AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿನ್ನ ಪಾಡಿಗೆ ನೀನಿರು, ನನ್ನ ಪಾಡಿಗೆ ನಾನಿರ್ತೀನಿ’; ಸೂರಜ್​ಗೆ ನೇರವಾಗಿ ಹೇಳಿದ ರಾಶಿಕಾ

ಸೂರಜ್-ರಾಶಿಕಾ ಪ್ರೀತಿ ಕಥೆ ಅಂತ್ಯ ಆಗಿದೆ ಎಂದರೂ ತಪ್ಪಾಗಲಾರದು. ದೊಡ್ಮನೆಯಲ್ಲಿ ಸೂರಜ್ ಜೊತೆಗಿನ ನಿಕಟತೆಯನ್ನು ರಾಶಿಕಾ ಕಡಿತಗೊಳಿಸಿದ್ದಾರೆ. ಸುದೀಪ್ ಅವರ ಬುದ್ಧಿವಾದದ ನಂತರ ತಮ್ಮ ಆಟದ ಬಗ್ಗೆ ಗಂಭೀರವಾಗಿ ಯೋಚಿಸಿರುವ ರಾಶಿಕಾ, ಸೂರಜ್ ಜೊತೆ 'ನಾವು ಸ್ನೇಹಿತರು ಮಾತ್ರ' ಎಂದು ಸ್ಪಷ್ಟಪಡಿಸಿದ್ದಾರೆ.

‘ನಿನ್ನ ಪಾಡಿಗೆ ನೀನಿರು, ನನ್ನ ಪಾಡಿಗೆ ನಾನಿರ್ತೀನಿ’; ಸೂರಜ್​ಗೆ ನೇರವಾಗಿ ಹೇಳಿದ ರಾಶಿಕಾ
ಸೂರಜ್-ರಾಶಿಕಾ
ರಾಜೇಶ್ ದುಗ್ಗುಮನೆ
|

Updated on:Nov 04, 2025 | 12:34 PM

Share

ಸೂರಜ್ ಹಾಗೂ ರಾಶಿಕಾ (Rashika) ಮಧ್ಯೆ ಏನೋ ಇದೆ ಎಂದು ಎಲ್ಲರೂ ಭಾವಿಸಿದ್ದರು. ಇದಕ್ಕೆ ಅವರ ನಡೆಯೇ ಕಾರಣ. ಸೂರಜ್ ಕೈ ಹಿಡಿದುಕೊಂಡು ‘ಪ್ರೀತಿ ಹೇಗೆ ಹುಟ್ಟುತ್ತೆ ಅಂತ ಹೇಳೋಕಾಗಲ್ಲ’ ಎಂದು ಹೇಳಿದ್ದ ರಾಶಿಕಾ, ಈಗ ಸುದೀಪ್ ಹೇಳಿದ ಪಾಠದ ಬಳಿಕ ಬದಲಾಗಿದ್ದಾರೆ. ರಾಶಿಕಾ ಅವರು ದೊಡ್ಮನೆಯಲ್ಲಿ ತಮ್ಮ ಆಟವನ್ನು ಪ್ರದರ್ಶನ ಮಾಡಲು ರೆಡಿ ಆಗಿದ್ದಾರೆ. ಅದಕ್ಕೂ ಮೊದಲು ಸೂರಜ್ ಜೊತೆ ಅಂತರ ಕಾಯ್ದುಕೊಂಡಿದ್ದಾರೆ.

ಸೂರಜ್ ಅವರು ದೊಡ್ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟರು. ಅವರು ಬಂದ ದಿನವೇ ರಾಶಿಕಾಗೆ ರೋಸ್ ಕೊಟ್ಟರು. ಅಲ್ಲಿಂದ ಇಬ್ಬರ ಮಧ್ಯೆ ಫ್ರೆಂಡ್​ಶಿಪ್ ಬೆಳೆಯಿತು. ಆ ಬಳಿಕ ಇಬ್ಬರೂ ಕೈ ಕೈ ಹಿಡಿದು ಸುತ್ತಾಡಲು ಆರಂಭಿಸಿದರು. ಇವರ ಜೋಡಿ ನೋಡಿ ಅನೇಕರಿಗೆ ಅಸಮಾಧಾನ ಮೂಡಿತ್ತು. ‘ಕಾಲೇಜು ಹೋಗೋರ ಲವ್​ಸ್ಟೋರಿ ರೀತಿ ಇದೆ’ ಎಂದು ಅನೇಕರು ಆರೋಪ ಮಾಡಿದ್ದರು. ಸುದೀಪ್ ಕೂಡ ವೇದಿಕೆ ಮೇಲೆ ಈ ವಿಚಾರವನ್ನು ಸೂಕ್ಷ್ಮವಾಗಿ ಹೇಳಿದ್ದರು. ಈ ವಿಚಾರವನ್ನು ರಾಶಿಕಾ ಗಂಭೀರವಾಗಿ ಸ್ವೀಕರಿಸಿದಂತೆ ಇದೆ.

