ಟಿವಿಲಿ ಬರೋಕೆ ರೆಡಿ ಆದ ಡಾಕ್ಟರ್ ಬ್ರೋ; ಆದರೆ, ಬಿಗ್ ಬಾಸ್ ಮೂಲಕ ಅಲ್ಲ

ಹಲವು ದೇಶಗಳನ್ನು ಸುತ್ತಿ ಫೇಮಸ್ ಆದವರು ಡಾಕ್ಟರ್ ಬ್ರೋ. ಅವರು ಯೂಟ್ಯೂಬ್ ಕಂಟೆಂಟ್​ಗಳು ಲಕ್ಷಾಂತರ ಬಾರಿ, ಕೋಟ್ಯಾಂತರ ಬಾರಿ ವೀಕ್ಷಣೆ ಕಾಣುತ್ತವೆ. ಈ ಕಾರಣದಿಂದ ಅವರು ಕೂಡ ಬಿಗ್ ಬಾಸ್​ಗೆ ಬರುತ್ತಾರೆ ಎಂದು ಹೇಳಲಾಗಿತ್ತು.

ಟಿವಿಲಿ ಬರೋಕೆ ರೆಡಿ ಆದ ಡಾಕ್ಟರ್ ಬ್ರೋ; ಆದರೆ, ಬಿಗ್ ಬಾಸ್ ಮೂಲಕ ಅಲ್ಲ
ಡಾಕ್ಟರ್ ಬ್ರೋ

Updated on: Oct 07, 2023 | 11:47 AM

‘ಬಿಗ್ ಬಾಸ್ ಕನ್ನಡ ಸೀಸನ್ 10’ ಆರಂಭಕ್ಕೆ ಬಾಕಿ ಉಳಿದುಕೊಂಡಿರೋದು ಕೇವಲ ಒಂದು ದಿನ ಮಾತ್ರ. ದೊಡ್ಮನೆಗೆ ಯಾರೆಲ್ಲ ಪ್ರವೇಶ ಪಡೆಯುತ್ತಾರೆ ಎನ್ನುವ ಬಗ್ಗೆ ವೀಕ್ಷಕರಿಗೆ ಸಾಕಷ್ಟು ಕುತೂಹಲ ಮೂಡಿದೆ. ಸಂಭಾವ್ಯರ ಪಟ್ಟಿ ಕೂಡ ಹರಿದಾಡುತ್ತಿದೆ. ಈ ಮೊದಲು ಗಗನ್ ಶ್ರೀನಿವಾಸ್ (Gagan Srinivas) ಅಲಿಯಾಸ್ ಡಾಕ್ಟರ್ ಬ್ರೋ (Dr Bro) ಕೂಡ ಬಿಗ್ ಬಾಸ್​ಗೆ ಬರುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಅದು ಸುಳ್ಳಾಗಿದೆ. ಡಾಕ್ಟರ್ ಬ್ರೋ ಅವರು ಬೇರೆಯದೇ ಅಪ್​ಡೇಟ್ ನೀಡಿದ್ದಾರೆ.

ಮೊದಲು ಬಿಗ್ ಬಾಸ್​ಗೆ ಕಲಾವಿದರನ್ನು ಮಾತ್ರ ಕರೆತರಲಾಗುತ್ತಿತ್ತು. ಈಗ ಸೋಶಿಯಲ್ ಮೀಡಿಯಾದ ಬಳಕೆ ಹೆಚ್ಚಿದೆ. ಯೂಟ್ಯೂಬರ್​ಗಳ ಪರಿಚಯವೂ ಅನೇಕರಿಗೆ ಇರುತ್ತದೆ. ಇಂಥವರಿಗೂ ಬಿಗ್ ಬಾಸ್​ ಕಡೆಯಿಂದ ಅವಕಾಶ ನೀಡಲಾಗುತ್ತಿದೆ. ಹಲವು ದೇಶಗಳನ್ನು ಸುತ್ತಿ ಫೇಮಸ್ ಆದವರು ಡಾಕ್ಟರ್ ಬ್ರೋ. ಅವರು ಯೂಟ್ಯೂಬ್ ಕಂಟೆಂಟ್​ಗಳು ಲಕ್ಷಾಂತರ ಬಾರಿ, ಕೋಟ್ಯಾಂತರ ಬಾರಿ ವೀಕ್ಷಣೆ ಕಾಣುತ್ತವೆ. ಈ ಕಾರಣದಿಂದ ಅವರು ಕೂಡ ಬಿಗ್ ಬಾಸ್​ಗೆ ಬರುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಅವರು ಸ್ಟಾರ್ ಸ್ಪೋರ್ಟ್ಸ್ ಕನ್ನಡಕ್ಕೆ ಹೋಗುತ್ತಿದ್ದಾರೆ!

