ಬಿಗ್ಬಾಸ್ಗೆ ಹೋಗಿದ್ದಕ್ಕೆ ನನ್ನ ಚಪ್ಪಲಿಯಲ್ಲಿ ನಾನು ಹೊಡೆದುಕೊಳ್ಳುವೆ: ಮಾಜಿ ಸ್ಪರ್ಧಿ
Bigg Boss reality show: ಬಿಗ್ಬಾಸ್ ಹಲವರ ಜೀವನವನ್ನೇ ಬದಲಾಯಿಸಿದೆ. ಬಿಗ್ಬಾಸ್ನಲ್ಲಿ ಪಾಲ್ಗೊಂಡ ನಟ-ನಟಿಯರ ವೃತ್ತಿ ಜೀವನಕ್ಕೆ ಏಣಿಯೂ ಆದ ಉದಾಹರಣೆಗಳು ಸಾಕಷ್ಟಿವೆ. ಬಿಗ್ಬಾಸ್ಗೆ ಹೋಗಿದ್ದಕ್ಕೆ ದೊರಕಿದ ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಂಡು ಬದುಕುತ್ತಿರುವವರು ಸಾಕಷ್ಟು ಮಂದಿ ಇದ್ದಾರೆ. ಆದರೆ ಇಲ್ಲೊಬ್ಬ ಮಾಜಿ ಸ್ಪರ್ಧಿ, ಬಿಗ್ಬಾಸ್ ಶೋಗೆ ಹೋಗಿದ್ದಕ್ಕೆ ನನ್ನ ಚಪ್ಪಲಿಯಲ್ಲಿ ನಾನು ಹೊಡೆದುಕೊಳ್ಳಬೇಕು ಅನಿಸಿದೆ’ ಎಂದಿದ್ದಾರೆ.

ಬಿಗ್ಬಾಸ್ (Bigg Boss) ಶೋ ಹಲವರಿಗೆ ಜನಪ್ರಿಯತೆ ನೀಡಿದೆ, ಹಲವರ ಜೀವನವನ್ನೇ ಬದಲಾಯಿಸಿ ಬಿಟ್ಟಿದೆ. ಬಿಗ್ಬಾಸ್ನಲ್ಲಿ ಪಾಲ್ಗೊಂಡ ನಟ-ನಟಿಯರ ವೃತ್ತಿ ಜೀವನಕ್ಕೆ ಏಣಿಯೂ ಆದ ಉದಾಹರಣೆಗಳು ಸಾಕಷ್ಟಿವೆ. ಬಿಗ್ಬಾಸ್ಗೆ ಹೋಗಿದ್ದಕ್ಕೆ ದೊರಕಿದ ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಂಡು ಬದುಕುತ್ತಿರುವವರು ಸಾಕಷ್ಟು ಮಂದಿ ಮಾಜಿ ಸ್ಪರ್ಧಿಗಳು ಇದ್ದಾರೆ. ಆದರೆ ಇಲ್ಲೊಬ್ಬ ಮಾಜಿ ಸ್ಪರ್ಧಿ, ಬಿಗ್ಬಾಸ್ ಶೋಗೆ ಹೋಗಿದ್ದಕ್ಕೆ ನನ್ನ ಚಪ್ಪಲಿಯಲ್ಲಿ ನಾನು ಹೊಡೆದುಕೊಳ್ಳಬೇಕು ಅನಿಸಿದೆ’ ಎಂದಿದ್ದಾರೆ. ಆ ಮೂಲಕ ಬಿಗ್ಬಾಸ್ ಶೋ ಅನ್ನು ತೀವ್ರವಾಗಿ ನಿಂದಿಸಿದ್ದಾರೆ.
ಅಂದಹಾಗೆ, ಹೀಗೆ ಬಿಗ್ಬಾಸ್ ಅನ್ನು ನಿಂದಿಸಿರುವ ಸ್ಪರ್ಧಿ ಕನ್ನಡದವರಲ್ಲ ಬದಲಿಗೆ ತೆಲುಗು ಬಿಗ್ಬಾಸ್ನಲ್ಲಿ ಭಾಗವಹಿಸಿದ್ದ ಮಾಜಿ ಸ್ಪರ್ಧಿ, ನಿರೂಪಕಿ ವಿಷ್ಣುಪ್ರಿಯ. ಕಳೆದ ತೆಲುಗು ಬಿಗ್ಬಾಸ್ ಸೀಸನ್ನಲ್ಲಿ ವಿಷ್ಣುಪ್ರಿಯ ಭಾಗವಹಿಸಿದ್ದರು. ಬಿಗ್ಬಾಸ್ ತೆಲುಗು 8ರ ಸ್ಪರ್ಧಿ ಆಗಿದ್ದರು ವಿಷ್ಣುಪ್ರಿಯ. ಶೋನಲ್ಲಿ ಚೆನ್ನಾಗಿಯೇ ಆಡಿದ್ದ ವಿಷ್ಣುಪ್ರಿಯ 98 ದಿನಗಳ ಕಾಲ ಮನೆಯಲ್ಲಿದ್ದರು, ಫಿನಾಲೆ ವಾರದ ಹಿಂದಿನ ವಾರ ಎಲಿಮಿನೇಟ್ ಆಗಿ ಹೊರಬಂದರು.
ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ವಿಷ್ಣುಪ್ರಿಯ, ‘ನಾನು ಯಾಕಾದರೂ ಬಿಗ್ಬಾಸ್ಗೆ ಹೋದೆನೋ ಎಂದು ಬಹಳ ಬಾರಿ ಅಂದುಕೊಂಡಿದ್ದೇನೆ. ಆ ಶೋಗೆ ಹೋಗಿದ್ದಕ್ಕೆ ನನ್ನ ಚಪ್ಪಲಿಯಲ್ಲಿ ನಾನು ಹೊಡೆದುಕೊಳ್ಳಬೇಕು. ನಾನು ಆ ಶೋನಲ್ಲಿ ಬಹಳ ಹಿಂಸೆ ಅನುಭವಿಸಿದೆ. ನಿದ್ದೆ ಇಲ್ಲ, ಊಟ ಸರಿಯಿಲ್ಲ, ಸಮಯಕ್ಕೆ ಸರಿಯಾಗಿ ಕಾಫಿ, ಟೀಗಳು ಸಹ ಸಿಗುತ್ತಿರಲಿಲ್ಲ. ಒಟ್ಟಾರೆ ಬಹಳ ಕಷ್ಟಪಟ್ಟಿದ್ದೇನೆ’ ಎಂದಿದ್ದಾರೆ ವಿಷ್ಣುಪ್ರಿಯ.
‘ನಾನು ಹೊಸ ಮನೆ ಖರೀದಿ ಮಾಡುವ ಆಸೆಯಿಂದ ಶೋಗೆ ಹೋದೆ. ಶೋನಲ್ಲಿ ಬರುವ ಸಂಭಾವನೆಯಿಂದ ಮನೆ ಖರೀದಿ ಮಾಡುವ ಯೋಚನೆ ಹಾಕಿಕೊಂಡಿದ್ದೆ. ಆದರೆ ಅದ್ಯಾವುದೂ ಆಗಲಿಲ್ಲ. ನಾನು ಈಗಲೂ ಹಳೆಯ ಮನೆಯಲ್ಲೇ ಇದ್ದೀನಿ. ಶೋನಿಂದ ಹೊರಬಂದ ಮೇಲೆ ಶೋ ಅನ್ನು ಚೆನ್ನಾಗಿ ಬೈಯ್ಯೋಣ ಅಂದುಕೊಂಡಿದ್ದೆ. ಆದರೆ ಶೋನಿಂದಾಗಿ ಜನರ ಪ್ರೀತಿ ನನಗೆ ಸಿಕ್ಕಿತು ಹಾಗಾಗಿ ಹೋಗ್ಲಿ ಬಿಡು ಎಂದು ಸುಮ್ಮನಾದೆ’ ಎಂದಿದ್ದಾರೆ ವಿಷ್ಣುಪ್ರಿಯ.
ಹೊರಗೆ ನಾನು ಆರಾಮ ಜೀವನಕ್ಕೆ ಹೊಂದಿಕೊಂಡಿದ್ದೆ. ಮೂರು ದಿನ ಕೆಲಸ ಮಾಡಿದರೆ ನಾಲ್ಕನೇ ದಿನ ರೆಸ್ಟ್ ತೆಗೆದುಕೊಳ್ಳುತ್ತಿದ್ದೆ. ಬಾಡಿ ಮಸಾಜ್ ಮಾಡಿಸಿಕೊಳ್ಳುತ್ತಿದ್ದೆ, ಹೈ-ಫೈ ಜೀವನಕ್ಕೆ ಹೊಂದಿಕೊಂಡಿದ್ದೆ. ಆದರೆ ಬಿಗ್ಬಾಸ್ ಶೋನಲ್ಲಿ ನರಕ ಅನುಭವಿಸಿದೆ. ಮಸಾಜ್ ಇಲ್ಲ, ಕಾಫಿ-ಟೀ ಇಲ್ಲ. ಸರಿಯಾಗಿ ನಿದ್ದೆ ಇಲ್ಲ, ಹೊಟ್ಟೆ ತುಂಬ ಊಟ ಸಹ ಇರುತ್ತಿರಲಿಲ್ಲ’ ಎಂದಿದ್ದಾರೆ ವಿಷ್ಣುಪ್ರಿಯ. ಆಂಖರ್ ಆಗಿ ಜನಪ್ರಿಯತೆ ಪಡೆದಿದ್ದ ವಿಷ್ಣುಪ್ರಿಯ. ಬಳಿಕ ಕೆಲ ತೆಲುಗು ಸಿನಿಮಾಗಳಲ್ಲಿಯೂ ನಟಿಸಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




