- Kannada News Photo gallery Shobha Shetty became emotional and Cried In Bigg Boss house cinema News in Kannada
ಕೇವಲ ಸಿಟ್ಟಲ್ಲ; ಬಿಗ್ ಬಾಸ್ ಮನೆಯಲ್ಲಿ ಅನಾವಾರಣ ಆಯಿತು ಶೋಭಾ ಶೆಟ್ಟಿ ಮತ್ತೊಂದು ಮುಖ
ಶೋಭಾ ಶೆಟ್ಟಿ ಕೇವಲ ಅಗ್ರೆಸ್ ಆಗಿ ಆಟ ಆಡುತ್ತಾರೆ ಎಂಬುದು ಅನೇಕರ ಊಹೆ ಆಗಿತ್ತು. ಆದರೆ, ಈ ಊಹೆ ತಪ್ಪಾಗಿದೆ. ಅವರು ತಮ್ಮ ಮತ್ತೊಂದು ಮುಖವನ್ನು ತೋರಿಸಿದ್ದಾರೆ. ಇದನ್ನು ನೋಡಿ ಅನೇಕರಿಗೆ ಅಚ್ಚರಿ ಆಗಿದೆ.
Updated on:Nov 22, 2024 | 7:18 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ಕ್ಕೆ ಶೋಭಾ ಶೆಟ್ಟಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಅವರು ಮೊದಲ ದಿನದಿಂದಲೇ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಶೋಭಾ ಆಟ ಅನೇಕರಿಗೆ ಇಷ್ಟ ಆಗುತ್ತಿದೆ. ಅವರು ಯಾವಾಗಲೂ ಅಗ್ರೆಸ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಈಗ ಭಾವನಾತ್ಮಕ ಮುಖವನ್ನು ತೋರಿಸಿದ್ದಾರೆ.

ಶೋಭಾ ಶೆಟ್ಟಿ ಕೇವಲ ಅಗ್ರೆಸ್ ಆಗಿ ಆಟ ಆಡುತ್ತಾರೆ ಎಂಬುದು ಅನೇಕರ ಊಹೆ ಆಗಿತ್ತು. ಆದರೆ, ಈ ಊಹೆ ತಪ್ಪಾಗಿದೆ. ಅವರು ತಮ್ಮ ಮತ್ತೊಂದು ಮುಖವನ್ನು ತೋರಿಸಿದ್ದಾರೆ. ಇದನ್ನು ನೋಡಿ ಅನೇಕರಿಗೆ ಅಚ್ಚರಿ ಆಗಿದೆ.

‘ಕೆಲಸಗಳ ಕಾರಣಕ್ಕೆ ಕಳೆದ 10 ವರ್ಷಗಳಲ್ಲಿ ನಾನು ಕುಟುಂಬಕ್ಕೆ ಹೆಚ್ಚು ಟೈಮ್ ನೀಡೋಕೆ ಆಗಿಲ್ಲ. ನಾನು ಕುಟುಂಬದ ಜೊತೆ ಸಾಕಷ್ಟು ಕನೆಕ್ಟ್ ಆಗಿದ್ದೇನೆ. ನನ್ನ ಮೊದಲ ಆದ್ಯತೆ ಕುಟುಂಬ’ ಎಂದು ಭಾವುಕರಾದರು ಶೋಭಾ ಶೆಟ್ಟಿ.

‘ಸೆಟ್ನಲ್ಲಿ ಒಂದು ಕುಟಂಬದ ದೃಶ್ಯ ನಡೆದರೆ ಅದು ನನಗೆ ಕನೆಕ್ಟ್ ಆಗುತ್ತದೆ. ಬೇರೆ ಭಾಷೆಯಲ್ಲಿ ನಾವು ಹೋಗಿ ಕೆಲಸ ಮಾಡಬೇಕು ಎಂದರೆ ಅದು ಅಷ್ಟು ಸುಲಭ ಅಲ್ಲ. ನಾನು ಪ್ರತಿ ಕ್ಷಣ ಕುಟುಂಬದವರನ್ನು ಮಿಸ್ ಮಾಡಿಕೊಳ್ಳುತ್ತಲೇ ಇರುತ್ತೇನೆ’ ಎಂದಿದ್ದಾರೆ ಶೋಭಾ.

ಶೋಭಾ ಶೆಟ್ಟಿ ಇದನ್ನು ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ಅವರು ಅಳುತ್ತಿರುವುದನ್ನು ನೋಡಿ ಅನೇಕರು ಅಚ್ಚರಿ ಹೊರಹಾಕಿದ್ದಾರೆ. ಶೋಭಾಗೆ ಹೀಗೊಂದು ಮುಖ ಇದೆಯೇ ಎಂಬ ಪ್ರಶ್ನೆ ಅನೇಕರಿಗೆ ಮೂಡಿದೆ.
Published On - 7:16 am, Fri, 22 November 24



