ಬಿಗ್ ಬಾಸ್ ಆರಂಭಕ್ಕೂ ಮೊದಲೇ ವಿಶ್ವಕಪ್ ಆರಂಭ ಆಗಿದೆ. ಭಾನುವಾರ ಭಾರತ vs ಆಸ್ಟ್ರೇಲಿಯಾ ಮ್ಯಾಚ್ ನಡೆಯಲಿದೆ. ವಿಶ್ವಕಪ್​ನ ಮೊದಲ ಭಾರತದ ಮ್ಯಾಚ್ ಇದು. ಚೆನ್ನೈನಲ್ಲಿ ಈ ಪಂದ್ಯ ನಡೆಯುತ್ತಿದೆ. ಸ್ಟಾರ್​ ಸ್ಪೋರ್ಟ್ಸ್ ಈ ಮ್ಯಾಚ್​ನ ಪ್ರಸಾರದ ಹಕ್ಕನ್ನು ಹೊಂದಿದೆ. ಕನ್ನಡದಲ್ಲೂ ಕಾಮೆಂಟರಿ ಪ್ರಸಾರ ಕಾಣಲಿದೆ.

‘ಸರ್ಪ್ರೈಸ್ ಹೇಗಿತ್ತು ಫ್ರೆಂಡ್ಸ್. ಡಾಕ್ಟರ್ ಬ್ರೋ ಇನ್ಮೇಲೆ ಎಲ್ಲಾ ಅಪ್ಡೇಟ್ಸ್ ಕೊಡ್ತಾರೆ, ಸ್ಟಾರ್ ಸ್ಪೋರ್ಟ್ಸ್ ಕನ್ನಡ ನೋಡೋದು ಮರಿಬೇಡಿ’ ಎಂದು ಸ್ಟಾರ್ ಸ್ಪೋರ್ಟ್ಸ್ ಕನ್ನಡ ಕ್ಯಾಪ್ಶನ್ ನೀಡಿದೆ.

ಇದನ್ನೂ ಓದಿ: ಬಿಗ್ ಬಾಸ್​ಗೆ ಕಾಲಿಡೋ ಸ್ಪರ್ಧಿಗಳ ಸಂಭಾವ್ಯ ಪಟ್ಟಿ ಬಗ್ಗೆ ಇಲ್ಲಿದೆ ಮಾಹಿತಿ..

‘ನಾನು ಕೆಂಪೇಗೌಡ ಅಂತಾರಾಷ್ಟ್ರೀಯ ಏರ್​ಪೋರ್ಟ್​​ಗೆ ಬಂದಿದ್ದೇನೆ. ಹೊಸ ಮಿಷನ್​ಗೆ ಹೋಗ್ತಾ ಇದೀನಿ’ ಎಂದರು ಡಾಕ್ಟರ್ ಬ್ರೋ. ಆ ಬಳಿಕ ಅವರು ಲ್ಯಾಂಡ್ ಆಗಿದ್ದು ಚೆನ್ನೈಗೆ. ಸ್ಟಾರ್​ ಸ್ಪೋರ್ಟ್ಸ್ ಕನ್ನಡದಲ್ಲಿ ಕುಳಿತು ಡಾಕ್ಟರ್ ಬ್ರೋ ಅಪ್​ಡೇಟ್ ನೀಡಲಿದ್ದಾರೆ. ‘ನಾನು ಗಂಟುಮೂಟೆ ಹೊತ್ತುಕೊಂಡು ಎಲ್ಲೆಲ್ಲಿ ಮ್ಯಾಚ್ ನಡೆಯುತ್ತದೆಯೋ ಅಲ್ಲಿಗೆ ಹೋಗ್ತೀನಿ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us