‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಫಿನಾಲೆಗೆ ವೇದಿಕೆ ರೆಡಿ; ಯಾರಾಗ್ತಾರೆ ಚಾಂಪಿಯನ್?

ಜೀ ಕನ್ನಡದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಗ್ರ್ಯಾಂಡ್ ಫಿನಾಲೆ ಏಪ್ರಿಲ್ 11 ಮತ್ತು 12ರಂದು ಪ್ರಸಾರವಾಗಲಿದೆ. ಪೂಜಾ-ಅನೂಪ್ ಸೇರಿದಂತೆ ಐದು ಜೋಡಿಗಳು ಅಂತಿಮ ಹಂತ ತಲುಪಿದ್ದು, ಜಡ್ಜ್‌ಗಳಾದ ಶಿವರಾಜ್‌ಕುಮಾರ್, ರಚಿತಾ ರಾಮ್ ಮಾರ್ಗದರ್ಶನ ಪಡೆದಿದ್ದಾರೆ. ಯಾರು ಚಾಂಪಿಯನ್ ಪಟ್ಟ ಗೆಲ್ಲುತ್ತಾರೆ ಎಂಬ ಕುತೂಹಲ ಹೆಚ್ಚಿದ್ದು, ವಿಜೇತರ ಘೋಷಣೆ ಭಾನುವಾರ ರಾತ್ರಿ ಆಗಲಿದೆ.

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಫಿನಾಲೆಗೆ ವೇದಿಕೆ ರೆಡಿ; ಯಾರಾಗ್ತಾರೆ ಚಾಂಪಿಯನ್?
ಡಿಕೆಡಿ ಫಿನಾಲೆ
Image Credit source: Zee Kannada

Updated on: Apr 08, 2026 | 3:07 PM

ಜೀ ಕನ್ನಡದಲ್ಲಿ ಪ್ರಸಾರ ಆಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (DKD) ಮೂಲಕ ಅನೇಕ ಪ್ರತಿಭೆಗಳಿಗೆ ವೇದಿಕೆ ಸಿಕ್ಕಿದೆ.ಈಗ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 2025’ ಅಂತಿಮ ಹಂತ ತಲುಪಿದೆ. ಏಪ್ರಿಲ್ 11 ಶನಿವಾರ ಸಂಜೆ 7 ಗಂಟೆಯಿಂದ 9 ಗಂಟೆಯವರೆಗೆ ಮತ್ತು ಏಪ್ರಿಲ್ 12 ಭಾನುವಾರದಂದು ಸಂಜೆ 7 ಗಂಟೆಯಿಂದ 9:30ರವರೆಗೆ ಫಿನಾಲೆ ಜೀ ಕನ್ನಡದಲ್ಲಿ ಪ್ರಸಾರ ಆಗಲಿದೆ. ಈ ವೇಳೆ ವಿಜೇತರ ಹೆಸರನ್ನು ಘೋಷಣೆ ಮಾಡಲಾಗುತ್ತದೆ. ಈ ಬಾರಿಯ ಡಿಕೆಡಿ ಚಾಂಪಿಯನ್ ಯಾರಾಗುತ್ತಾರೆ ಎನ್ನುವ ಕುತೂಹಲ ಮೂಡಿದೆ. ಇದಕ್ಕೆ ಭಾನುವಾರ ರಾತ್ರಿ ಉತ್ತರ ಸಿಗಲಿದೆ.

ಈ ಬಾರಿ ಫಿನಾಲೆಯಲ್ಲಿ ಪೂಜಾ ಮತ್ತು ಅನೂಪ್, ಮೋಹಿತ್ ಮತ್ತು ಅನನ್ಯ, ಸಿದ್ದೇಗೌಡ್ರು ಮತ್ತು ದೀಶಲ್, ಹರ್ಷ ಮತ್ತು ನಂದು, ಶಿಕ್ಷಿತ್ ತಾಪಾ ಮತ್ತು ಸಂಜನಾ ಫೈನಲಿಸ್ಟ್ ಆಗಿದ್ದಾರೆ. ಗ್ರಾಂಡ್ ಫಿನಾಲೆಯಲ್ಲಿ ಇವರುಗಳ ನಡುವೆ ಪೈಪೋಟಿ ನಡೆಯಲಿದೆ.

