ಚಂದನ್ ಪತ್ನಿ ಕವಿತಾ ಗೌಡ ತೆಲುಗು ಸೀರಿಯಲ್ ತೊರೆದಿದ್ದೇಕೆ? ನಟಿ ಬಿಚ್ಚಿಟ್ರು ಅಸಲಿ ವಿಚಾರ
ಕವಿತಾ ಗೌಡ ಅವರು ಒಂದು ತೆಲುಗು ಧಾರಾವಾಹಿಯಲ್ಲಿ ಮಾತ್ರ ನಟಿಸಿದ್ದಾರೆ. ಆ ಬಳಿಕ ಯಾವುದೇ ತೆಲುಗು ಸೀರಿಯಲ್ನಲ್ಲಿ ನಟಿಸಿಲ್ಲ. ಹೀಗೇಕೆ ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.
![ಚಂದನ್ ಪತ್ನಿ ಕವಿತಾ ಗೌಡ ತೆಲುಗು ಸೀರಿಯಲ್ ತೊರೆದಿದ್ದೇಕೆ? ನಟಿ ಬಿಚ್ಚಿಟ್ರು ಅಸಲಿ ವಿಚಾರ](https://images.tv9kannada.com/wp-content/uploads/2022/08/Kavitha-gowda.jpg?w=1280)
ತೆಲುಗು ಕಿರುತೆರೆಯಲ್ಲಿ ಕನ್ನಡದ ಸಾಕಷ್ಟು ಕಲಾವಿದರು ನಟಿಸುತ್ತಿದ್ದಾರೆ. ಆ ಪೈಕಿ ಚಂದನ್ ಕುಮಾರ್ (Chandan Kumar) ಕೂಡ ಒಬ್ಬರು. ತೆಲುಗು ಕಿರುತೆರೆಯವರು ಕನ್ನಡಿಗರನ್ನು ಸಹಿಸುತ್ತಿಲ್ಲ ಎಂಬ ಮಾತನ್ನು ಚಂದನ್ ಕುಮಾರ್ ಆಡಿದ್ದಾರೆ. ತಮ್ಮ ಮೇಲೆ ಆದ ಹಲ್ಲೆ ಉದ್ದೇಶ ಪೂರ್ವಕ ಎಂಬುದು ಅವರ ಆರೋಪ. ಇಂದು (ಆಗಸ್ಟ್ 1) ಈ ಕುರಿತು ಸುದ್ದಿಗೋಷ್ಠಿ ನಡೆಸಿ ಅವರು ಹಲವು ವಿಚಾರಗಳಿಗೆ ಸ್ಪಷ್ಟನೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಅವರ ಪತ್ನಿ ಕವಿತಾ ಗೌಡ (Kavitha Gowda) ಕೂಡ ಇದ್ದರು. ತಾವು ತೆಲುಗು ಕಿರುತೆರೆ ಲೋಕ ತೊರೆದಿದ್ದು ಏಕೆ ಎಂಬುದನ್ನು ಅವರು ವಿವರಿಸಿದ್ದಾರೆ.
ಕವಿತಾ ಗೌಡ ಅವರು ಕಿರುತೆರೆ ಮೂಲಕ ಬಣ್ಣದ ಬದುಕು ಆರಂಭಿಸಿದರು. ಕನ್ನಡದ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಮೂಲಕ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿತು. ಅವರು ಒಂದು ತೆಲುಗು ಧಾರಾವಾಹಿಯಲ್ಲಿ ಮಾತ್ರ ನಟಿಸಿದ್ದಾರೆ. ಆ ಬಳಿಕ ಯಾವುದೇ ತೆಲುಗು ಸೀರಿಯಲ್ನಲ್ಲಿ ನಟಿಸಿಲ್ಲ. ಹೀಗೇಕೆ ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ಪತಿಗೆ ಆದ ಅನ್ಯಾಯದ ಬಗ್ಗೆ ಬೇಸರ ಹೊರ ಹಾಕಿದ್ದಾರೆ.
ಪತಿ ಮೇಲೆ ಆದ ಹಲ್ಲೆ ಬಗ್ಗೆ ಮಾತನಾಡಿರುವ ಕವಿತಾ ಗೌಡ, ‘ಈ ವಿಚಾರದಲ್ಲಿ ನಾನು ಮಾತ್ರ ಸುಮ್ಮನೆ ಇರುವುದಿಲ್ಲ. ನನಗೆ ಮೊದಲು ಚಂದನ್ ಘಟನೆ ಬಗ್ಗೆ ಹೇಳಿರಲಿಲ್ಲ. ಬೇರೆ ಕಡೆಯಿಂದ ಆ ಬಗ್ಗೆ ಗೊತ್ತಾಯ್ತು. ಎಲ್ಲವೂ ಮಾತಲ್ಲಿ ಇರಬೇಕು. ಅದನ್ನು ಬಿಟ್ಟು ಹಲ್ಲೆ ಹೇಗೆ ಮಾಡಿದ್ರು? ಆ ಮೂರು ಜನ ಕ್ಷಮೆ ಕೇಳಬೇಕು. ಅಲ್ಲಿದ್ದ ನಮ್ಮವರೇ ನಮಗೆ ಸಪೋರ್ಟ್ ಮಾಡಲಿಲ್ಲ ಅನ್ನೋ ಬಗ್ಗೆ ಬೇಸರ ಇದೆ’ ಎಂದಿದ್ದಾರೆ ಕವಿತಾ ಗೌಡ.
ಇದನ್ನೂ ಓದಿ: ಸೆಲ್ಫಿ ಕೇಳಿ ನಟಿ ಕವಿತಾ ಗೌಡ ಅವರನ್ನು ಕಿಡ್ನ್ಯಾಪ್ ಮಾಡಿದ ದುಷ್ಕರ್ಮಿಗಳು!; ವೈರಲ್ ವಿಡಿಯೋದ ಅಸಲಿಯತ್ತೇನು?
ತೆಲುಗು ಕಿರುತೆರೆ ಲೋಕ ತೊರೆದಿದ್ದು ಏಕೆ ಎಂಬ ಬಗ್ಗೆ ಕವಿತಾ ಗೌಡ ಮಾತನಾಡಿದ್ದಾರೆ. ‘ತೆಲುಗಿನಲ್ಲಿ ಕೆಲಸ ಮಾಡುವಾಗ ನನಗೆ ಕಂಫರ್ಟಬಲ್ ಅನಿಸಲಿಲ್ಲ. ಅದಕ್ಕೆ ನಾನು ಅಲ್ಲಿ ಕೆಲಸ ಮಾಡಲಿಲ್ಲ’ ಎಂದಿದ್ದಾರೆ ಕವಿತಾ ಗೌಡ. ‘ಶ್ರೀಮತಿ ಶ್ರೀನಿವಾಸ್’ ಧಾರಾವಾಹಿಯಲ್ಲಿ ಚಂದನ್ ನಟಿಸುತ್ತಿದ್ದರು. ಈ ಧಾರಾವಾಹಿ ಸೆಟ್ನಲ್ಲೇ ಕಿರಿಕ್ ಆಗಿತ್ತು. ಈ ಧಾರಾವಾಹಿಯಿಂದ ಹೊರ ಬರುವ ನಿರ್ಧಾರಕ್ಕೆ ಚಂದನ್ ಬಂದಿದ್ದಾರೆ. ಗಂಡನ ನಿರ್ಧಾರವನ್ನು ಕವಿತಾ ಬೆಂಬಲಿಸಿದ್ದಾರೆ.
Published On - 10:36 pm, Mon, 1 August 22