ಎಸ್.ಪಿ. ಬಾಲಸುಬ್ರಹ್ಮಣ್ಯಂ ತೀರ್ಪುಗಾರರಾಗಿ ನಡೆಸಿಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ಸಂಗೀತ ಕಾರ್ಯಕ್ರಮ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಸಾಕಷ್ಟು ಟ್ಯಾಲೆಂಟ್ಗಳಿಗೆ ಇದು ವೇದಿಕೆ ಆಗಿತ್ತು. ಈಗ ಕಲರ್ಸ್ ಕನ್ನಡ ವಾಹಿನಿ ಈ ಶೋನ ಹೊಸ ಸೀಸನ್ ಆರಂಭಿಸುತ್ತಿದೆ. ಇದೇ ಆಗಸ್ಟ್ 14ರಿಂದ ಈ ರಿಯಾಲಿಟಿ ಶೋ ಎಪಿಸೋಡ್ ಆರಂಭಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ವಿಶೇಷ ತೀರ್ಪುಗಾರರಾಗಿ ಎಸ್ಪಿಬಿ ಅವರ ಪುತ್ರ ಎಸ್.ಪಿ. ಚರಣ್ ಇರುತ್ತಾರೆ ಅನ್ನೋದು ವಿಶೇಷ. ಈಗ ಕಲರ್ಸ್ ಕನ್ನಡ ವಾಹಿನಿ ವಿಶೇಷ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಎಸ್ಪಿಬಿ ಧ್ವನಿ ಕೇಳಿ ಚರಣ್ ಅತ್ತಿದ್ದಾರೆ.
ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ನಡೆಸಿಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ಈಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಹೊಸ ಸೀಸನ್ನಲ್ಲಿ ರಾಜೇಶ್ ಕೃಷ್ಣನ್, ವಿ.ಹರಿಕೃಷ್ಣ ಹಾಗೂ ರಘು ದೀಕ್ಷಿತ್ ಕಾರ್ಯಕ್ರಮದ ತೀರ್ಪುಗಾರರಾಗಿ ಇರಲಿದ್ದಾರೆ. ಈ ಕಾರ್ಯಕ್ರಮದ ಮೇಲೆ ವೀಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇದೆ.
ಎಸ್ಪಿಬಿ ಅವರು ‘ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ’ ಹಾಡನ್ನು ಹಾಡಿದ್ದರು. ಅಂದು ಪ್ರಸಾರವಾಗುತ್ತಿದ್ದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದ ವೇದಿಕೆ ಮೇಲೂ ಅವರ ಕಂಠದಿಂದ ಈ ಹಾಡು ಮೊಳಗಿತ್ತು. ಈಗ ಅವರ ಮಗ ಚರಣ್, ಹೊಸ ಸೀಸನ್ನಲ್ಲಿ ಈ ಹಾಡನ್ನು ಹಾಡಿದ್ದಾರೆ. ಹಾಡು ಮುಗಿದ ನಂತರದಲ್ಲಿ ಮಾತನಾಡಿರುವ ಚರಣ್, ‘ಎಲ್ಲೆಲ್ಲಿ ಸಂಗೀತ ಇರುತ್ತದೆಯೋ ಅಲ್ಲಿ ನಮ್ಮ ತಂದೆ ಇರುತ್ತಾರೆ. ಅವರೆಲ್ಲಿ ಇರುತ್ತಾರೋ ನಾನು ಅಲ್ಲಿರ್ತೀನಿ’ ಎಂದಿದ್ದಾರೆ.
ಈ ವೇಳೆ ಎಸ್ಪಿಬಿ ಅವರ ಹಳೆಯ ವಾಯ್ಸ್ನೋಟ್ ಹಾಕಲಾಗಿದೆ. ‘ಚರಣ್ ನಿನ್ನೊಂದಿಗೆ ನಾನು ಸದಾ ಇರ್ತೀನಿ. ಅದು ನಿನಗೆ ಗೊತ್ತಿರೋ ವಿಷಯ. ಕಾರ್ಯಕ್ರಮ ಆನಂದಿಸು. ತುಂಬಾ ಸೊಗಸಾಗಿದೆ. ದೇವರ ಆಶೀರ್ವಾದ ಸದಾ ನಿನ್ನ ಮೇಲಿರಲಿ’ ಎಂದು ಎಸ್ಪಿಬಿ ಧ್ವನಿಯಲ್ಲಿ ಕೇಳಿ ಬಂದಿದೆ. ಈ ಧ್ವನಿ ಕೇಳುತ್ತಿದ್ದಂತೆ ಚರಣ್ ಭಾವುಕರಾದರು.
ಈಗಾಗಲೇ ಆಡಿಷನ್ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ. ಆಗಸ್ಟ್ 14ರಂದು ಮೊದಲ ಎಪಿಸೋಡ್ ಪ್ರಸಾರವಾಗಲಿದೆ.
ಇದನ್ನೂ ಓದಿ: SPB Birth Anniversary: ಪ್ರೀತಿಯ ಎಸ್ಪಿಬಿ ಸರ್, ಎದೆ ತುಂಬಿ ಹಾಡಲು ನೀವು ಮತ್ತೆ ಹುಟ್ಟಿಬರಬೇಕು
ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟ ‘ನಮ್ಮನೆ ಯುವರಾಣಿ’ ಅಂಕಿತಾ; ಇದು ಫ್ಯಾನ್ಸ್ಗೆ ಖುಷಿಯಾಗೋ ವಿಚಾರ
Published On - 1:22 pm, Fri, 13 August 21