ಇದನ್ನೂ ಓದಿ: ಏಪ್ರಿಲ್ 4ರಿಂದ ಜೀ ಕನ್ನಡದಲ್ಲಿ ‘ಜೋಡಿ ನಂ.1′ ಶೋ; ಜಡ್ಜ್​​-ಸ್ಪರ್ಧಿ ಇಬ್ಬರೂ ಸೂಪರ್

ಒಂದು ವೇದಿಕೆಯಿಂದ ಸ್ಪರ್ಧಿಗಳು ಕೇವಲ ಅವಕಾಶವನ್ನು ಮಾತ್ರ ಪಡೆಯುವುದಿಲ್ಲ. ಅವಕಾಶದ ಜೊತೆ ಹಿರಿಯರ ಮಾರ್ಗದರ್ಶನ ಕೂಡ ಪಡೆಯುತ್ತಾರೆ. ಯಾವ ಶಾಲೆಗಳೂ ಹೇಳಿಕೊಡದ ಪಾಠ ಇಲ್ಲಿ ಸಿಗುತ್ತದೆ. ಡಿಕೆಡಿ ಶೋನ ಸ್ಪರ್ಧಿಗಳಿಗೂ ಜಡ್ಜ್​​ಗಳಾದ ಡಾ. ಶಿವರಾಜ್ ಕುಮಾರ್, ರಚಿತಾ ರಾಮ್, ಅರ್ಜುನ್ ಜನ್ಯ ಮತ್ತು ವಿಜಯ್ ರಾಘವೇಂದ್ರ ಅವರ ಮಾರ್ಗದರ್ಶನ ಸಿಕ್ಕಿದೆ. ಈ ನಾಲ್ವರು ಸೆಲೆಬ್ರಿಟಿಗಳು ಈ ಬಾರಿಯ ಡಿಕೆಡಿ ಜಡ್ಜ್​​ಗಳಾಗಿದ್ದರು. ಅನುಶ್ರೀ ಅವರು ತಮ್ಮ ಮುದ್ದಾದ ಮಾತುಗಳಿಂದ ಆ್ಯಂಕರಿಂಗ್ ಮಾಡುತ್ತಾ ಎಲ್ಲರನ್ನೂ ರಂಜಿಸಿದ್ದಾರೆ.

ಫಿನಾಲೆಯಲ್ಲಿರುವ ಎಲ್ಲಾ ಸ್ಪರ್ಧಿಗಳು ಸಾಕಷ್ಟು ಶ್ರಮ ಹಾಕಿ ಇಲ್ಲಿವರೆಗೆ ಬಂದಿದ್ದಾರೆ. ಜಡ್ಜ್​​ಗಳ ಮಾರ್ಗದರ್ಶನ ಕೂಡ ಇವರಿಗೆ ಸಹಕಾರಿ ಆಗಿದೆ. ಫಿನಾಲೆ ಎಪಿಸೋಡ್​ನಲ್ಲಿ ಎಲ್ಲಾ ಜೋಡಿಗಳು ಪರ್ಫಾರ್ಮ್ ಮಾಡಿದ ನಂತರ ವಿನ್ನರ್ ಘೋಷಣೆ ಆಗಲಿದೆ. ಗೆದ್ದವರಿಗೆ ಪುನೀತ್ ರಾಜ್​​​ಕುಮಾರ್ ಅವರಿರೋ ಆಕರ್ಷಕ ಕಪ್ ಸಿಗಲಿದೆ. ಈ ಶೋ ಮುಗಿದ ಬಳಿಕ ಹೊಸ ರಿಯಾಲಿಟಿ ಶೋ ಆರಂಭ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:06 pm, Wed, 8 April 26

Loading...
Unable to load recommendations.
Follow Us