‘ನಾವು ಜಸ್ಟ್ ಫ್ರೆಂಡ್ಸ್. ಇದಕ್ಕಿಂತ ಮೇಲೆ ಏನೂ ಇಲ್ಲ’ ಎಂದು ಸೂರಜ್ ಬಳಿ ಬಂದು ರಾಶಿಕಾ ಸ್ಪಷ್ಟನೆ ನೀಡಿದ್ದಾರೆ. ಇದಕ್ಕೆ ಸೂರಜ್ ಕೂಡ ತಲೆ ಆಡಿಸಿದ್ದಾರೆ. ‘ಕೈ ಕೈ ಹಿಡ್ಕೊಳೋದು ಬೇಡ. ನಮ್ಮಿಬ್ಬರ ಮಧ್ಯೆ ಬೇರೆ ಸ್ಟೋರಿ ಇದೆ ಎಂದ್ರೆ ನಾನು ಒಪ್ಪಿಕೊಳ್ಳಲ್ಲ. ಫ್ರೆಂಡ್​ಶಿಪ್​ನಲ್ಲೂ ಹುಡುಗ-ಹುಡುಗಿ ಕ್ಲೋಸ್ ಆಗಿರ್ತಾರೆ. ಅದು ತಪ್ಪಲ್ಲ’ ಎಂದು ರಾಶಿಕಾ ಮಾತನಾಡಿದರು.

ಇದನ್ನೂ ಓದಿ: ರಾಶಿಕಾ ಜೊತೆಗಿನ ವಿಡಿಯೋ ಹಾಕಬೇಡಿ: ಸುದೀಪ್​​ಗೆ ಮನವಿ ಮಾಡಿದ ಸೂರಜ್

‘ನಮ್ಮಿಬ್ಬರ ಮಧ್ಯೆ ಇರೋದು ಗೆಳೆತನ ಮಾತ್ರ. ಇನ್ನುಮುಂದೆ  ಜಾಸ್ತಿ ಮಾತನಾಡೋದು ಬೇಡ. ನಿನ್ನ ಪಾಡಿಗೆ ನೀನಿರು, ನನ್ನ ಪಾಡಿಗೆ ನಾನಿರ್ತೀನಿ’ ಎಂದು ರಾಶಿಕಾ ಮುಖಕ್ಕೆ ಹೊಡೆದಂತೆ ಹೇಳಿದರು. ಈ ವಿಚಾರ ಸೂರಜ್​ಗೆ ಬೇಸರ ಮೂಡಿಸಿತು. ‘ನಾಳೆಯಿಂದ ಹೊಸ ದಿನ’ ಎಂದು ಹೇಳಿ ಸೂರಜ್ ಅಲ್ಲಿಂದ ನಡೆದುಬಿಟ್ಟರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:32 pm, Tue, 4 November 25

