ಏಕಾಏಕಿ ತೆರೆಯಿತು ಬಿಗ್ ಬಾಸ್ ಮನೆಯ ಮುಖ್ಯದ್ವಾರ: ಯಾರ ಎದೆಯಲ್ಲಿ ಢವಢವ?
ಈ ವಾರ ಬಿಗ್ ಬಾಸ್ ಆಟದಲ್ಲಿ ಸ್ಪರ್ಧಿಗಳಿಗೆ ಯಾವುದೇ ಟಾಸ್ಕ್ ನೀಡಿಲ್ಲ. ಆದರೆ ಶಾಕ್ ನೀಡಲಾಗಿದೆ. ಏಕಾಏಕಿ ಬಿಗ್ ಬಾಸ್ ಮನೆಯ ಮುಖ್ಯದ್ವಾರ ತೆರೆಯಿತು. ಆಗ ಎಲ್ಲ ಸ್ಪರ್ಧಿಗಳಿಗೆ ಭಯ ಶುರುವಾಯಿತು. ಇಡೀ ಮನೆಯ ಸ್ಪರ್ಧಿಗಳು ಈ ವಾರ ನಾಮಿನೇಟ್ ಆಗಿದ್ದಾರೆ. ಹಾಗಾಗಿ ಎಲ್ಲರಿಗೂ ಆತಂಕ ಹೆಚ್ಚಾಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋನಲ್ಲಿ ಎಲ್ಲ ಸ್ಪರ್ಧಿಗಳಿಗೆ ಢವ ಢವ ಶುರುವಾಗಿದೆ. ಈ ಸೀಸನ್ನಲ್ಲಿ ಹಲವು ಅನಿರೀಕ್ಷಿತ ಘಟನೆಗಳು ನಡೆಯುತ್ತಿವೆ. ಕಳೆದ ವಾರ ಮಲ್ಲಮ್ಮ ಅವರು ದೊಡ್ಮನೆಯಿಂದ ಎಲಿಮಿನೇಟ್ ಆದರು. ಈ ವಾರ ಕೂಡ ಒಬ್ಬರ ಎಲಿಮಿನೇಷನ್ (Bigg Boss Elimination) ಆಗಲಿದೆ. ಇಡೀ ಮನೆ ನಾಮಿನೇಟ್ ಆಗಿದೆ. ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಮಾಳು ನಿಪನಾಳ, ರಕ್ಷಿತಾ ಶೆಟ್ಟಿ, ಅಭಿಷೇಕ್, ಧ್ರುವಂತ್, ಜಾಹ್ನವಿ, ಚಂದ್ರಪ್ರಭ, ಗಿಲ್ಲಿ ನಟ, ಧನುಶ್, ಕಾಕ್ರೋಚ್ ಸುಧಿ, ರಘು, ಸ್ಪಂದನಾ, ರಿಷಾ, ಕಾವ್ಯಾ, ಸೂರಜ್ ಅವರ ಪೈಕಿ ಯಾರು ಮನೆಯಿಂದ ಹೊರಗೆ ಹೋಗುತ್ತಾರೆ ಎಂಬ ಕೌತುಕ ಮೂಡಿದೆ.
ಬಿಗ್ ಬಾಸ್ ಆಟದಲ್ಲಿ 36ನೇ ದಿನ ಎಲ್ಲರಿಗೂ ಶಾಕ್ ಎದುರಾಯಿತು. ಏಕಾಏಕಿ ಬಿಗ್ ಬಾಸ್ ಮನೆಯ ಮುಖ್ಯದ್ವಾರ ಓಪನ್ ಆಯಿತು. ಎಲ್ಲರೂ ಸ್ಯೂಟ್ಕೇಸ್ ಪ್ಯಾಕ್ ಮಾಡಿಕೊಂಡು ಸಾಲಾಗಿ ನಿಲ್ಲುವಂತೆ ಸೂಚಿಸಲಾಯಿತು. ಒಬ್ಬೊಬ್ಬರಾಗಿಯೇ ತಮ್ಮ ಸ್ಯೂಟ್ಕೇಸನ್ನು ಮುಖ್ಯದ್ವಾರದಿಂದ ಹೊರಗೆ ಇಡುವಂತೆ ಬಿಗ್ ಬಾಸ್ ಸೂಚಿಸಿದರು. ಮೊದಲು ಅಶ್ವಿನಿ ಗೌಡ ಹೆಸರನ್ನು ಕರೆದಾಗ ಎಲ್ಲರಿಗೂ ಶಾಕ್ ಆಯಿತು.
