‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಭಾನುವಾರದ ಎಪಿಸೋಡ್ ಯಾವಾಗಲೂ ಫನ್ ಇಂದ ತುಂಬಿರುತ್ತದೆ. ಕಳೆದ ಭಾನುವಾರ (ಡಿಸೆಂಬರ್ 1) ಈ ಫನ್ ಸ್ವಲ್ಪ ಅಧಿಕವಾಗಿಯೇ ಇತ್ತು. ಸ್ಪರ್ಧಿಯ ಕಣ್ಣಿಗೆ ಬಟ್ಟೆ ಕಟ್ಟಲಾಗುತ್ತದೆ. ಈ ವೇಳೆ ಬೋರ್ಡ್ಮೇಲೆ ಒಂದು ವಸ್ತುವನ್ನು ತೋರಿಸಲಾಗುತ್ತದೆ. ಅದು ಏನು ಎಂಬುದನ್ನು ಎದುರು ಇರುವ ವ್ಯಕ್ತಿ ಧ್ವನಿ ಮೂಲಕವೇ ವಿವರಿಸಬೇಕು. ಈ ಎಪಿಸೋಡ್ ಸಖತ್ ಮನರಂಜನಾತ್ಮಕವಾಗಿ ಇತ್ತು.
ಶೋಭಾ ಶೆಟ್ಟಿ ಹಾಗೂ ರಜತ್ ಅವರು ಬಂದರು. ಶೋಭಾ ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು. ಈ ವೇಳೆ ಫಸ್ಟ್ನೈಟ್ ಬೆಡ್ನ ಫೋಟೋ ಬಂತು. ಇದನ್ನು ನೋಡಿ ಎಲ್ಲರೂ ನಕ್ಕರು. ರಜತ್ ಬಳಿ ಇದನ್ನು ವಿವರಿಸೋಕೆ ಸಾಧ್ಯ ಆಗಲೇ ಇಲ್ಲ. ಆ ಬಳಿಕ ಶಿಶಿರ್ ಅವರು ತಾವು ಪ್ರಯತ್ನ ಮಾಡುವುದಾಗಿ ಬಂದರು. ಅವರ ಬಳಿಯೂ ಸಾಧ್ಯವಾಗಿಲ್ಲ.
ಕೊನೆಗೆ ಸುದೀಪ್ ಅವರು ಈ ಟಾಸ್ಕ್ನ ತ್ರಿವಿಕ್ರಂಗೆ ನೀಡಿದರು. ‘ಇದನ್ನು ಸರಿಯಾಗಿ ಗೆಸ್ ಮಾಡಿದರೆ ಇಡೀ ಮನೆಗೆ ಲಕ್ಷುರಿ ಬಜೆಟ್ ಸಿಗುತ್ತದೆ’ ಎಂದರು. ಆದರೆ, ತ್ರಿವಿಕ್ರಂ ಬಳಿಯೂ ಇದನ್ನು ಮಾಡೋಕೆ ಸಾಧ್ಯವಾಗಿಲ್ಲ. ಕೊನೆಗೆ ಬಂದಿದ್ದೇ ಹನುಮಂತ ಅವರು. ಹನುಮಂತ ಅವರು ಬರುತ್ತಿದ್ದಂತೆ, ‘ಎ ಏ ಐ ಅಂ ಅಃ..’ ಎಂದರು. ಅವರ ಧ್ವನಿಯಲ್ಲೇ ಶೋಭಾಗೆ ಗೊತ್ತಾಗಿ ಹೋಯಿತು. ‘ಫಸ್ಟ್ನೈಟ್ ಕೋಣೆ ಅಥವಾ ಬೆಡ್’ ಎಂದು ಶೋಭಾ ಉತ್ತರ ಕೊಟ್ಟರು. ಈ ಮೂಲಕ ಇಡೀ ಮನೆ ಲಕ್ಷುರಿ ಪಡೆಯಿತು.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ಮತ್ತೆ ಹೈಡ್ರಾಮಾ; ಮುಖ್ಯದ್ವಾರ ತೆಗೆದ ಬಳಿಕ ಉಲ್ಟಾ ಹೊಡೆದ ಶೋಭಾ ಶೆಟ್ಟಿ
ರಜತ್, ಶಿಶಿರ್ ಹಾಗೂ ತ್ರಿವಿಕ್ರಂ ಬಳಿ ಸಾಧ್ಯವಾಗದೇ ಇದ್ದಿದ್ದನ್ನು ಹನುಮಂತ ಅವರು ಮಾಡಿ ತೋರಿಸಿದರು. ಈ ಮೂಲಕ ಇಡೀ ಮನೆಗೆ ಲಕ್ಷುರಿ ಕೊಡಿಸಿ ಅವರು ಹಿರೋ ಆದರು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.