ಅಶ್ವಿನಿ ಸಹವಾಸ ಬಿಟ್ಟು ನೆಗೆಟಿವ್ ಶೇಡ್ನಿಂದ ಹೊರ ಬಂದ ಜಾನ್ವಿ
ಬಿಗ್ ಬಾಸ್ ಕನ್ನಡ 12 ರಲ್ಲಿ ಜಾನ್ವಿ ಅಶ್ವಿನಿ ಗೌಡ ಸಹವಾಸದಿಂದ ದೂರವಾದ ನಂತರ ಸಕಾರಾತ್ಮಕ ಬದಲಾವಣೆ ಕಂಡಿದ್ದಾರೆ. ಅವರ ಆರಂಭದ ದಿನಗಳಲ್ಲಿ ಅಶ್ವಿನಿ ಜೊತೆಗಿನ ನಿಕಟ ಬಾಂಧವ್ಯದಿಂದ ನಕಾರಾತ್ಮಕ ಇಮೇಜ್ ಸೃಷ್ಟಿಯಾಗಿತ್ತು. ಈಗ ಜಾನ್ವಿ ಹೊಸ ಗೆಳೆಯರೊಂದಿಗೆ ಬೆರೆತು, ಸಾಮಾಜಿಕ ಮಾಧ್ಯಮದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದಾರೆ.

ಬಿಗ್ ಬಾಸ್ (Bigg Boss) ಮನೆಯಲ್ಲಿ ಯಾವಾಗ ಯಾರು ಹೇಗೆ ಬದಲಾಗುತ್ತಾರೆ ಎಂದು ಹೇಳಲು ಸಾಧ್ಯವೇ ಇಲ್ಲ. ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿಯೂ ಹಾಗೆಯೇ ಆಗಿದೆ. ಅಶ್ವಿನಿ ಗೌಡ ಹಾಗೂ ಜಾನ್ವಿ ಅವರು ಒಟ್ಟಿಗೆ ಇರುತ್ತಿದ್ದರು. ಇವರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದ್ದನ್ನು ನೀವು ಕಾಣಬಹುದು. ಆದರೆ, ಈಗ ಇವರು ಬೇರೆ ಆಗಿದ್ದಾರೆ. ಇದಕ್ಕೆ ಕಾರಣ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ಸಹವಾಸ ಬಿಟ್ಟ ಬಳಿಕ ಅವರು ನೆಗೆಟಿವ್ ಶೇಡ್ನಿಂದ ಹೊರಕ್ಕೆ ಬಂದಿದ್ದಾರೆ ಎಂಬ ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿದೆ.
ಬಿಗ್ ಬಾಸ್ಗೆ ಬಂದಾಗ ಅಶ್ವಿನಿ ಗೌಡ ಹಾಗೂ ಜಾನ್ವಿ ಒಟ್ಟಾಗಿ ಸುತ್ತಾಡಿದ್ದನ್ನು ನೀವು ಕಾಣಬಹುದು. ದಿಗಳನು ಉರುಳಿದಂತೆ ಇವರ ಮಧ್ಯೆ ಬಾಂಧವ್ಯ ಹೆಚ್ಚಿತು. ಜೊತೆಗೆ ಚೇಷ್ಟೆ ಕೂಡ ಹೆಚ್ಚಿದವು. ಅಶ್ವಿನಿ ಗೌಡ ಹಾಗೂ ಜಾನ್ವಿ ಇಬ್ಬರೂ ಸೇರಿಕೊಂಡು ರಕ್ಷಿತಾ ಶೆಟ್ಟಿಗೆ ತೊಂದರೆ ಕೊಟ್ಟಿದ್ದನ್ನು ನೀವು ಕಂಡಿರಬಹುದು. ಇದರಿಂದಾಗಿ ಸುದೀಪ್ ಅವರು ಜಾನ್ವಿಗೆ ಪಾಠ ಹೇಳಿದರು.
ಆ ಬಳಿಕವೂ ಅವರು ಅಶ್ವಿನಿ ಸಹವಾಸನ್ನು ಬಿಟ್ಟಿಲ್ಲ ಎಂಬುದು ಇಲ್ಲಿ ಗಮನಿಸಲೇಬೇಕಾದ ವಿಚಾರ ಆಗಿತ್ತು. ಕೊನೆಗೂ ಎಚ್ಚೆತ್ತುಕೊಂಡ ಅವರು ಅಶ್ವಿನಿ ಸಹವಾಸದಿಂದ ದೂರ ಬಂದರು. ಕಡಿಮೆ ದಿನ ಇದ್ದರೂ ತೊಂದರೆ ಇಲ್ಲ, ಬಿಗ್ ಬಾಸ್ ಅಲ್ಲಿ ನೆಗೆಟಿವ್ ಆಗಿ ಕಾಣಿಸಿಕೊಳ್ಳಬೇಡ ಎಂದು ಜಾನ್ವಿಗೆ ಮನೆಯಲ್ಲಿ ಕಿವಿ ಮಾತು ಹೇಳಿದ್ದರಂತೆ. ಇದನ್ನು ನೆನೆದು ಜಾನ್ವಿ ಅವರು ಬೇಸರ ಮಾಡಿಕೊಂಡರು. ನಾನು ಹೇಗೆಲ್ಲ ಕಂಡಿರಬಹುದು ಎಂದು ಅವರಿಗೆ ಅನಿಸಿತು.
ಈಗ ಅಶ್ವಿನಿ ಗೌಡ ಅವರ ಸಹವಾಸವನ್ನು ಜಾನ್ವಿ ಅವರು ಸಂಪೂರ್ಣವಾಗಿ ತೊರೆದಿದ್ದಾರೆ. ಈ ಕಾರಣಕ್ಕೆ ಅವರು ಹೆಚ್ಚು ಹೈಲೈಟ್ ಆಗುತ್ತಿಲ್ಲ ನಿಜ. ಆದರೆ, ಅವರು ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅವರು ಸ್ಪಂದನಾ, ಕಾವ್ಯಾ ಇತರರ ಜೊತೆ ಬೆರೆಯುತ್ತಿದ್ದಾರೆ. ಇದು ಅನೇಕರ ಖುಷಿಗೆ ಕಾರಣ ಆಗಿದೆ.
ಇದನ್ನೂ ಓದಿ: ‘ನಿಮ್ಮನ್ನು ಕಳಿಸಿಯೇ ನಾನು ಹೋಗೋದು’; ಅಶ್ವಿನಿ ಎದುರು ಶಪಥ ಮಾಡಿದ ರಕ್ಷಿತಾ
ಜಾನ್ವಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪಾಸಿಟಿವ್ ಮಾತುಗಳನ್ನು ನೀವು ಕಾಣಬಹುದು. ಅವರು ಇನ್ನಷ್ಟು ದಿನ ದೊಡ್ಮನೆಯಲ್ಲಿ ಇರಲಿ ಎಂಬುದು ಅವರ ಫ್ಯಾನ್ಸ್ ಕೋರಿಕೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



