ಫಿನಾಲೆ ತಲುಪುತ್ತಾರಾ ಕನ್ನಡತಿಯರು? ಎಲ್ಲರ ಕಣ್ಣು ಸಂಜನಾ, ತನುಜಾ ಮೇಲೆ

Bigg Boss Telugu 09: ತೆಲುಗು ಬಿಗ್​​ಬಾಸ್ ಸೀಸನ್ 09 ಫಿನಾಲೆ ವಾರದೆಡೆಗೆ ದಾಪುಗಾಲು ಹಾಕಿದೆ. ಫಿನಾಲೆಗೆ ಇನ್ನೊಂದು ವಾರವಷ್ಟೆ ಬಾಕಿ ಇದೆ. ಕನ್ನಡದ ನಟಿಯರಾದ ಸಂಜನಾ ಗಲ್ರಾನಿ ಮತ್ತು ತನುಜಾ ಪುಟ್ಟಸ್ವಾಮಿ ಅವರುಗಳು ತೆಲುಗು ಬಿಗ್​​ಬಾಸ್ ಸೀಸನ್ 09ರ ಸ್ಪರ್ಧಿಗಳಾಗಿದ್ದಾರೆ. ಇಬ್ಬರೂ ಸಹ ಚೆನ್ನಾಗಿ ಆಟ ಆಡುತ್ತಿದ್ದಾರೆ. ಆದರೆ ಈ ವಾರ ಡಬಲ್ ಎಲಿಮಿನೇಷನ್ ಇದೆ. ಇಬ್ಬರು ಕನ್ನಡತಿಯರು ಫಿನಾಲೆ ತಲುಪುತ್ತಾರಾ?

ಫಿನಾಲೆ ತಲುಪುತ್ತಾರಾ ಕನ್ನಡತಿಯರು? ಎಲ್ಲರ ಕಣ್ಣು ಸಂಜನಾ, ತನುಜಾ ಮೇಲೆ
ಸಂಜನಾ

Updated on: Nov 29, 2025 | 3:04 PM

ಕನ್ನಡ ಬಿಗ್​​ಬಾಸ್ ಸೀಸನ್ 12 ನಡೆಯುತ್ತಿರುವಾಗಲೇ ತೆಲುಗಿನಲ್ಲಿ ಬಿಗ್​​ಬಾಸ್ ಚಾಲ್ತಿಯಲ್ಲಿದೆ. ತೆಲುಗು ಬಿಗ್​​ಬಾಸ್ ತುಸು ಮುಂಚಿತವಾಗಿಯೇ ಶುರುವಾಗಿದ್ದು ಕೊನೆಯ ವಾರಕ್ಕೆ ಕಾಲಿಟ್ಟಿದೆ. ಇನ್ನೊಂದು ವಾರ ಮುಗಿದರೆ ಫಿನಾಲೆ ವಾರ ಆಗಲಿದೆ. ತೆಲುಗು ಬಿಗ್​​ಬಾಸ್​​ನಲ್ಲಿ ಕನ್ನಡದ ನಟಿಯರಾದ ಸಂಜನಾ ಗಲ್ರಾನಿ ಮತ್ತು ತನುಜಾ ಪುಟ್ಟಸ್ವಾಮಿ ಅವರು ಸಹ ಇದ್ದು, ಇಬ್ಬರೂ ಸಹ ಚೆನ್ನಾಗಿ ಆಡುತ್ತಿದ್ದಾರೆ. ನಿನ್ನೆಯಷ್ಟೆ ನಡೆದ ಟಾಸ್ಕ್​​ನಲ್ಲಿ ಮನೆಯ ಕೊನೆಯ ಕ್ಯಾಪ್ಟನ್ ಆಗಿ ಕಲ್ಯಾಣ್ ಆಯ್ಕೆ ಆಗಿದ್ದಾರೆ. ಕನ್ನಡತಿಯರಾದ ತನುಜಾ ಮತ್ತು ಸಂಜನಾ ಫಿನಾಲೆ ವಾರ ತಲುಪುತ್ತಾರೆಯೇ ಎಂಬುದು ಇಂದು ಮತ್ತು ಭಾನುವಾರದ ಎಪಿಸೋಡ್​​ನಲ್ಲಿ ನಿಶ್ಚಯ ಆಗಲಿದೆ.