ಆದರೆ ಈ ಸಂಚಿಕೆಯಲ್ಲಿ ಯಾರೂ ಎಲಿಮಿನೇಟ್ ಆಗಲಿಲ್ಲ. ಹಾಗಾದರೆ ಬಿಗ್ ಬಾಸ್ ಮುಖ್ಯ ದ್ವಾರ ಓಪನ್ ಆಗಿದ್ದು ಯಾಕೆ? ಅದಕ್ಕೆ ಒಂದು ಕಾರಣ ಇದೆ. ‘ಈ ವಾರಾಂತ್ಯದಲ್ಲಿ ಒಬ್ಬರು ಎಲಿಮಿನೇಟ್ ಆಗುವ ತನಕ ಈ ಮುಖ್ಯದ್ವಾರ ತೆರೆದೇ ಇರುತ್ತದೆ’ ಎಂದು ಬಿಗ್ ಬಾಸ್ ಹೇಳಿದರು. ಮನೆಯಲ್ಲಿ ಉಳಿಯುವುದು ಮತ್ತು ಮನೆಯಿಂದ ಹೊರಗೆ ಹೋಗುವುದರ ನಡುವೆ ಸಣ್ಣ ಅಂತರ ಇದೆ ಎಂಬುದನ್ನು ಎಲ್ಲ ಸ್ಪರ್ಧಿಗಳಿಗೆ ಎಚ್ಚರಿಸಲು ಹೀಗೆ ಮಾಡಲಾಯಿತು.
ಕಳೆದ ವಾರ ಮಾಳು ನಿಪನಾಳ ಅವರು ಡೇಂಜರ್ ಜೋನ್ನಲ್ಲಿ ಇದ್ದರು. ಮಾಳು ಮತ್ತು ಮಲ್ಲಮ್ಮ ಪೈಕಿ ಯಾರು ಹೊರಗೆ ಹೋಗುತ್ತಾರೆ ಎಂಬ ಕೌತುಕ ಮೂಡಿತ್ತು. ಅಂತಿಮವಾಗಿ ಮಲ್ಲಮ್ಮ ಎಲಿಮಿನೇಟ್ ಆದರು. ಈ ವಾರ ಮಾಳು ವೀಕ್ಷಕರ ಮನ ಗೆಲ್ಲದಿದ್ದರೆ ಅವರು ಎಲಿಮಿನೇಟ್ ಆಗುವ ಸಾಧ್ಯತೆ ಹೆಚ್ಚಿದೆ. ಅತಿಯಾಗಿ ವರ್ತಿಸುತ್ತಿರುವ ರಿಷಾ ಕೂಡ ದೊಡ್ಮನೆಯಿಂದ ಹೊರಗೆ ಹೋಗಬೇಕಾದ ಸಂದರ್ಭ ಬಂದರೂ ಅಚ್ಚರಿ ಏನಿಲ್ಲ.
ಇದನ್ನೂ ಓದಿ: ಸುದೀಪ್ ಎದುರೇ ರಿಷಾ ಎಲಿಮಿನೇಷನ್; ಸಾಲುಗಳ ಮೂಲಕ ಸೂಚನೆ ಕೊಟ್ಟ ಬಿಗ್ ಬಾಸ್
ಬಿಗ್ ಬಾಸ್ ಮನೆಯ ಮುಖ್ಯದ್ವಾರವನ್ನು ತೆಗೆದು ಇಟ್ಟಿರುವುದರಿಂದ ಧ್ರುವಂತ್ ಅವರಿಗೆ ಭಯ ಶುರುವಾಗಿದೆ. ತೆರೆದ ದ್ವಾರವನ್ನು ನೋಡಿದರೆ ಆ ರೀತಿ ಫೀಲ್ ಆಗುತ್ತದೆ ಎಂದು ಅವರು ಹೇಳಿದ್ದಾರೆ. ತಮಾಷೆಗೆ ಹೊರಗೆ ಕಾಲಿಟ್ಟರೂ ಕೂಡ ಕಷ್ಟ ಆಗುತ್ತದೆ ಎಂಬ ಅಭಿಪ್ರಾಯ ಕೂಡ ಬಂತು. ಈ ವಿಚಾರದಲ್ಲಿ ತಮಾಷೆ ಮಾಡಬಾರದು ಎಂದು ಗಿಲ್ಲಿಗೆ ಇನ್ನುಳಿದ ಸ್ಪರ್ಧಿಗಳು ಬುದ್ಧಿ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




