ಬಿಗ್ ಬಾಸ್ ಎಂದರೆ ಸಾಕು ಕಿರುತೆರೆ ಪ್ರೇಕ್ಷಕರ ಕಿವಿ ಚುರುಕಾಗುತ್ತದೆ. ಸೆಲೆಬ್ರಿಟಿಗಳ ವಲಯದಲ್ಲೂ ಸಂಚಲನ ಶುರುವಾಗುತ್ತದೆ. ಈ ಬಾರಿ ಬಿಗ್ ಬಾಸ್ (Bigg Boss) ಕಾರ್ಯಕ್ರಮಕ್ಕೆ ಯಾರೆಲ್ಲ ಹೋಗುತ್ತಾರೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಯಾರಿಗೆ ಅವಕಾಶ ನೀಡಬೇಕು, ಯಾರಿಗೆ ನೀಡಬಾರದು ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತದೆ. ಅಷ್ಟರಮಟ್ಟಿಗೆ ಕ್ರೇಜ್ ಸೃಷ್ಟಿ ಮಾಡಿದ ರಿಯಾಲಿಟಿ ಶೋ ಇದು. ಈಗ ತೆಲುಗಿನಲ್ಲಿ ಬಿಗ್ ಬಾಸ್ ಹೊಸ ಸೀಸನ್ಗೆ (Bigg Boss Telugu season 7) ತಯಾರಿ ಜೋರಾಗಿದೆ. ಈ ಬಾರಿ ಯಾರು ನಿರೂಪಣೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಅವರೇ ಈ ಬಾರಿ ಕೂಡ ನಿರೂಪಣೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಬಿಗ್ ಬಾಸ್ ಹೊಸ ಸೀಸನ್ ಬಗ್ಗೆ ಮಾಹಿತಿ ತಿಳಿಸಲು ‘ಸ್ಟಾರ್ ಮಾ’ ವಾಹಿನಿ ಒಂದು ಪ್ರೋಮೋ ರಿಲೀಸ್ ಮಾಡಿದೆ. ಈ ಇದರಲ್ಲಿ ಅಕ್ಕಿನೇನಿ ನಾಗಾರ್ಜುನ ಅವರು ಕಾಣಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಇದು 7ನೇ ಸೀಸನ್. ಈ ಬಾರಿ ಒಂದಷ್ಟು ಹೊಸ ಅಂಶಗಳನ್ನು ಪರಿಚಯಿಸುವ ಸಾಧ್ಯತೆ ಇದೆ. ನಾಗಾರ್ಜುನ ಅವರೇ ನಿರೂಪಕನ ಸ್ಥಾನದಲ್ಲಿ ಮುಂದುವರಿದಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ನಾಗಾರ್ಜುನ ಬದಲಿಗೆ ಬೇರೆ ಯಾರಾದರೂ ನಿರೂಪಣೆ ಮಾಡಲಿ ಎಂಬುದು ಕೆಲವರ ಬೇಡಿಕೆ ಆಗಿತ್ತು. ಅಂಥವರಿಗೆ ಈಗ ಬೇಸರ ಆಗಿದೆ.
Everything you think you know about Bigg Boss is about to be revolutionized! Are you ready for this season, with your most favorite @iamnagarjuna ?! Confused? Excited? Stay tuned to find out more about #BiggBossTelugu7 pic.twitter.com/tvlpNtD1qt
— Starmaa (@StarMaa) July 18, 2023
ಬೇರೆ ಬೇರೆ ಮನಸ್ಥಿತಿಯ ಹತ್ತಾರು ಸೆಲೆಬ್ರಿಟಿಗಳು ಒಂದೇ ಮನೆಯಲ್ಲಿ ನೂರು ದಿನಗಳ ಕಾಲ ಜೊತೆಯಾಗಿ ಇರಬೇಕು. ವಿವಿಧ ಟಾಸ್ಟ್ಗಳನ್ನು ಮಾಡಬೇಕು. ಇದು ಬಿಗ್ ಬಾಸ್ ಕಾರ್ಯಕ್ರಮದ ಬೇಸಿಕ್ ನಿಯಮ. ಆದರೆ ಪ್ರತಿ ವರ್ಷ ಕೂಡ ಹೊಸ ಹೊಸ ಅಂಶಗಳು ಸೇರ್ಪಡೆ ಆಗುತ್ತವೆ. ಮನೆಯ ವಿನ್ಯಾಸ ಕೂಡ ಬದಲಾಗುತ್ತದೆ. ಹಾಗಾಗಿ ಪ್ರತಿ ಬಾರಿ ಬಿಗ್ ಬಾಸ್ ಶೋ ಆರಂಭ ಆಗುವಾಗ ಪ್ರೇಕ್ಷಕರ ವಲಯದಲ್ಲಿ ನಿರೀಕ್ಷೆ ಹೆಚ್ಚಾಗುತ್ತದೆ.
ಇದನ್ನೂ ಓದಿ: ‘ಬಿಗ್ ಬಾಸ್ ಶೋನಲ್ಲಿ ಆಗುತ್ತದೆ ಪಕ್ಷಪಾತ’: ನಿರೂಪಕರ ಮೇಲೆ ಗಂಭೀರ ಆರೋಪ ಮಾಡಿದ ಸ್ಪರ್ಧಿ
ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ ಮುಂತಾದ ಭಾಷೆಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಯಶಸ್ವಿ ಆಗಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್ ಅವರು ಮೊದಲಿನಿಂದಲೂ ಈ ಶೋ ನಡೆಸಿಕೊಂಡು ಬರುತ್ತಿದ್ದಾರೆ. ಕಳೆದ ವರ್ಷ ‘ಬಿಗ್ ಬಾಸ್ ಒಟಿಟಿ’ ವರ್ಷನ್ ಕೂಡ ಆರಂಭ ಆಯಿತು. ಕನ್ನಡದಲ್ಲಿ ಹೊಸ ಸೀಸನ್ ಆದಷ್ಟು ಬೇಗ ಶುರುವಾಗಲಿ ಎಂದು ವೀಕ್ಷಕರು ಕಾದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.