‘ಇದೇನಾ ಸಭ್ಯತೆ?’; ಬಿಗ್ ಬಾಸ್ ಮನೆಯಲ್ಲಿ ಅರ್ಧ ನಿಮಿಷ ಲಿಪ್ ಕಿಸ್ ಮಾಡಿದ ಸ್ಪರ್ಧಿಗಳು
ಆಕಾಂಕ್ಷಾ ಹಾಗೂ ಜದ್ ಮಧ್ಯೆ ಏನೋ ನಡೆಯುತ್ತಿದೆ. ಇದು ಅಭಿಮಾನಿಗಳಿಗೂ ಸ್ಪಷ್ಟವಾಗಿದೆ. ಹೀಗಿರುವಾಗಲೇ ಇವರು ಲಿಪ್ ಲಾಕ್ ಮಾಡಿದ್ದಾರೆ.
‘ಬಿಗ್ ಬಾಸ್’ (Bigg Boss) ಮನೆಯಲ್ಲಿ ಜಗಳಗಳು, ಕಿತ್ತಾಟಗಳು ಕಾಮನ್. ಅದೇ ರೀತಿ ರೊಮ್ಯಾನ್ಸ್ ಕೂಡ ಇಲ್ಲಿ ಸರ್ವೇ ಸಾಮಾನ್ಯ. ದೊಡ್ಮನೆಯಲ್ಲಿ ಅನೇಕ ಲವ್ ಕಹಾನಿಗಳು ಹುಟ್ಟಿಕೊಂಡ ಉದಾಹರಣೆ ಇದೆ. ಕೆಲವೊಮ್ಮೆ ಸ್ಪರ್ಧಿಗಳು ನಡೆದುಕೊಳ್ಳುವ ರೀತಿ ಮಿತಿಮೀರುತ್ತದೆ. ಈಗ ‘ಹಿಂದಿ ಬಿಗ್ ಬಾಸ್ ಒಟಿಟಿ 2’ನಲ್ಲಿ (Bigg Boss OTT) ಹಾಗೆಯೇ ಆಗಿದೆ. ಅರ್ಧ ನಿಮಿಷಕ್ಕೂ ಅಧಿಕ ಕಾಲ ಆಕಾಂಕ್ಷಾ ಪುರಿ ಹಾಗೂ ಜದ್ ಹದೀದ್ ಅವರು ಲಿಪ್ ಲಾಕ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ಟೀಕೆ ಮಾಡಿದ್ದಾರೆ. ‘ಇದೇನಾ ಸಭ್ಯತೆ’ ಎಂದು ಪ್ರಶ್ನೆ ಮಾಡಿದ್ದಾರೆ.
ಆಕಾಂಕ್ಷಾ ಹಾಗೂ ಜದ್ ಮಧ್ಯೆ ಏನೋ ನಡೆಯುತ್ತಿದೆ. ಇದು ಅಭಿಮಾನಿಗಳಿಗೂ ಸ್ಪಷ್ಟವಾಗಿದೆ. ಹೀಗಿರುವಾಗಲೇ ಅವಿನಾಶ್ ಸಚ್ದೇವ್ ಅವರು ‘ಜದ್ಗೆ ಆಕಾಂಕ್ಷಾ ಕಿಸ್ ಮಾಡಬೇಕು’ ಎಂದು ಸವಾಲು ಹಾಕಿದರು. ಈ ಬೆನ್ನಲ್ಲೇ ಇಬ್ಬರೂ ಲಿಪ್ ಲಾಕ್ ಮಾಡಿಕೊಂಡಿದ್ದಾರೆ. ಈ ವೇಳೆ ಪೂಜಾ ಭಟ್ ಮಾತ್ರ ಇರಿಸುಮುರುಸುಗೊಂಡರು. ನಿಲ್ಲಿಸಿ ನಿಲ್ಲಿಸಿ ಎಂದು ಕೂಗಿದರು. ಉಳಿದವರೆಲ್ಲರೂ ಇದನ್ನು ಎಂಜಾಯ್ ಮಾಡುತ್ತಿದ್ದರು.
ಬಿಗ್ ಬಾಸ್ ಫ್ಯಾಮಿಲಿ ಶೋ ಎಂದು ಸಲ್ಮಾನ್ ಖಾನ್ ಅನೇಕ ಬಾರಿ ಹೇಳಿದ್ದಾರೆ. ಆದರೆ, ಈ ರೀತಿಯ ಘಟನೆಗಳು ನಡೆದರೆ ಅದು ಫ್ಯಾಮಿಲಿ ಶೋ ಹೇಗಾಗುತ್ತದೆ ಎಂಬುದು ಅನೇಕರ ಪ್ರಶ್ನೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಅನೇಕರು ಸಲ್ಮಾನ್ ಖಾನ್ ಅವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
#Avinashsachdeva is so cheap He asked #AkankshaPuri and #JadHadid to kiss for 30 seconds in the task Everybody in the house were not even looking at them when they were kissing….khud sabki itni sharam aarhi hai but nobody confronted him#AbhishekMalhan#BiggBossOTT2#BBOTT2
— Kshitiz?? (@kshitiz_it_is) June 29, 2023
#SalmanKhan had said he will let #BiggBossOTT2 contestants cross the line, Lets see who he reacts to this Kiss by #AkankshaPuri and #JadHadid pic.twitter.com/tOJrRojw05
— Asad Mahmood (@Asad889908) June 29, 2023
ಇದನ್ನೂ ಓದಿ: ಬಿಗ್ ಬಾಸ್ ಅವಾಂತರ: ಲೈವ್ನಲ್ಲಿ ಸಹ ಸ್ಪರ್ಧಿಯ ಬಾಡಿನ ಬೇಕಾಬಿಟ್ಟಿ ಮುಟ್ಟಿದ ಮಾಡೆಲ್ ವಿರುದ್ಧ ಟೀಕೆ
Am I the only one who has never seen this cringe show? #BiggBossOTT2 #BBOTT2 #AkankshaPuripic.twitter.com/8f3UIW8Lgv
— Ashok choudhary (@Astraeus_45) June 29, 2023
‘ಬಿಗ್ ಬಾಸ್’ ಶೋ ಸ್ಕ್ರಿಪ್ಟೆಡ್ ಅನ್ನೋದು ಅನೇಕರ ಆರೋಪ. ಇದಕ್ಕೆ ಪೂರಕವಾದ ಘಟನೆ ನಡೆಯುತ್ತಿದೆ. ಟಿವಿಗೆ ಹೋಲಿಕೆ ಮಾಡಿದರೆ ಒಟಿಟಿಯಲ್ಲಿ ಬಿಗ್ ಬಾಸ್ ನೋಡುವವರ ಸಂಖ್ಯೆ ಕಡಿಮೆ. ಈ ಕಾರಣಕ್ಕೆ ಪ್ರೇಕ್ಷಕರನ್ನು ಸೆಳೆಯಲು ಈ ರೀತಿಯ ತಂತ್ರ ಮಾಡಲಾಗುತ್ತಿದೆ ಅನ್ನೋದು ಅನೇಕರ ಆರೋಪ. ಇನ್ನು, ಒಟಿಟಿಯಲ್ಲಿ ಯಾವುದೇ ಕಟ್ಟಳೆಗಳು ಇಲ್ಲ. ಇದರಿಂದಲೂ ಈ ರೀತಿಯ ಘಟನೆಗಳು ನಡೆಯುತ್ತಿವೆ. ಸದ್ಯ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:22 am, Fri, 30 June 23