‘ಸದಾಶಿವ ನಗರದಲ್ಲಿ ಮನೆ ಇದೆ, ಇದು 40 ಸಾವಿರ ರೂಪಾಯಿ ಬನಿಯನ್’; ಆಸ್ತಿ ವಿವರ ಹೇಳಿದ ಗಿಲ್ಲಿ ನಟ
ಬಿಗ್ ಬಾಸ್‌ನಲ್ಲಿ ರಿಷಾ ಸಿಂಪತಿ ಕಾರ್ಡ್ ಆರೋಪಕ್ಕೆ ಗಿಲ್ಲಿ, ತಾನು ಶ್ರೀಮಂತ ಎಂದು ಹೇಳಿದ್ದಾರೆ. "ಸದಾಶಿವನಗರದಲ್ಲಿ ಮನೆ, 40 ಸಾವಿರ ರೂಪಾಯಿ ಬನಿಯನ್, ಇಂಗ್ಲೆಂಡ್ ಪ್ಯಾಂಟ್ ಇದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಗಿಲ್ಲಿ ಮೂಲತಃ ರೈತಾಪಿ ಕುಟುಂಬದವರು. ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಕಷ್ಟಗಳನ್ನು ಅನುಭವಿಸಿದ್ದಾರೆ.

ಬಿಗ್ ಬಾಸ್ (Bigg Boss) ಮನೆಯಲ್ಲಿ ಸಿಂಪತಿ ಕಾರ್ಡ್ ಚೆನ್ನಾಗಿ ಕೆಲಸ ಮಾಡುತ್ತದೆ ಅನ್ನೋದು ಎಲ್ಲರಿಗೂ ಗೊತ್ತು. ಕೆಲವರು ಇದನ್ನು ಉದ್ದೇಶ ಪೂರ್ವಕವಾಗಿ ಮಾಡಿದರೆ, ಇನ್ನೂ ಕೆಲವರು ತಾವು ಇರೋದೇ ಹೀಗೆ ಎಂದು ಸಿಂಪಲ್ ಆಗಿರುತ್ತಾರೆ. ಕಳೆದ ಬಾರಿ ಬಿಗ್ ಬಾಸ್ ಮನೆಯಲ್ಲಿದ್ದ ಹನುಮಂತ ಲುಂಗಿ, ಶರ್ಟ್ನಲ್ಲೇ ಸೀಸನ್ ಕಳೆದರು. ಅವರು ವಿನ್ ಕೂಡ ಆದರು. ಈ ಬಾರಿ ಗಿಲ್ಲಿ ನಟ ಅವರು, ಬನಿಯನ್ನಲ್ಲೇ ಇರುತ್ತಿದ್ದಾರೆ. ಇದಕ್ಕೆ ರಿಷಾ ಬೇರೆ ಅರ್ಥ ಕೊಟ್ಟರು. ಅವರಿಗೆ ಗಿಲ್ಲಿ ಕೌಂಟರ್ ಕೊಟ್ಟಿದ್ದಾರೆ.
ಗಿಲ್ಲಿ ಹಾಗೂ ರಿಷಾ ಮಧ್ಯೆ ಸಾಕಷ್ಟು ಕಿತ್ತಾಟ ನಡೆದವು. ಗಿಲ್ಲಿ ಮೇಲೆ ಕೈ ಕೂಡ ಮಾಡಿದ್ದಾರೆ ರಿಷಾ. ಈ ವಿಚಾರದಲ್ಲಿ ಯಾವ ರೀತಿಯಲ್ಲಿ ಅವರಿಗೆ ಶಿಕ್ಷೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಹೀಗಿರುವಾಗಲೇ ‘ನೀನು ಸಿಂಪತಿಗಿಟ್ಟಿಸಿಕೊಳ್ಳಲು ಬನಿಯನ್ ಹಾಕಿ ಓಡಾಡ್ತೀಯಾ’ ಎಂದು ರಿಷಾ ಹೇಳಿದರು. ಇದಕ್ಕೆ ಗಿಲ್ಲಿ ಉತ್ತರಿಸಿದ್ದಾರೆ.
View this post on Instagram
‘ನಾನು ಶ್ರೀಮಂತ. ಶ್ರೀಮಂತರೂ ಬನಿಯನ್ ಹಾಕ್ತಾರೆ. ನಮ್ಮ ಅಪ್ಪಂದು ಐಟಿ ಕಂಪನಿ ಇದೆ. 500 ಶಿಪ್ ಇದೆ. 800 ಗೋವುಗಳು ಇವೆ. ಬೆಂಗಳೂರಿನ ಸದಾಶಿವನಗರದಲ್ಲಿ ನಾಲ್ಕು ಮನೆ ಇದೆ. ನಾವು ಫುಲ್ ಸೆಟಲ್ಡ್’ ಎಂದರು ಗಿಲ್ಲಿ. ಆ ಬಳಿಕ ಬಟ್ಟೆಗಳ ಬೆಲೆ ಹೇಳಿದರು. ‘ಈ ಬನಿಯನ್ ಬೆಲೆ 40 ಸಾವಿರ ರೂಪಾಯಿ. ಇದು ಇಂಗ್ಲೆಂಡ್ ಪ್ಯಾಂಟ್. ಇದನ್ನು ತೊಳಿಯಬೇಕು ಎಂದಿಲ್ಲ. ಕುಡುಗಿದ್ರೆ ಕೊಳೆ ಉದುರಿ ಹೋಗುತ್ತದೆ’ ಎಂದು ರಿಷಾ ಗೌಡಗೆ ಟಾಂಟ್ ಕೊಟ್ಟರು. ಈ ವಿಡಿಯೋನ ಗಿಲ್ಲಿ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ‘ನಿನ್ನ ಪಾಡಿಗೆ ನೀನಿರು, ನನ್ನ ಪಾಡಿಗೆ ನಾನಿರ್ತೀನಿ’; ಸೂರಜ್ಗೆ ನೇರವಾಗಿ ಹೇಳಿದ ರಾಶಿಕಾ
ಗಿಲ್ಲಿ ಸಾಕಷ್ಟು ಕಷ್ಟ ನೋಡಿದವರು. ಅವರು ರೈತಾಪಿ ಹಿನ್ನೆಲೆಯಿಂದ ಬಂದವರು. ಬೆಂಗಳೂರಿನಲ್ಲಿ ಅವರು ಒಂದು ಸಣ್ಣ ರೂಂನಲ್ಲಿ ಬಾಡಿಗೆ ಇದ್ದಾರೆ. ಲಗ್ಗೇರಿ ಬಳಿ ಅವರ ಬಾಡಿಗೆ ಮನೆ ಇದೆ. ಕಲಾ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರವನ್ನು ಹೇಳಿಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




