Sign In

By signing in or creating an account, you agree with Associated Broadcasting Company's Terms & Conditions and Privacy Policy.

Aaliya Siddiqui: ‘ಬಿಗ್​ ಬಾಸ್​ ಶೋನಲ್ಲಿ ಆಗುತ್ತದೆ ಪಕ್ಷಪಾತ’: ನಿರೂಪಕರ ಮೇಲೆ ಗಂಭೀರ ಆರೋಪ ಮಾಡಿದ ಸ್ಪರ್ಧಿ

Bigg Boss OTT 2: ಆಲಿಯಾ ಸಿದ್ಧಿಕಿ ಅವರು ತಮ್ಮ ಜೀವನದ ಘಟನೆಗಳ ಬಗ್ಗೆ ‘ಬಿಗ್​ ಬಾಸ್​ ಒಟಿಟಿ 2’ ಶೋನಲ್ಲಿ ಮಾತನಾಡಲು ಆರಂಭಿಸಿದರು. ಆ ಮಾತುಕಥೆ ಮುಂದುವರಿದಿದ್ದರೆ ಹಲವು ಸತ್ಯಗಳು ಹೊರಬರುತ್ತಿದ್ದವು.

Aaliya Siddiqui: ‘ಬಿಗ್​ ಬಾಸ್​ ಶೋನಲ್ಲಿ ಆಗುತ್ತದೆ ಪಕ್ಷಪಾತ’: ನಿರೂಪಕರ ಮೇಲೆ ಗಂಭೀರ ಆರೋಪ ಮಾಡಿದ ಸ್ಪರ್ಧಿ
ಆಲಿಯಾ ಸಿದ್ಧಿಕಿ
Follow us
ಮದನ್​ ಕುಮಾರ್​
|

Updated on: Jun 29, 2023 | 12:39 PM

ಬಿಗ್​ ಬಾಸ್​ ರಿಯಾಲಿಟಿ ಶೋಗೆ ತನ್ನದೇ ಆದ ಪ್ರೇಕ್ಷಕರ ವರ್ಗ ಇದೆ. ಈ ಕಾರ್ಯಕ್ರಮ ಈಗ ಒಟಿಟಿಗೂ ಕಾಲಿಟ್ಟಿದೆ. ಕಳೆದ ವರ್ಷ ಮೊದಲ ಬಾರಿಗೆ ‘ಬಿಗ್​ ಬಾಸ್​ ಒಟಿಟಿ’ ಶೋ ಆರಂಭಿಸಲಾಯಿತು. ಈ ವರ್ಷ ಅದರ 2ನೇ ಸೀಸನ್​ ಆರಂಭ ಆಗಿದೆ. ‘ಬಿಗ್​ ಬಾಸ್​ ಒಟಿಟಿ 2’ (Bigg Boss OTT 2) ಕಾರ್ಯಕ್ರಮಕ್ಕೆ ಸಲ್ಮಾನ್​ ಖಾನ್​ ಅವರು ನಿರೂಪಣೆ ಮಾಡುತ್ತಿದ್ದಾರೆ. ಹಲವು ಸ್ಪರ್ಧಿಗಳು ಇದರಲ್ಲಿ ಭಾಗಿ ಆಗಿದ್ದಾರೆ. ಎರಡನೇ ವಾರದಲ್ಲಿ ಆಲಿಯಾ ಸಿದ್ಧಿಕಿ (Aaliya Siddiqui) ಅವರು ಔಟ್​ ಆಗಿದ್ದಾರೆ. ದೊಡ್ಮನೆಯಿಂದ ಹೊರ ಬಂದ ಬಳಿಕ ಈ ಕಾರ್ಯಕ್ರಮದ ನಿರೂಪಕರ ಮೇಲೆ ಹಲವು ಆರೋಪಗಳನ್ನು ಮಾಡಿದ್ದಾರೆ. ನಿರೂಪಕ ಸಲ್ಮಾನ್​ ಖಾನ್​ (Salman Khan) ತುಂಬ ಪಕ್ಷಪಾತ ಮಾಡುತ್ತಾರೆ ಎಂದು ಆಲಿಯಾ ಸಿದ್ಧಿಕಿ ಆರೋಪಿಸಿದ್ದಾರೆ. ಇದೀಗ ಚರ್ಚೆಗೆ ಕಾರಣ ಆಗಿದೆ.

