‘ಅರ್ಚನಾ ಕೊಟ್ಟಿಗೆ ಬಿಗ್ ಬಾಸ್​​ಗೆ ಬರಲಿ’; ವೀಕ್ಷಕರ ಒತ್ತಾಯ

Archana Kottige: ಯೂಟ್ಯೂಬ್ ಸಂದರ್ಶನದಲ್ಲಿ ತಮ್ಮ ಮಾತಿನ ಚಾತುರ್ಯದಿಂದ ನಟಿ ಅರ್ಚನಾ ಕೊಟ್ಟಿಗೆ ಗಮನ ಸೆಳೆದಿದ್ದಾರೆ. ಅವರು ಬಿಗ್ ಬಾಸ್ ಕನ್ನಡ 13ನೇ ಸೀಸನ್‌ಗೆ ಬರಬೇಕು ಎಂದು ವೀಕ್ಷಕರು ಒತ್ತಾಯಿಸುತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ಆರಂಭವಾಗಲಿರುವ ಶೋಗೆ ಇವರಿಗೆ ಆಫರ್ ಹೋಗಲಿದೆಯೇ ಎಂಬ ಕುತೂಹಲ ಮೂಡಿದೆ.

‘ಅರ್ಚನಾ ಕೊಟ್ಟಿಗೆ ಬಿಗ್ ಬಾಸ್​​ಗೆ ಬರಲಿ’; ವೀಕ್ಷಕರ ಒತ್ತಾಯ
ಅರ್ಚನಾ ಕೊಟ್ಟಿಗೆ

Updated on: Jul 27, 2026 | 11:49 AM

ಮುಖ್ಯಾಂಶಗಳು

  • ಯೂಟ್ಯೂಬ್‌ನಲ್ಲಿ ಅರ್ಚನಾ ಕೊಟ್ಟಿಗೆ ಹರಟೆ ವೈರಲ್
  • ನಟಿಯ ರಿಯಲ್ ಲೈಫ್ ಸ್ವಭಾವಕ್ಕೆ ಫ್ಯಾನ್ಸ್ ಫಿದಾ
  • ಸೆಪ್ಟೆಂಬರ್‌ನಿಂದ ಶುರುವಾಗಲಿದೆ ಬಿಗ್ ಬಾಸ್ 13

ನಟಿ ಅರ್ಚನಾ ಕೊಟ್ಟಿಗೆ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಇಷ್ಟು ದಿನ ಅವರ ನಟನೆಯನ್ನು ಮಾತ್ರ ವೀಕ್ಷಕರು ಕಣ್ತುಂಬಿಕೊಂಡಿದ್ದರು. ಆದರೆ ಇತ್ತೀಚೆಗೆ ಅವರ ಸ್ವಭಾವ ಹೇಗೆ ಎಂಬುದನ್ನು ತಿಳಿದುಕೊಳ್ಳುವ ಅವಕಾಶ ಪ್ರೇಕ್ಷಕರಿಗೆ ಸಿಕ್ಕಿತ್ತು. ಅವರು ರಿಯಲ್ ಲೈಫ್​​ನಲ್ಲಿ ಹೇಗೆ ಎಂದು ತಿಳಿದ ಬಳಿಕ ಅವರು ಬಿಗ್ ಬಾಸ್​​ಗೆ (Bigg Boss) ಬರಲೇಬೇಕು ಎಂದು ವೀಕ್ಷಕರು ಒತ್ತಾಯ ಮಾಡುತ್ತಿದ್ದಾರೆ. ಅವರಿಗೆ ಈ ಬಾರಿ ಬಿಗ್ ಬಾಸ್ ಆಫರ್ ಹೋಗುತ್ತಾ ಎನ್ನುವ ಕುತೂಹಲ ಮೂಡಿದೆ.

