‘ಆ್ಯಂಕರ್​ಗಳಿಗೆ ಬೈಯ್ಯುತ್ತಿದ್ದೆ, ಆದ್ರೆ ಈಗ ನಾನೇ ಆ್ಯಂಕರ್​’: ಹೊಸ ಜರ್ನಿ ಆರಂಭಿಸಿದ ಬಿಗ್​ ಬಾಸ್​ ಮಂಜು

| Updated By: ಮದನ್​ ಕುಮಾರ್​

Updated on: Apr 08, 2022 | 9:26 AM

Gichchi Giligili: ಕಲರ್ಸ್​ ಕನ್ನಡ ವಾಹಿನಿಯ ‘ಗಿಚ್ಚಿ ಗಿಲಿಗಿಲಿ’ ಕಾರ್ಯಕ್ರಮಕ್ಕೆ ಮಂಜು ಪಾವಗಡ ನಿರೂಪಕ ಆಗಿದ್ದಾರೆ. ಈ ಹೊಸ ಜವಾಬ್ದಾರಿ ಬಗ್ಗೆ ಅವರು ಮಾತನಾಡಿದ್ದಾರೆ.

ನಟ ಮಂಜು ಪಾವಗಡ (Manju Pavagada) ಅವರಿಗೆ ‘ಬಿಗ್​ ಬಾಸ್​’ ರಿಯಾಲಿಟಿ ಶೋನಿಂದ ಸಖತ್​ ಜನಪ್ರಿಯತೆ ಸಿಕ್ಕಿತು. ಟ್ರೋಫಿ ಗೆದ್ದ ಬೆನ್ನಲ್ಲೇ ಅವರಿಗೆ ಹಲವು ಅವಕಾಶಗಳು ಹರಿದುಬಂದವು. ಅನೇಕ ಸಿನಿಮಾಗಳಲ್ಲಿ ಮಂಜು ನಟಿಸುತ್ತಿದ್ದಾರೆ. ಈ ನಡುವೆ ಒಂದು ಹೊಸ ಜವಾಬ್ದಾರಿಯನ್ನು ಅವರು ಹೊತ್ತುಕೊಂಡಿದ್ದಾರೆ. ಕಲರ್ಸ್​ ಕನ್ನಡ (Colors Kannada) ವಾಹಿನಿಯ ‘ಗಿಚ್ಚಿ ಗಿಲಿಗಿಲಿ’ (Gichchi Giligili) ಕಾರ್ಯಕ್ರಮಕ್ಕೆ ಮಂಜು ಪಾವಗಡ ನಿರೂಪಕ ಆಗಿದ್ದಾರೆ. ಒಂದು ಕಾಲದಲ್ಲಿ ಆ್ಯಂಕರ್​ಗಳ ಬಗ್ಗೆ ಅವರಿಗೆ ಬೇರೆ ಭಾವನೆ ಇತ್ತು. ಆದರೆ ಈಗ ಅವರೇ ಆ್ಯಂಕರ್​ ಆಗಿ ಕೆಲಸ ಶುರು ಮಾಡಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ಇಷ್ಟು ದಿನ ನಟನೆ ಮಾಡುತ್ತಿದ್ದ ಅವರನ್ನು ಈಗ ಜನರು ನಿರೂಪಕನಾಗಿಯೂ ನೋಡಬಹುದು. ಹೊಸ ಜರ್ನಿ ಆರಂಭಿಸಿರುವ ಅವರು ಹೆಚ್ಚು ಎಗ್ಸೈಟ್​ ಆಗಿದ್ದಾರೆ. ಸೃಜನ್​ ಲೋಕೇಶ್​ ಮತ್ತು ಹಿರಿಯ ನಟಿ ಶ್ರುತಿ ಬಗ್ಗೆಯೂ ಮಂಜು ಪಾವಗಡ ಮಾತನಾಡಿದ್ದಾರೆ.

ಇದನ್ನೂ ಓದಿ:

ಶುಭಾ ಪೂಂಜಾ ಮದುವೆ ವಿಡಿಯೋ ರಿಲೀಸ್​; ಮಿಂಚಿದ ಮಂಜು ಪಾವಗಡ  

ವಿಚಿತ್ರ ಹೆಸರಲ್ಲಿ ಅವಾರ್ಡ್​ ಕೊಡೋಕೆ ಮುಂದಾದ ಮಂಜು ಪಾವಗಡ; ಬಿಗ್​ ಬಾಸ್​ ವಿನ್ನರ್​ಗೆ ಏನಾಯ್ತು?