ಹಿಂದಿಯ ಅತ್ತೆ-ಸೊಸೆ ಧಾರಾವಾಹಿಯಲ್ಲಿ ನಟಿಸಲಿರುವ ಬಿಲ್ ಗೇಟ್ಸ್

Bill Gates in Indian serial: ವಿಶ್ವದ ಟಾಪ್ ಶ್ರೀಮಂತರಲ್ಲಿ ಒಬ್ಬರಾಗಿರುವ, ಮೈಕ್ರೊಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಹಿಂದಿ ಧಾರಾವಾಹಿಯಲ್ಲಿ ನಟಿಸಲಿದ್ದಾರೆ. ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಧಾರಾವಾಹಿಯಲ್ಲಿ ಬಿಲ್ ಗೇಟ್ಸ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಾವುದು ಆ ಧಾರಾವಾಹಿ?

ಹಿಂದಿಯ ಅತ್ತೆ-ಸೊಸೆ ಧಾರಾವಾಹಿಯಲ್ಲಿ ನಟಿಸಲಿರುವ ಬಿಲ್ ಗೇಟ್ಸ್
Bill Gates

Updated on: Oct 22, 2025 | 2:46 PM

ಭಾರತೀಯ ಧಾರಾವಾಹಿಗಳಿಗೆ (Serial) ಯಾವುದು ಸಹ ಅಸಾಧ್ಯವಲ್ಲ. ಹಾವುಗಳಿಗೆ ಜೀವ ಬರುತ್ತವೆ, ಮನುಷ್ಯರು ಹಕ್ಕಿಗಳಂತೆ ಹಾರುತ್ತಾರೆ, ಸ್ಕೂಟರ್​​​ನಲ್ಲಿ ಅಂತರಿಕ್ಷಕ್ಕೆ ಹೋಗಿ ಬರುತ್ತಾರೆ. ಹತ್ತನೇ ಕ್ಲಾಸು ಫೇಲಾಗಿರುವ ಸೊಸೆ, ಆಪರೇಷನ್ ಮಾಡಿ ಗಂಡನ ಜೀವ ಉಳಿಸುತ್ತಾಳೆ. ಮೂರನೇ ಮಹಡಿಯಿಂದ ಹಾರಿದವರು ಮೂರು ಎಪಿಸೋಡ್ ಆದ ಬಳಿಕ ನೆಲದ ಮೇಲೆ ಲ್ಯಾಂಡ್ ಆಗುತ್ತಾರೆ. ಇಂಥಹಾ ಹಲವು ಅದ್ಭುತಗಳನ್ನು ಭಾರತೀಯ ಧಾರಾವಾಹಿಗಳು ವಿಶೇಷವಾಗಿ ಹಿಂದಿ ಧಾರಾವಾಹಿಗಳು ಈಗಾಗಲೇ ತೋರಿಸಿವೆ. ಇದೀಗ ಒಂದು ನಿಜವಾಗಿಯೂ ವಿಶೇಷವಾದುದ್ದಕ್ಕೆ ಕೈಹಾಕಿದೆ ಹಿಂದಿಯ ಒಂದು ಧಾರಾವಾಹಿ ತಂಡ.

ಹಿಂದಿಯ ಜನಪ್ರಿಯ ಧಾರಾವಾಹಿಯಲ್ಲಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ, ಮೈಕ್ರೊಸಾಫ್ಟ್ ಮಾಲೀಕ ಬಿಲ್ ಗೇಟ್ಸ್ ಕಾಣಿಸಿಕೊಳ್ಳಲಿದ್ದಾರೆ. ಹಲವಾರು ಪುಸ್ತಕ, ಡಾಕ್ಯುಮೆಂಟರಿ, ಸಿನಿಮಾಗಳಿಗೆ ವಸ್ತುವಾಗಿರುವ ಬಿಲ್ ಗೇಟ್ಸ್ ಈಗ ಹಿಂದಿ ಧಾರಾವಾಹಿಯೊಂದರಲ್ಲಿ ನಟಿಸಲಿದ್ದಾರೆ. ಹಿಂದಿಯ ಬಲು ಜನಪ್ರಿಯ ಧಾರಾವಾಹಿ, ‘ಕ್ಯೂಂಕಿ ಸಾಸ್ ಬಿ ಕಭಿ ಬಹು ಥೀ’ ಈಗ ಎರಡನೇ ಸರಣಿ ಪ್ರಾರಂಭವಾಗಿದ್ದು, ಈ ಧಾರಾವಾಹಿಯಲ್ಲಿ ಬಿಲ್ ಗೇಟ್ಸ್ ಎಪಿಸೋಡ್​ ಒಂದರಲ್ಲಿ ನಟಿಸಲಿದ್ದಾರೆ.

ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ಅವರು ‘ಕ್ಯೂಂಕಿ ಸಾಸ್ ಭಿ ಕಬಿ ಬಹು ಥೀ 2’ ಧಾರಾವಾಹಿ ಮೂಲಕ ಟಿವಿ ಲೋಕಕ್ಕೆ ಮರಳಿದ್ದು, ಈ ಧಾರಾವಾಹಿಯನ್ನು ಅದ್ಧೂರಿಯಾಗಿ ತೆರೆಗೆ ತರಲಾಗುತ್ತಿದೆ. ಇದೀಗ ಇದೇ ಧಾರಾವಾಹಿಯಲ್ಲಿ ಬಿಲ್ ಗೇಟ್ಸ್ ನಟಿಸಲಿದ್ದಾರೆ. ಸ್ಮೃತಿ ಇರಾನಿ, ಬಿಲ್ ಗೇಟ್ಸ್​​ಗೆ ವಿಡಿಯೋ ಕರೆ ಮಾಡಲಿದ್ದು, ಬಿಲ್ ಗೇಟ್ಸ್ ಜೊತೆಗೆ ಉದ್ಯಮವೊಂದಕ್ಕೆ ಸಂಬಂಧಿಸಿದಂತೆ ಸಲಹೆ ಪಡೆಯಲಿದ್ದಾರೆ ಹಾಗೂ ಸ್ಮೃತಿ ಅವರ ಪಾತ್ರ ಧಾರಾವಾಹಿಯಲ್ಲಿ ಮಾಡಲು ಮುಂದಾಗಿರುವ ಉದ್ಯಮಕ್ಕೆ ಹೂಡಿಕೆಯನ್ನು ಸಹ ಮಾಡಲಿದ್ದಾರೆ.

ಇದನ್ನೂ ಓದಿ:ಕಿರುತೆರೆಗೆ ಮರಳುತ್ತಿದ್ದಂತೆ ಸ್ಮೃತಿ ಇರಾನಿಗೆ ಭರ್ಜರಿ ಸಂಭಾವನೆ

ಸ್ಮೃತಿ ಇರಾನಿ ಅವರು ಬಿಲ್ ಗೇಟ್ಸ್​​ಗೆ ಮಾಡಲಿರುವ ವಿಡಿಯೋ ಕರೆಯನ್ನು ರೆಕಾರ್ಡ್ ಮಾಡಿಕೊಂಡು ಧಾರಾವಾಹಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಆ ಮೂಲಕ ಬಿಲ್ ಗೇಟ್ಸ್, ಭಾರತೀಯ ಟಿವಿ ಲೋಕಕ್ಕೆ ಅಧಿಕೃತವಾಗಿ ಎಂಟ್ರಿ ಕೊಡಲಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಇದೇ ಧಾರಾವಾಹಿಯಲ್ಲಿ ನಟಿ ಸಾಕ್ಷಿ ತನ್ವಾರ್ ಮತ್ತು ಕಿರಣ್ ಕರ್ಮಕಾರ್ ಅವರುಗಳು ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಇಬ್ಬರೂ ಸಹ ಟಿವಿ ಲೋಕದ ಬಲು ಜನಪ್ರಿಯ ತಾರೆಯರು. ಈಗ ಏಕಾ-ಏಕಿ ಬಿಲ್ ಗೇಟ್ಸ್​ ಅವರನ್ನೇ ಅತಿಥಿ ಪಾತ್ರಕ್ಕೆ ಕರೆತರಲಾಗಿದೆ.

ಅಂದಹಾಗೆ ಬಿಲ್ ಗೇಟ್ಸ್​​ಗೆ ಟಿವಿ ಮತ್ತು ಸಿನಿಮಾ ಲೋಕ ಹೊಸದೇನೂ ಅಲ್ಲ. ಈ ಅವರು ಏಳು ಡಾಕ್ಯುಮೆಂಟರಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವುಗಳಲ್ಲಿ ಕೆಲವು ಡಾಕ್ಯುಮೆಂಟರಿಗಳು ಬಿಲ್ ಗೇಟ್ಸ್​ ಅವರ ಬಗ್ಗೆಯೇ ಇವೆ. ಕೆಲ ಸಿನಿಮಾಗಳಲ್ಲಿ ಬಿಲ್ ಗೇಟ್ಸ್​ ಅವರ ಪಾತ್ರವನ್ನು ಬಳಸಿಕೊಳ್ಳಲಾಗಿದೆ. ಕೆಲವು ಸಿನಿಮಾಗಳಲ್ಲಿ ಸ್ವತಃ ಅವರೇ ಕಾಣಿಸಿಕೊಂಡಿದ್ದಾರೆ. ಖ್ಯಾತ ಟಿವಿ ಶೋ ‘ಬಿಗ್ ಬ್ಯಾಂಗ್ ಥಿಯರಿ’ಯ ಒಂದು ಎಪಿಸೋಡ್​​ನಲ್ಲಿ ಸ್ವತಃ ಬಿಲ್ ಗೇಟ್ಸ್ ನಟಿಸಿದ್ದಾರೆ. ಈ ಶೋನಲ್ಲಿ ಎಲಾನ್ ಮಸ್ಕ್ ಸಹ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