ಆ ವಿಚಾರ ಒಳಗೆ ಗೊತ್ತಾಗುವುದೇ ಇಲ್ಲ ಎಂದು ಸುಧಿ ಹೇಳಲು ಕಾರಣವೇನು?
ಆ ವಿಚಾರ ಒಳಗೆ ಗೊತ್ತಾಗುವುದೇ ಇಲ್ಲ ಎಂದು ಸುಧಿ ಹೇಳಲು ಕಾರಣವೇನು?
ತುಮಕೂರಿನಲ್ಲಿ ಗೋಧಿ ಲಾರಿ ಪಲ್ಟಿ; ಬಿದ್ದ ಗೋಧಿ ಬಾಚಲು ಮುಗಿಬಿದ್ದ ಜನ
ತುಮಕೂರಿನಲ್ಲಿ ಗೋಧಿ ಲಾರಿ ಪಲ್ಟಿ; ಬಿದ್ದ ಗೋಧಿ ಬಾಚಲು ಮುಗಿಬಿದ್ದ ಜನ
ಸೋಷಿಯಲ್​ ಮೀಡಿಯಾದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದಿದ್ದ ವಿಡಿಯೋ ವೈರಲ್
ಸೋಷಿಯಲ್​ ಮೀಡಿಯಾದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದಿದ್ದ ವಿಡಿಯೋ ವೈರಲ್
ಕ್ರಾಂತಿ ಕಿಚ್ಚಿನ ಮಧ್ಯೆ ಖರ್ಗೆ ಭೇಟಿಯಾಗಿದ್ಯಾಕೆ? ಗುಟ್ಟುಬಿಚ್ಚಿಟ್ಟ ಡಿಕೆ
ಕ್ರಾಂತಿ ಕಿಚ್ಚಿನ ಮಧ್ಯೆ ಖರ್ಗೆ ಭೇಟಿಯಾಗಿದ್ಯಾಕೆ? ಗುಟ್ಟುಬಿಚ್ಚಿಟ್ಟ ಡಿಕೆ
ಹರಿಹರದ ಮನೆಯಲ್ಲಿ ಟೈಲ್ಸ್ ಕೆಳಗೆ ನಿಗೂಢ ಶಾಖ! ಬೆಚ್ಚಿಬಿದ್ದ ಮನೆ ಮಂದಿ
ಹರಿಹರದ ಮನೆಯಲ್ಲಿ ಟೈಲ್ಸ್ ಕೆಳಗೆ ನಿಗೂಢ ಶಾಖ! ಬೆಚ್ಚಿಬಿದ್ದ ಮನೆ ಮಂದಿ
IND vs PAK: ಪಾಕಿಸ್ತಾನ್ ವಿರುದ್ಧ ಹೀನಾಯವಾಗಿ ಸೋತ ಭಾರತ
IND vs PAK: ಪಾಕಿಸ್ತಾನ್ ವಿರುದ್ಧ ಹೀನಾಯವಾಗಿ ಸೋತ ಭಾರತ
ಒಬ್ಬನನ್ನೇ ವರಿಸಿದ್ದ ಶಿರಸಿಯ ಅಕ್ಕ-ತಂಗಿ! ಭೀಕರವಾಗಿ ಕೊಲೆಯಾದ ಎರಡನೇ ಪತ್ನಿ
ಒಬ್ಬನನ್ನೇ ವರಿಸಿದ್ದ ಶಿರಸಿಯ ಅಕ್ಕ-ತಂಗಿ! ಭೀಕರವಾಗಿ ಕೊಲೆಯಾದ ಎರಡನೇ ಪತ್ನಿ
ಶಬರಿಮಲೆ ಯಾತ್ರೆ ಆರಂಭ, ಅಯ್ಯಪ್ಪ ಭಕ್ತರಿಗೆ ಮೆದುಳು ತಿನ್ನುವ ಅಮೀಬಾ ಭೀತಿ
ಶಬರಿಮಲೆ ಯಾತ್ರೆ ಆರಂಭ, ಅಯ್ಯಪ್ಪ ಭಕ್ತರಿಗೆ ಮೆದುಳು ತಿನ್ನುವ ಅಮೀಬಾ ಭೀತಿ
ಅಶ್ವಿನಿ ಗೌಡಗೆ ಶಿಕ್ಷೆ ಕೊಡಿಸಿದ ಗಿಲ್ಲಿ; ಉರಿಯೋ ಬೆಂಕಿಗೆ ತುಪ್ಪ
ಅಶ್ವಿನಿ ಗೌಡಗೆ ಶಿಕ್ಷೆ ಕೊಡಿಸಿದ ಗಿಲ್ಲಿ; ಉರಿಯೋ ಬೆಂಕಿಗೆ ತುಪ್ಪ
ಬಲೂಚಿಸ್ತಾನಲ್ಲಿ ಮತ್ತೆ ಜಾಫರ್ ಎಕ್ಸ್​ಪ್ರೆಸ್ ರೈಲಿನ ಮೇಲೆ ದಾಳಿ
ಬಲೂಚಿಸ್ತಾನಲ್ಲಿ ಮತ್ತೆ ಜಾಫರ್ ಎಕ್ಸ್​ಪ್ರೆಸ್ ರೈಲಿನ ಮೇಲೆ ದಾಳಿ