ಈ ವೀಕೆಂಡ್ ಎಪಿಸೋಡ್​​ನಲ್ಲಿ ಸಂಜನಾ ಕೇಂದ್ರ ಬಿಂದು ಆಗುವುದು ಪಕ್ಕಾ, ಏಕೆಂದರೆ ಈ ವಾರ ಅವರು ಮನೆಯಲ್ಲಿ ಕೆಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಸಹ ಸ್ಪರ್ಧಿಗಳಾದ ರಿತು ಮತ್ತು ಡಿಮನ್ ಪವನ್ ಅವರು ಮನೆಯಲ್ಲಿ ರೊಮ್ಯಾನ್ಸ್ ಮಾಡುತ್ತಾರೆ, ಅದನ್ನು ಕಣ್ಣಿನಿಂದ ನೋಡಲು, ಬಾಯಿಂದ ಹೇಳಲು ಸಹ ಅಸಾಧ್ಯ ಎಂದೆಲ್ಲ ಸಂಜನಾ ಹೇಳಿದ್ದು, ಸಂಜನಾರ ಹೇಳಿಕೆ ಮನೆಯೊಳಗೆ ತೀವ್ರ ಚರ್ಚೆ ಹುಟ್ಟುಹಾಕಿತ್ತು. ಇಂದು ನಾಗಾರ್ಜುನ ಅವರು ಬಂದು ವಿಷಯವನ್ನು ಇತ್ಯರ್ಥ ಪಡಿಸಲಿದ್ದಾರೆ.

ಅದರಲ್ಲದೆ ಈ ವಾರ ಡಬಲ್ ಎಲಿಮಿನೇಷನ್ ಸಹ ಇದೆ. ಈಗ ಬಿಗ್​​ಬಾಸ್ ಮನೆಯಲ್ಲಿ ಒಂಬತ್ತು ಮಂದಿ ಇದ್ದಾರೆ. ಈ ವಾರ ಬಿಗ್​​ಬಾಸ್ ಮನೆಯಿಂದ ಹೊರಗೆ ಹೋಗದೆ ಉಳಿದು ಕೊಳ್ಳುವವರು ಫಿನಾಲೆ ವಾರ ತಲುಪಲಿದ್ದಾರೆ. ಈ ವಾರ ಸಂಜನಾ ಮೇಲೆ ಎಲ್ಲರ ಕಣ್ಣು ಇರಲಿದೆ. ಈ ವಾರ ಸಂಜನಾ ಹೊರಗೆ ಹೋಗುವ ಸಾಧ್ಯತೆ ಸಹ ಇದೆ. ಆದರೆ ತನುಜಾ, ಫಿನಾಲೆ ಸ್ಪರ್ಧಿ ಎಂದೇ ಕರೆಸಿಕೊಳ್ಳುತ್ತಿದ್ದು, ತನುಜಾ ಅವರು ಸುಲಭವಾಗಿ ಬಿಗ್​​ಬಾಸ್ ಫಿನಾಲೆ ಸೇರುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ.

ಇದನ್ನೂ ಓದಿ: ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗುವುದು ಯಾರು?

ತೆಲುಗು ಸೀಸನ್ 9 ಸೆಪ್ಟೆಂಬರ್ 07 ರಂದು ಪ್ರಾರಂಭವಾಗಿದ್ದು, 83 ದಿನಗಳನ್ನು ಮುಗಿಸಿದೆ. ಈ ವಾರ ಬಿಗ್​​ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ನಡೆಯಲಿದೆ. ಮನೆಯ ಕೊನೆಯ ಕ್ಯಾಪ್ಟನ್ ಆಗಿ ಕಲ್ಯಾಣ್ ಆಯ್ಕೆ ಆಗಿದ್ದಾರೆ. ವಾರದ ಮಧ್ಯಭಾಗದಲ್ಲಿ ಮಿಡ್ ವೀಕ್ ಎಲಿಮಿನೇಷನ್ ಸಹ ನಡೆಯಲಿದ್ದು, ಮುಂದಿನ ವಾರದ ಕೊನೆಗೆ ಉಳಿಯುವವರು ಫಿನಾಲೆ ಸ್ಪರ್ಧಿಗಳು ಎನಿಸಿಕೊಳ್ಳಲಿದ್ದಾರೆ. ಸಂಜನಾ ಮತ್ತು ತನುಜಾ ಇಬ್ಬರೂ ಫಿನಾಲೆಗೆ ಹೋಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:03 pm, Sat, 29 November 25