ಅರ್ಚನಾ ಕೊಟ್ಟಿಗೆ ಅವರು ಮೊದಲು ನಟಿಸಿದ್ದು 2018ರಲ್ಲಿ. ‘ಅರಣ್ಯಕಾಂಡ’ ಅವರ ಮೊದಲ ಸಿನಿಮಾ. ಆ ಬಳಿಕ ‘ವಾಸು ನಾನ್ ಪಕ್ಕ ಕಮರ್ಷಿಯಲ್’, ‘ಡಿಯರ್ ಸತ್ಯ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದರು. ಅವರ ನಟನೆಯ ‘ಎಲ್ಲರ ಕಾಲೆಳೆಯುತ್ತೆ ಕಾಲ’ ಈ ವರ್ಷ ತೆರೆಗೆ ಬಂದಿದೆ. ಕಳೆದ ವರ್ಷ ಅವರ ವಿವಾಹ ಕೂಡ ಆಗಿದೆ. ಈಗ ಅರ್ಚನಾ ಬಿಗ್ ಬಾಸ್​​ಗೆ ಬರುತ್ತಾರಾ ಎಂಬ ಪ್ರಶ್ನೆ ಮೂಡಿದೆ.

YouTube video player

ಅರ್ಚನಾ ಕೊಟ್ಟಿಗೆ ಅವರು ‘ಕೀರ್ತಿ ಇಎನ್​​ಟಿ ಕ್ಲೀನಿಕ್’ ಯೂಟ್ಯೂಬ್​ ಚಾನೆಲ್​ಗೆ ಅತಿಥಿಯಾಗಿ ಆಗಮಿಸಿದ್ದರು. ಅವರ ಜೊತೆ ಅಮೃತಾ ಅಯ್ಯಂಗಾರ್ ಹಾಗೂ ಖುಷಿ ರವಿ ಇದ್ದರು. ಎಲ್ಲರಿಗಿಂತ ಹೆಚ್ಚು ಮನರಂಜನೆಯನ್ನು ಅರ್ಚನಾ ಕೊಟ್ಟಿಗೆ ನೀಡಿದ್ದರು. ಅವರು ಮಾತನಾಡೋ ಶೈಲಿ ನೋಡಿ ಎಲ್ಲರೂ ಅಚ್ಚರಿಗೊಂಡಿದ್ದರು. ಅವರು ಮಾತಿನ ಮೂಲಕವೇ ಸಾಕಷ್ಟು ಮನರಂಜನೆ ನೀಡುತ್ತಾರೆ ಎಂಬ ಸ್ಪಷ್ಟತೆ ವೀಕ್ಷಕರಿಗೆ ಸಿಕ್ಕಿದೆ.

ಇದನ್ನೂ ಓದಿ: ಸೆಪ್ಟೆಂಬರ್‌ನಿಂದ ಏಕಕಾಲದಲ್ಲಿ ಶುರುವಾಗಲಿದೆ 6 ಭಾಷೆಗಳ ‘ಬಿಗ್ ಬಾಸ್’ ಹೊಸ ಶೋ

‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ ವೇಳೆಗೆ ಶೋ ಆರಂಭ ಆಗಲಿದೆ. ಈ ಬಾರಿ ಸೆಲೆಬ್ರಿಟಿಗಳ ಜೊತೆಗೆ ಜನ ಸಾಮಾನ್ಯರಿಗೂ ಅವಕಾಶ ನೀಡಲಾಗುತ್ತಿದೆ. ಈಗಾಗಲೇ ಈ ಶೋಗೆ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಕಲರ್ಸ್ ಕನ್ನಡ ವಾಹಿನಿಯವರು ಅರ್ಚನಾ ಅವರನ್ನು ಆಯ್ಕೆ ಮಾಡಲಿ ಎಂದು ಬೇಡಿಕೆ ಇಡುತ್ತಿದ್ದಾರೆ. ಅವರು ಬಂದರೆ ಮನರಂಜನೆಯ ರಸದೌತಣ ಸಿಗಲಿದೆ. ಕಳೆದ 12 ಸೀಸನ್​​ಗಳಲ್ಲಿ ಬಿಗ್ ಬಾಸ್​​​ನಲ್ಲಿ ಮಹಿಳೆಯರು ಗೆದ್ದಿದ್ದು ಒಮ್ಮೆ ಮಾತ್ರ. ಅದು ನಟಿ ಶ್ರುತಿ. ಒಂದೊಮ್ಮೆ ಅರ್ಚನಾ ಬಂದರೆ ಅವರಿಗೆ ಗೆಲ್ಲುವ ಅವಕಾಶವೂ ಇದೆ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:47 am, Mon, 27 July 26

Follow Us