ಈ ವಾರ ಎಲಿಮಿನೇಟ್ ಆಗೋದು ಯಾರು? ಇಲ್ಲಿದೆ ಸಾಧ್ಯಾಸಾಧ್ಯತೆ

ಈ ವಾರ ಚೈತ್ರಾ, ಮಂಜು, ತ್ರಿವಿಕ್ರಂ, ಮೋಕ್ಷಿತಾ, ಗೌತಮಿ, ಧರ್ಮ ಹಾಗೂ ಹನುಮಂತ ನಾಮಿನೇಷನ್ ಲಿಸ್ಟ್​ನಲ್ಲಿ ಇದ್ದಾರೆ. ಈಗಾಗಲೇ ಬಿಗ್ ಬಾಸ್​ನಲ್ಲಿ 50 ದಿನಗಳು ಪೂರ್ಣಗೊಂಡಿರುವುದರಿಂದ ಎಲ್ಲರೂ ಸ್ಟ್ರಾಂಗ್ ಸ್ಪರ್ಧಿಗಳು ಎಂದೇ ಗುರುತಿಸಲ್ಪಟ್ಟಿದ್ದಾರೆ ಎನ್ನಬಹುದು. ಸದ್ಯ ಜಿಯೋ ಸಿನಿಮಾದಲ್ಲಿ ವೋಟಿಂಗ್​ಗೆ ಅವಕಾಶ ಇದ್ದು, ಯಾರು ಎಲಿಮಿನೇಟ್ ಆಗುತ್ತಾರೆ ಅನ್ನೋದು ಭಾನುವಾರ ತಿಳಿಯಲಿದೆ.

ಈ ವಾರ ಎಲಿಮಿನೇಟ್ ಆಗೋದು ಯಾರು? ಇಲ್ಲಿದೆ ಸಾಧ್ಯಾಸಾಧ್ಯತೆ
ಈ ವಾರ ಎಲಿಮಿನೇಟ್ ಆಗೋದು ಯಾರು? ಇಲ್ಲಿದೆ ಸಾಧ್ಯಾಸಾಧ್ಯತೆ

Updated on: Nov 22, 2024 | 2:00 PM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ವಾರ ಕಳೆದಂತೆ ಸ್ಪರ್ಧೆ ಜೋರಾಗುತ್ತಿದೆ. ಯಾರು ಎಲಿಮಿನೇಟ್ ಆಗುತ್ತಾರೆ ಯಾರು ಸೇವ್ ಆಗುತ್ತಾರೆ ಎನ್ನುವ ಕುತೂಹಲ ಪ್ರತಿ ವಾರವೂ ಇರುತ್ತದೆ. ಈ ವಾರವೂ ಘಟಾನುಘಟಿಗಳು ನಾಮಿನೇಟ್ ಆಗಿದ್ದಾರೆ. ಈ ಕಾರಣಕ್ಕೆ ಎಲಿಮಿನೇಟ್ ಆಗೋದು ಯಾರು ಎಂದು ಹೇಳೋದು ಈ ಬಾರಿ ಅಷ್ಟು ಸುಲಭದಲ್ಲಿ ಇಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.

ಈ ವಾರ ಚೈತ್ರಾ, ಮಂಜು, ತ್ರಿವಿಕ್ರಂ, ಮೋಕ್ಷಿತಾ, ಗೌತಮಿ, ಧರ್ಮ ಹಾಗೂ ಹನುಮಂತ ನಾಮಿನೇಷನ್ ಲಿಸ್ಟ್​ನಲ್ಲಿ ಇದ್ದಾರೆ. ಈಗಾಗಲೇ ಬಿಗ್ ಬಾಸ್​ನಲ್ಲಿ 50 ದಿನಗಳು ಪೂರ್ಣಗೊಂಡಿರುವುದರಿಂದ ಎಲ್ಲರೂ ಸ್ಟ್ರಾಂಗ್ ಸ್ಪರ್ಧಿಗಳು ಎಂದೇ ಗುರುತಿಸಲ್ಪಟ್ಟಿದ್ದಾರೆ ಎನ್ನಬಹುದು. ಸದ್ಯ ಜಿಯೋ ಸಿನಿಮಾದಲ್ಲಿ ವೋಟಿಂಗ್​ಗೆ ಅವಕಾಶ ಇದ್ದು, ಯಾರು ಎಲಿಮಿನೇಟ್ ಆಗುತ್ತಾರೆ ಅನ್ನೋದು ಭಾನುವಾರ ತಿಳಿಯಲಿದೆ.

ಕಳೆದ ವಾರ ಚೈತ್ರಾ ಅವರು ನಾನು ಮನೆಯಿಂದ ಹೊರ ಹೋಗುತ್ತೇನೆ ಎಂದು ಹೇಳಿದ್ದರು. ಆದರೆ, ಈ ವಾರ ಅವರು ಚಿಗುರಿದ್ದಾರೆ. ಈ ಕಾರಣಕ್ಕೆ ಅವರು ಈ ವಾರ ಹೊರ ಹೋಗುವುದು ಅನುಮಾನ. ಇನ್ನು, ಮಂಜು, ತ್ರವಿಕ್ರಂ, ಮೋಕ್ಷಿತಾ, ಗೌತಮಿ, ಹನುಮಂತ ಉತ್ತಮ ಆಟ ಪ್ರದರ್ಶನ ಮಾಡುತ್ತಿದ್ದಾರೆ. ಅವರು ಯಾರಿಗೂ ಎಲಿಮಿನೇಷನ್ ಭಯ ಇಲ್ಲ.

ಕೊನೆಯಲ್ಲಿ ಉಳಿದವರು ಧರ್ಮ. ತಮ್ಮ ಒಳ್ಳೆಯ ಮನಸ್ಸಿನಿಂದ ಧರ್ಮ ಅವರು ಎಲ್ಲರಿಗೂ ಇಷ್ಟ ಆಗುತ್ತಿದ್ದಾರೆ. ಆದರೆ, ಅವರು ಉತ್ತಮ ಆಟ ತೋರಿಸುತ್ತಿಲ್ಲ ಎಂದು ಅನೇಕರು ಅಪಸ್ವರ ತೆಗೆದಿದ್ದು ಇದೆ. ಈ ಕಾರಣಕ್ಕೆ ಅವರು ಎಲಿಮಿನೇಟ್ ಆದರೂ ಆಗಬಹುದು ಎಂದು ಕೆಲವರು ಊಹಿಸಿದ್ದಾರೆ.

ಇದನ್ನೂ ಓದಿ: ಕೇವಲ ಸಿಟ್ಟಲ್ಲ; ಬಿಗ್ ಬಾಸ್ ಮನೆಯಲ್ಲಿ ಅನಾವಾರಣ ಆಯಿತು ಶೋಭಾ ಶೆಟ್ಟಿ ಮತ್ತೊಂದು ಮುಖ

ಇದು ಬಿಗ್ ಬಾಸ್ ಆಟ. ಯಾರು ಯಾವಾಗ ಎಲಿಮಿನೇಟ್ ಆಗುತ್ತಾರೆ ಎಂದು ಹೇಳೋಕೆ ಸಾಧ್ಯವಿಲ್ಲ. ಈ ವಾರ ವೋಟಿಂಗ್ ಆಧಾರಾದ ಮೇಲೆ ಒಬ್ಬರು ಸೇವ್ ಆಗಲಿದ್ದಾರೆ. ಅತಿ ಕಡಿಮೆ ವೋಟ್ ಪಡೆದವರು ಎಲಿಮಿನೇಟ್ ಆಗಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us