ತೆಲುಗು ಕಿರುತೆರೆಯಿಂದ ಚಂದನ್ ಕುಮಾರ್ ಬ್ಯಾನ್​? ಕೇಳಿ ಬಂತು ಹೊಸ ಆಗ್ರಹ

ಈಗ ಚಂದನ್ ಕುಮಾರ್ ಅವರ ಮೇಲೆ ಕನಿಷ್ಠ ಎರಡು ವರ್ಷ ಬ್ಯಾನ್ ಹೇರುವಂತೆ ಆಗ್ರಹ ಕೇಳಿ ಬಂದಿದೆ

ತೆಲುಗು ಕಿರುತೆರೆಯಿಂದ ಚಂದನ್ ಕುಮಾರ್ ಬ್ಯಾನ್​? ಕೇಳಿ ಬಂತು ಹೊಸ ಆಗ್ರಹ
Edited By:

Updated on: Aug 02, 2022 | 6:00 PM

ತೆಲುಗು ಕಿರುತೆರೆಯಿಂದ ಕನ್ನಡಿಗರನ್ನು ತುಳಿಯುವ ಕೆಲಸ ಆಗುತ್ತಿದೆ ಎಂದು ನಟ ಚಂದನ್ ಕುಮಾರ್ ಅವರು ಆರೋಪ ಮಾಡಿದ್ದರು. ‘ಶ್ರೀಮತಿ ಶ್ರೀನಿವಾಸ್​’  (Srimathi Srinivas) ಧಾರಾವಾಹಿ ಶೂಟಿಂಗ್ ಸಂದರ್ಭದಲ್ಲಿ ನಡೆದ ಗಲಾಟೆ ಕುರಿತು ಅವರು ಈ ಮಾತನ್ನು ಹೇಳಿದ್ದರು. ಈಗ ಚಂದನ್ ಕುಮಾರ್ (Chandan Kumar) ಅವರ ಮೇಲೆ ಕನಿಷ್ಠ ಎರಡು ವರ್ಷ ಬ್ಯಾನ್ ಹೇರುವಂತೆ ಆಗ್ರಹ ಕೇಳಿ ಬಂದಿದೆ. ‘ತೆಲುಗು ಕಿರುತೆರೆ ವಿರುದ್ಧ ಚಂದನ್ ಸುಳ್ಳು ಆರೋಪ ಮಾಡಿದ್ದಾರೆ. ಹೀಗಾಗಿ, ಅವರು ತೆಲುಗು ಒಟಿಟಿ ಮತ್ತು ಟಿವಿಯಲ್ಲಿ ಕೆಲಸ ಮಾಡದಂತೆ ಅವರ ಮೇಲೆ ನಿಷೇಧ ಹೇರಬೇಕು’ ಎಂದು ತೆಲುಗು ಟಿವಿ ಟೆಕ್ನೀಶಿಯನ್ಸ್​ ಹಾಗೂ ವರ್ಕರ್ಸ್​ ಇಂಡಸ್ಟ್ರಿ ಫೆಡರೇಷನ್​ ಅವರು ತೆಲುಗು ಟೆಲಿವಿಶನ್ ನಿರ್ಮಾಪಕರ ಮಂಡಳಿಗೆ ಮನವಿ ಪತ್ರ ಸಲ್ಲಿಕೆ ಮಾಡಿದ್ದಾರೆ.

‘ರಂಜಿತ್ ಎಂಬುವವರು ಬಂದು ಪದೇಪದೇ ಕಿರಿಕಿರಿ ಮಾಡಿದ್ದಾರೆ. ಈ ಕಾರಣಕ್ಕೆ ನಾನು ಅವರನ್ನು ತಳ್ಳಿದೆ. ಆದರೆ, ಅದನ್ನು ರಂಜಿತ್​ ಬೇರೆ ರೀತಿಯಲ್ಲಿ ಹೇಳಿದ್ದಾರೆ. ಚಿಕ್ಕ ವಿಚಾರವನ್ನು ದೊಡ್ಡದಾಗಿ ಮಾಡಿದ್ದಾರೆ. ನನ್ನ ಮೇಲೆ ಹಲ್ಲೆ ನಡೆದಿದೆ. ಕನ್ನಡಿಗರನ್ನು ಅವರು ಸಹಿಸಿಕೊಳ್ಳುತ್ತಿಲ್ಲ’ ಎಂದು ಚಂದನ್ ಕುಮಾರ್ ಆಗಸ್ಟ್ 1ರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು. ಆದರೆ, ಚಂದನ್ ಮಾಡಿರುವುದು ಸುಳ್ಳು ಆರೋಪ ಎಂಬುದು ತೆಲುಗು ಟಿವಿ ಟೆಕ್ನೀಶಿಯನ್ಸ್​ ಹಾಗೂ ವರ್ಕರ್ಸ್​ ಇಂಡಸ್ಟ್ರಿ ಫೆಡರೇಷನ್​ ಅವರ ವಾದ.

