ಹೊಟ್ಟೆಯಲ್ಲಿರೋ ಮಗು ವಿಚಾರ ಹೇಳೇಬಿಟ್ಟ ಕರ್ಣ; ಶಾಕ್ ಆದ ನಿತ್ಯಾ
Karna Serial: ನಿತ್ಯಾ ಹಾಗೂ ತೇಜಸ್ನ ಒಂದು ಮಾಡಬೇಕು ಎಂದು ಕರ್ಣ ನಿರ್ಧರಿಸಿಯಾಗಿದೆ. ಈ ಕಾರಣದಿಂದಲೇ ಫೇಕ್ ಮದುವೆ ಮಾಡಿಕೊಂಡಿದ್ದಾನೆ ಕರ್ಣ. ಆದರೆ, ಇದು ಹೊರಗಿನ ಸಮಾಜಕ್ಕೆ ತಿಳಿದಿಲ್ಲ. ಇದರ ಜೊತೆಗೆ ನಿತ್ಯಾ ಪ್ರೆಗ್ನೆಂಟ್ ಎಂಬ ವಿಚಾರ ಕರ್ಣನಿಗೆ ಬಿಟ್ಟು ಇನ್ಯಾರಿಗೂ ತಿಳಿದಿರಲಿಲ್ಲ.

‘ಕರ್ಣ’ ಧಾರಾವಾಹಿಯಲ್ಲಿ ಸದ್ಯ ನಿತ್ಯಾ ಹಾಗೂ ಕರ್ಣ (Karna Serial) ಮಧ್ಯೆ ವಿವಾಹ ನಡೆದಿರುವುದು ವೀಕ್ಷಕರ ಅಸಮಾಧಾನಕ್ಕೆ ಕಾರಣ ಆಗಿದೆ. ನಿಧಿ ಅಭಿಮಾನಿಗಳು ಇದನ್ನು ಒಪ್ಪಿಕೊಳ್ಳುತ್ತಿಲ್ಲ. ಹೀಗಿರುವಾಗಲೇ ನಿತ್ಯಾ ಹೊಟ್ಟೆಯಲ್ಲಿ ಮಗು ಇದೆ ಎಂಬ ವಿಚಾರವನ್ನು ಹೇಳಲಾಗಿದೆ. ಇದನ್ನು ಕೇಳಿ ನಿತ್ಯಾ ಶಾಕ್ಗೆ ಒಳಗಾಗಿದ್ದಾಳೆ. ಕಥೆ ಯಾವ ರೀತಿಯಲ್ಲಿ ಸಾಗುತ್ತದೆ ಎಂಬ ಕುತೂಹಲ ಮೂಡಿದೆ.
ನಿತ್ಯಾ ಹಾಗೂ ತೇಜಸ್ ನಡುವೆ ಪ್ರೀತಿ ಮೂಡಿತ್ತು. ಇಬ್ಬರ ಮಧ್ಯೆ ಮದುವೆ ಕೂಡ ಏರ್ಪಡಬೇಕಿತ್ತು. ಇದಕ್ಕೆ ಎಲ್ಲ ತಯಾರಿ ಆಗಿತ್ತು. ಆದರೆ, ಕರ್ಣ ಹಾಗೂ ನಿಧಿಯನ್ನು ಬೇರೆ ಮಾಡಬೇಕು ಎಂಬ ಕಾರಣಕ್ಕೆ ತೇಜಸ್ನ ಕಿಡ್ನ್ಯಾಪ್ ಮಾಡಿಸಿ, ನಿತ್ಯಾ ಹಾಗೂ ಕರ್ಣ ಮದುವೆ ಆಗುವಂತೆ ಮಾಡಿದ್ದು ರಮೇಶ್. ಈ ಎಲ್ಲಾ ಬೆಳವಣಿಗೆ ಬಳಿಕ ಸಾಕಷ್ಟು ಕುತೂಹಲ ಮೂಡಿದೆ. ಈಗ ತೇಜಸ್ ಎಲ್ಲಿದ್ದಾನೆ ಎಂಬ ವಿಚಾರ ತಿಳಿದು ಕರ್ಣ ಹಾಗೂ ನಿತ್ಯಾ ಚಿಕ್ಕಮಗಳೂರಿಗೆ ತೆರಳಿದ್ದಾರೆ.
