ನಮ್ರತಾ ಗೌಡ (Namratha Gowda) ಅವರು ಬಿಗ್ ಬಾಸ್ ಮನೆಯಲ್ಲಿ ಏಳು ವಾರ ಪೂರ್ಣಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಆಟ ಮತ್ತಷ್ಟು ಟಫ್ ಆಗಲಿದೆ ಎಂಬ ಸೂಚನೆ ಸಿಕ್ಕಿದೆ. ಹೀಗಾಗಿ, ಎಂಟನೇ ವಾರದಲ್ಲಿ ಅವರು ಒಂದು ಶಪಥ ಮಾಡಿದ್ದಾರೆ. ಎಲ್ಲರ ಜೊತೆಯೂ ಬೆರೆತು ತಮ್ಮನ್ನು ತಾವು ಪ್ರೂವ್ ಮಾಡಿಕೊಳ್ಳುವುದಾಗಿ ಹೇಳಿದ್ದರು. ಆದರೆ, ಅವರಿಗೆ ಈಗ ಮೊಸ ಆಗಿದೆ. ಅದೂ ಪ್ರತಾಪ್ ಕಡೆಯಿಂದಲೇ ಎನ್ನುತ್ತಿದೆ ಕಲರ್ಸ್ ಕನ್ನಡ ರಿಲೀಸ್ ಮಾಡಿರುವ ಪ್ರೋಮೋ. ಸದ್ಯ ಈ ಬಗ್ಗೆ ಸಖತ್ ಚರ್ಚೆ ಆಗುತ್ತಿದೆ.
‘ನಮ್ರತಾ ಅವರು ಸರಿಯಾಗಿ ಗೇಮ್ ಆಡುತ್ತಿಲ್ಲ, ಮತ್ತಷ್ಟು ಓಪನ್ಅಪ್ ಆಗಬೇಕಿದೆ’ ಎಂದು ಡ್ರೋನ್ ಪ್ರತಾಪ್ ಹೇಳಿದ್ದರು. ಇದೇ ಕಾರಣಕ್ಕೆ ನಮ್ರತಾ ಅವರು ಪ್ರತಾಪ್ ಅವರ ಟೀಂ ಸೇರಿದ್ದಾರೆ. ‘ಬೇರೆ ನಮ್ರತಾ ಇದಾರೆ, ಅದನ್ನು ಹೊರ ತರುತ್ತೇನೆ ಎಂದು ಪ್ರಾಮಿಸ್ ಮಾಡಿದ್ದಾನೆ’ ಎಂದು ಕಾರಣ ನೀಡಿ ನಮ್ರತಾ ಡ್ರೋನ್ ಪ್ರತಾಪ್ ಟೀಂ ಸೇರಿದ್ದರು! ಆದರೆ, ಅಲ್ಲಾಗಿದ್ದೇ ಬೇರೆ.
‘ನೀವು ಕ್ಯಾಪ್ಟನ್ಸಿ ಟಾಸ್ಕ್ನಿಂದ ಯಾರನ್ನು ಹೊರಗೆ ಇಡಲು ಬಯಸುತ್ತೀರಿ’ ಎಂದು ಡ್ರೋನ್ ಪ್ರತಾಪ್ಗೆ ಬಿಗ್ ಬಾಸ್ ಕೇಳಿದರು. ಇದಕ್ಕೆ ಅವರು ನಮ್ರತಾ ಹೆಸರನ್ನು ತೆಗೆದುಕೊಂಡಿದ್ದಾರೆ. ತಮ್ಮನ್ನು ನಂಬಿ ಬಂದ ನಮ್ರತಾರನ್ನೇ ಅವರಿಗೆ ಹಿನ್ನಡೆ ಮಾಡಿದ್ದಾರೆ. ಇದು ನಮ್ರತಾ ಬೇಸರಕ್ಕೆ ಕಾರಣ ಆಗಿದೆ. ‘ನನಗೆ ಆಡಬೇಕು. ಇಷ್ಟ ಇಲ್ಲ ಅದಕ್ಕೆ ಅವರನ್ನು ತಂಡಕ್ಕೆ ಸೇರಿಸಿಕೊಂಡು ಹೊಡೆದು ಹಾಕಿದೆ ಅಂತ ಅವನು ಹೇಳಬಹುದಿತ್ತು’ ಎಂದು ಕಣ್ಣೀರು ಹಾಕಿದ್ದಾರೆ ನಮ್ರತಾ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ತುಕಾಲಿ ಸಂತೋಷ್ಗೆ ವಾರದ ಆರಂಭದಲ್ಲೇ ಜೈಲು ಶಿಕ್ಷೆ; ಯಾಕೀ ನಿರ್ಧಾರ?
ಪ್ರತಾಪ್ ನಿರ್ಧಾರದ ಹಿಂದಿನ ಕಾರಣವೇನು ?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/A8J2nYFAR7
— Colors Kannada (@ColorsKannada) November 28, 2023
ಕೆಲವರು ಪ್ರತಾಪ್ ಅವರನ್ನು ದೂಷಿಸಿದ್ದಾರೆ. ಅವರು ಈ ರೀತಿ ಮಾಡಬಾರದಿತ್ತು ಎಂದಿದ್ದಾರೆ. ಇನ್ನೂ ಕೆಲವರು ಪ್ರತಾಪ್ ನಿರ್ಧಾರವನ್ನು ಬೆಂಬಲಿಸಿದ್ದಾರೆ. ‘ಇಷ್ಟು ವಾರ ಅವರು ಆಡಲಿಲ್ಲ. ಈಗ ಅವರಿಗೆ ಎಚ್ಚರ ಆಗಿದೆ. ಅವರು ಕ್ಯಾಪ್ಟನ್ಸಿ ಟಾಸ್ಕ್ಗೆ ಅರ್ಹರಲ್ಲ’ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ನಿಜಕ್ಕೂ ಆಗಿದ್ದೇನು? ಡ್ರೋನ್ ಪ್ರತಾಪ್ ಈ ರೀತಿ ಹೆಸರನ್ನು ತೆಗೆದುಕೊಳ್ಳೋಕೆ ಬೇರೆ ಏನಾದರೂ ಕಾರಣ ಇದೆಯೇ ಎಂಬುದಕ್ಕೆ ಜಿಯೋ ಸಿನಿಮಾ ಹಾಗೂ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುವ ಎಪಿಸೋಡ್ ನೋಡಬೇಕು. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವೀಕ್ಷಿಬಹುದಾಗಿದೆ.
Published On - 3:04 pm, Tue, 28 November 23