‘ಶ್ರೀಮತಿ ಶ್ರೀನಿವಾಸ್ ಶೂಟಿಂಗ್ ಸಂದರ್ಭದಲ್ಲಿ ರಂಜಿತ್ ಅವರು ನಿರ್ದೇಶಕರ ಆಣತಿಯಂತೆ ಚಂದನ್ ಅವರನ್ನು ಕರೆದಿದ್ದಾರೆ. ಈ ವೇಳೆ ಚಂದನ್​ ಕುಮಾರ್ ಅವರು ರಂಜಿತ್​ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದಾರೆ. ಇದರಲ್ಲಿ ರಂಜಿತ್ ಅವರ ತಪ್ಪು ಇಲ್ಲ. ಚಂದನ್ ಅವರನ್ನು ಕನಿಷ್ಠ ಎರಡು ವರ್ಷಗಳ ಕಾಲ ತೆಲುಗು ಒಟಿಟಿ ಹಾಗೂ ತೆಲುಗು ಧಾರಾವಾಹಿಗಳಿಂದ ಬ್ಯಾನ್ ಮಾಡಬೇಕು ಎಂಬುದು ನಮ್ಮ ಕೋರಿಕೆ’ ಎಂದು ಟಿವಿ ಟೆಕ್ನೀಶಿಯನ್ಸ್​ ಹಾಗೂ ವರ್ಕರ್ಸ್​ ಇಂಡಸ್ಟ್ರಿ ಫೆಡರೇಷನ್​ ಅವರು ಟೆಲಿವಿಶನ್ ನಿರ್ಮಾಪಕರ ಮಂಡಳಿಗೆ ಸಲ್ಲಿಕೆ ಮಾಡಿದ ಮನವಿಯಲ್ಲಿ ಕೋರಿದ್ದಾರೆ.

ಇದನ್ನೂ ಓದಿ
ಚಂದನ್ ಪತ್ನಿ ಕವಿತಾ ಗೌಡ ತೆಲುಗು ಸೀರಿಯಲ್ ತೊರೆದಿದ್ದೇಕೆ? ನಟಿ ಬಿಚ್ಚಿಟ್ರು ಅಸಲಿ ವಿಚಾರ
‘ನಾನು ಮತ್ತೆ ಆ ಧಾರಾವಾಹಿ ಮಾಡಲ್ಲ’; ತೆಲುಗು ಸೀರಿಯಲ್​ನಿಂದ ಹೊರ ಬರುವ ನಿರ್ಧಾರ ತೆಗೆದುಕೊಂಡ ಚಂದನ್ ಕುಮಾರ್
‘ಅಮ್ಮ ನಿಮ್ಮ ಜತೆ ನಾನು ಇರಬೇಕಿತ್ತು’; ವಿವಾದದ ಬಳಿಕ ಹೊಸ ಪೋಸ್ಟ್ ಹಾಕಿದ ಚಂದನ್ ಕುಮಾರ್
Chandan Kumar: ಕನ್ನಡದ ನಟ ಚಂದನ್​ ಕುಮಾರ್​ಗೆ ತೆಲುಗು ಧಾರಾವಾಹಿ ಶೂಟಿಂಗ್​ ಸೆಟ್​ನಲ್ಲಿ ಹಲ್ಲೆ; ವಿಡಿಯೋ ವೈರಲ್​

ಇದನ್ನೂ ಓದಿ: ಚಂದನ್ ಪತ್ನಿ ಕವಿತಾ ಗೌಡ ತೆಲುಗು ಸೀರಿಯಲ್ ತೊರೆದಿದ್ದೇಕೆ? ನಟಿ ಬಿಚ್ಚಿಟ್ರು ಅಸಲಿ ವಿಚಾರ

‘ಶ್ರೀಮತಿ ಶ್ರೀನಿವಾಸ್​’ ಧಾರಾವಾಹಿಯಿಂದ ಹೊರ ಬರುವ ಬಗ್ಗೆ ಚಂದನ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲೇ ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಅವರನ್ನು ತೆಲುಗು ಕಿರುತೆರೆಯಿಂದಲೇ ಹೊರಗಿಡುವ ಪ್ರಯತ್ನಗಳು ನಡೆಯುತ್ತಿವೆ. ಅಂತಿಮವಾಗಿ ಟೆಲಿವಿಶನ್ ನಿರ್ಮಾಪಕರ ಮಂಡಳಿ ಈ ಬಗ್ಗೆ ಯಾವ ರೀತಿಯ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Published On - 5:38 pm, Tue, 2 August 22

TV9 Web

TV9 Kannada

Read More
Loading...
Unable to load recommendations.
Follow Us