ನಿತ್ಯಾ ಹಾಗೂ ತೇಜಸ್ನ ಒಂದು ಮಾಡಬೇಕು ಎಂದು ಕರ್ಣ ನಿರ್ಧರಿಸಿಯಾಗಿದೆ. ಈ ಕಾರಣದಿಂದಲೇ ಫೇಕ್ ಮದುವೆ ಮಾಡಿಕೊಂಡಿದ್ದಾನೆ ಕರ್ಣ. ಆದರೆ, ಇದು ಹೊರಗಿನ ಸಮಾಜಕ್ಕೆ ತಿಳಿದಿಲ್ಲ. ಇದರ ಜೊತೆಗೆ ನಿತ್ಯಾ ಪ್ರೆಗ್ನೆಂಟ್ ಎಂಬ ವಿಚಾರ ಕರ್ಣನಿಗೆ ಬಿಟ್ಟು ಇನ್ಯಾರಿಗೂ ತಿಳಿದಿರಲಿಲ್ಲ.
ಇದನ್ನೂ ಓದಿ: ‘ಮಿಲನ’ ಕಥೆ ರೀತಿ ಸಾಗುತ್ತಿದೆ ‘ಕರ್ಣ’; ನಿತ್ಯಾ-ಸೂರಜ್ ಒಂದು ಮಾಡಲು ಮುಂದಾದ ಕರ್ಣ
ಕರ್ಣ ಹಾಗೂ ನಿತ್ಯಾ ಸದ್ಯ ಚಿಕ್ಕಮಗಳೂರಿಗೆ ತೆರಳಿದ್ದಾರೆ. ಅಲ್ಲಿ ತೇಜಸ್ ಕಾರಿನಲ್ಲಿ ಹೋಗೋದು ಕಂಡ ನಿತ್ಯಾ ಓಡೋಡಿ ಹೋಗಿದ್ದಾಳೆ. ಆಗ ಹಿಂದಿನಿಂದ ಬರುತ್ತಿದ್ದ ಟಿಟಿ ಅಪಘಾತ ಮಾಡುವುದರಲ್ಲಿ ಇತ್ತು. ಇದರಿಂದ ನಿತ್ಯಾ ತಪ್ಪಿಸಿಕೊಂಡಳು. ಆಗ ನಿತ್ಯಾಗೆ ಕರ್ಣ ಬೈದನು. ‘ನೀವು ನನ್ನ ಬಗ್ಗೆ ಕೇರ್ ಮಾಡೋದು ಬಿಡಿ’ ಎಂದು ನಿತ್ಯಾ ಬೇಡಿಕೊಂಡಳು. ‘ನನಗೆ ಯೋಚನೆ ಆಗುತ್ತಿರುವುದು ನಿಮ್ಮ ಬಗ್ಗೆ ಅಲ್ಲ. ನಿಮ್ಮ ಹೊಟ್ಟೆಯಲ್ಲಿರೋ ಮಗುವಿನ ಬಗ್ಗೆ’ ಎಂದು ಕರ್ಣ ಹೇಳಿದ್ದಾನೆ. ಇದನ್ನು ಕೇಳಿ ನಿತ್ಯಾ ಶಾಕ್ ಆಗಿದ್ದಾಳೆ. ಈಗ ಜನಿಸುತ್ತಿರೋ ಮಗು ಕರ್ಣನದ್ದೇ ಇರಬೇಕು ಎಂದು ನಿಧಿ ಕೂಡ ಭಾವಿಸೋ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