ಬಾಲಿವುಡ್​ನ ಖ್ಯಾತ ನಟ ನವಾಜುದ್ದೀನ್​ ಸಿದ್ಧಿಕಿ ಅವರ ಪತ್ನಿಯೇ ಆಲಿಯಾ ಸಿದ್ಧಿಕಿ. ಆದರೆ ಇಬ್ಬರ ನಡುವೆ ವೈಮನಸ್ಸು ಮೂಡಿದ್ದು, ಶೀಘ್ರದಲ್ಲೇ ವಿಚ್ಛೇದನ ಪಡೆಯಲಿದ್ದಾರೆ. ಅವರಿಬ್ಬರ ಬಗ್ಗೆ ನೂರಾರು ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟ ಆಗಿವೆ. ತಮ್ಮ ನಿಜವಾದ ವ್ಯಕ್ತಿತ್ವ ಎಂಥದ್ದು ಎಂಬುದನ್ನು ಜನರಿಗೆ ತಿಳಿಸುವ ಸಲುವಾಗಿ ಆಲಿಯಾ ಸಿದ್ಧಿಕಿ ಅವರು ಬಿಗ್​ ಬಾಸ್​ಗೆ ಹೋಗಿದ್ದರು. ಆದರೆ ಎರಡನೇ ವಾರದಲ್ಲೇ ಅವರನ್ನು ಎಲಿಮಿನೇಟ್​ ಮಾಡಲಾಯಿತು. ಅದು ಆಲಿಯಾಗೆ ಸಖತ್​ ಬೇಸರ ಮೂಡಿಸಿದೆ.

ಇದನ್ನೂ ಓದಿ: Aaliya Siddiqui: ‘ಬಿಗ್​ ಬಾಸ್​ ಒಟಿಟಿ 2’ ಶೋನಲ್ಲಿ ಏನೋ ಸಾಬೀತು ಮಾಡಲು ಹೋಗಿ ಮುಖಭಂಗ ಅನುಭವಿಸಿದ ನವಾಜುದ್ದೀನ್​ ಸಿದ್ಧಿಕಿ ಪತ್ನಿ ಆಲಿಯಾ

ಆಲಿಯಾ ಸಿದ್ಧಿಕಿ ಅವರು ತಮ್ಮ ಜೀವನದ ಘಟನೆಗಳ ಬಗ್ಗೆ ‘ಬಿಗ್​ ಬಾಸ್​ ಒಟಿಟಿ’ ಶೋನಲ್ಲಿ ಮಾತನಾಡಲು ಆರಂಭಿಸಿದರು. ಆ ಮಾತುಕಥೆ ಮುಂದುವರಿದಿದ್ದರೆ ಹಲವು ಸತ್ಯಗಳು ಹೊರಬರುತ್ತಿದ್ದವು. ಅಷ್ಟರಲ್ಲಾಗಲೇ ಅವರನ್ನು ಎಲಿಮಿನೇಟ್​ ಮಾಡಿ ಹೊರಗೆ ಕಳಿಸಲಾಗಿದೆ. ಇದರ ಹಿಂದೆ ಸಲ್ಮಾನ್​ ಖಾನ್​ ಅವರ ಪಕ್ಷಪಾತ ಇದೆ ಎಂಬುದು ಆಲಿಯಾ ಆರೋಪ. ‘ಸಲ್ಮಾನ್​ ಖಾನ್​ ಒಬ್ಬ ಸ್ಟಾರ್​ ನಟನಾಗಿದ್ದು ತಮಗೆ ಆಪ್ತವಾಗಿರುವ ಸ್ಟಾರ್​ಗಳನ್ನು ಅವರು ಬೆಂಬಲಿಸುತ್ತಾರೆ’ ಎಂದು ಆಲಿಯಾ ಹೇಳಿದ್ದಾರೆ.

ಇದನ್ನೂ ಓದಿ: Aaliya Siddiqui: ಹೊಸ ಬಾಯ್​ಫ್ರೆಂಡ್​ ಫೋಟೋ ಹಂಚಿಕೊಂಡ ನವಾಜುದ್ದೀನ್​ ಸಿದ್ಧಿಕಿ ಪತ್ನಿ ಆಲಿಯಾ; ಶೀಘ್ರದಲ್ಲೇ ಹೆಸರು ಬದಲಾವಣೆ

ನವಾಜುದ್ದೀನ್​ ಸಿದ್ಧಿಕಿ ಮತ್ತು ಸಲ್ಮಾನ್​ ಖಾನ್​ ಅವರ ನಡುವೆ ಒಡನಾಟ ಇದೆ. ಆ ಕಾರಣದಿಂದಲೇ ಆಲಿಯಾ ಸಿದ್ಧಿಕಿ ಅವರನ್ನು ಎಲಿಮಿನೇಟ್​ ಮಾಡಲಾಗಿದೆ ಎಂದು ಒಂದು ವರ್ಗದ ನೆಟ್ಟಿಗರು ಕೂಡ ಮಾತನಾಡಿಕೊಳ್ಳುತ್ತಿದ್ದಾರೆ. ಈ ಆರೋಪಗಳಿಗೆ ಸಲ್ಮಾನ್​ ಖಾನ್​ ಮತ್ತು ‘ಬಿಗ್​ ಬಾಸ್​ ಒಟಿಟಿ’ ಕಾರ್ಯಕ್ರಮದ ಆಯೋಜಕರು ಏನು ಹೇಳುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ‘ಜಿಯೋ ಸಿನಿಮಾ​’ ಒಟಿಟಿ ಮೂಲಕ ಈ ಶೋ ಪ್ರಸಾರ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!