇನ್ನೂ ಕೆಲವು ಮಂದಿ ಪಾಲ್ಗೊಳ್ಳುವ ಮೂಲಕ ದೊಡ್ಡ ಗಲಾಟೆಯಾಗಿ ಮಾರ್ಪಟ್ಟಿದೆ ಇಬ್ಬರು ಸ್ಪರ್ಧಿಗಳು ಪರಸ್ಪರ ಕೈ-ಕೈ ಮಿಲಾಯಿಸಿದ್ದು, ಒಬ್ಬರ ತಲೆಗೆ ಪೆಟ್ಟು ಬಿದ್ದಿದೆ.

ಇದನ್ನೂ ಓದಿ:ಡೆವಿಲ್ ಸಿನಿಮಾದಲ್ಲಿ ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟ 

ತಮಿಳು ಬಿಗ್​​ಬಾಸ್ ಮನೆಯಲ್ಲಿ ಸ್ಪರ್ಧಿಗಳಾದ ಕಮುರುದ್ಧೀನ್ ಮತ್ತು ಪ್ರವೀಣ್ ರಾಜ್ ವಿರುದ್ಧ ಜಗಳ ಉಂಟಾಗಿದೆ. ಬಿಡುಗಡೆ ಆಗಿರುವ ಪ್ರೋಮೋನಲ್ಲಿ ತೋರಿಸಿರುವಂತೆ, ಪ್ರವೀಣ್ ಯಾವುದೋ ವಿಚಾರಕ್ಕೆ ಕಮರುದ್ಧೀನ್ ಗೆ ಟಾಂಗ್ ಕೊಡುತ್ತಿದ್ದರು ಆದರೆ ಇದರಿಂದ ಸಿಟ್ಟಾದ ಕಮುರುದ್ಧೀನ್ ಏಕಾ-ಏಕಿ ಪ್ರವೀಣ್ ಮೇಲೆ ಏರಿ ಬಂದಿದ್ದಾರೆ. ಮೊದಲ ಬಾರಿಗೆ ಇತರೆ ಸ್ಪರ್ಧಿಗಳೆಲ್ಲ ಸೇರಿ ಕಮರುದ್ಧೀನ್ ಅನ್ನು ತಡೆದಿದ್ದಾರಾದರೂ ಬಳಿಕ ಪ್ರವೀಣ್ ಸಹ ಮುಂದೆ ಬಂದು ಕಮರುದ್ಧೀನ್​​ಗೆ ಒದೆಯಲು ಯತ್ನಿಸಿದ್ದಾರೆ. ಆಗ ಕಮರುದ್ಧೀನ್ ಕೈ ಬೀಸಿ ಪ್ರವೀಣ್ ಮುಖಕ್ಕೆ ಹೊಡೆದಿದ್ದಾರೆ. ಏಟಿನ ರಭಸಕ್ಕೆ ಪ್ರವೀಣ್ ನೆಲಕ್ಕೆ ಬಿದ್ದಿದ್ದಾರೆ.

ಈ ಜಗಳದಲ್ಲಿ ಇತರೆ ಕೆಲ ಸ್ಪರ್ಧಿಗಳು ಸಹ ಪರಸ್ಪರ ಎಳೆದಾಡಿರುವುದು ಪ್ರೋಮೊನಲ್ಲಿ ಕಾಣಿಸಿದೆ ಮಾತ್ರವಲ್ಲದೆ ಕಮುರುದ್ಧೀನ್ ಅವರ ಧರಿಸಿದ್ದ ಅಂಗಿಯನ್ನು ಸಹ ಹರಿಯಲಾಗಿದೆ. ಆದರೆ ಇಬ್ಬರ ನಡುವೆ ಸ್ಪಷ್ಟವಾಗಿ ಯಾವ ಕಾರಣಕ್ಕೆ ಜಗಳ ಶುರುವಾಗಿದೆ ಎಂಬುದು ಪ್ರೋಮೋದಿಂದ ತಿಳಿದು ಬಂದಿಲ್ಲ. ವಿಜಯ್ ಸೇತುಪತಿ ಈ ಶೋನ ನಿರೂಪಕರಾಗಿದ್ದು, ಈ ಇಬ್ಬರ ಜಗಳದ ಬಗ್ಗೆ ಅವರ ವ್ಯಾಖ್ಯೆ ಏನಿರಲಿದೆ ಎಂಬುದು ಶನಿವಾರ ತಿಳಿಯಲಿದೆ.

ತಮಿಳು ಬಿಗ್​​ಬಾಸ್ ಮನೆಯಲ್ಲಿ ಪ್ರಸ್ತುತ 20 ಮಂದಿ ಸ್ಪರ್ಧಿಗಳಿದ್ದಾರೆ. ಇತ್ತೀಚೆಗಷ್ಟೆ ನಾಲ್ಕು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಬಿಗ್​​ಬಾಸ್ ಮನೆಯಲ್ಲಿ ನಾಮಿನೇಷನ್ ಸಹ ಈ ಬಾರಿ ಜೋರಾಗಿ ಆಗಿದೆ. ಬರೋಬ್ಬರಿ 12 ಮಂದಿ ನಾಮಿನೇಟ್ ಆಗಿದ್ದಾರೆ. ನಾಮಿನೇಟ್ ಆದವರಲ್ಲಿ ಪ್ರವೀಣ್ ಮತ್ತು ಕಮರುದ್ಧೀನ್ ಸಹ ಇದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