Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ಗೆ ಕಾಲಿಡೋ ಸ್ಪರ್ಧಿಗಳ ಸಂಭಾವ್ಯ ಪಟ್ಟಿ ಬಗ್ಗೆ ಇಲ್ಲಿದೆ ಮಾಹಿತಿ..

ಪ್ರತಿ ಬಾರಿ ಬಿಗ್ ಬಾಸ್ ಆರಂಭ ಆಗುವುದಕ್ಕೂ ಮೊದಲು ಒಂದಷ್ಟು ಹೆಸರುಗಳು ಓಡಾಡುತ್ತವೆ. ಪ್ರತಿ ಸೀಸನ್​ನಲ್ಲೂ ಇದು ಸರ್ವೇ ಸಾಮಾನ್ಯ. 10ನೇ ಸೀಸನ್ ಕೂಡ ಇದಕ್ಕೆ ಹೊರತಾಗಿಲ್ಲ. ಕಳೆದ ವರ್ಷದಂತೆ ಈ ವರ್ಷವೂ ಕಲಾವಿದರು, ಸೋಶಿಯಲ್ ಮೀಡಿಯಾ ಮೂಲಕ ಫೇಮಸ್ ಆದವರು​, ಯೂಟ್ಯೂಬರ್ಸ್, ಆ್ಯಂಕರ್​ಗಳು ಕೂಡ ಇರಲಿದ್ದಾರೆ ಎನ್ನಲಾಗುತ್ತಿದೆ.

ಬಿಗ್ ಬಾಸ್​ಗೆ ಕಾಲಿಡೋ ಸ್ಪರ್ಧಿಗಳ ಸಂಭಾವ್ಯ ಪಟ್ಟಿ ಬಗ್ಗೆ ಇಲ್ಲಿದೆ ಮಾಹಿತಿ..
ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on: Oct 03, 2023 | 12:26 PM

‘ಬಿಗ್ ಬಾಸ್ ಸೀಸನ್ 10’ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ವೀಕೆಂಡ್​ನಲ್ಲಿ ಬಿಗ್ ಬಾಸ್ (Bigg Boss) ಆರಂಭ ಆಗಲಿದೆ. ಹೊಸ ಸೀಸನ್ ಬಗ್ಗೆ ವೀಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ದಶಕದ ಸಂಭ್ರಮ ಆಗಿರುವುದುರಿಂದ ಈ ಬಾರಿಯ ಬಿಗ್ ಬಾಸ್ ಸಖತ್ ಅದ್ದೂರಿಯಾಗಿ ಇರಲಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ ದೊಡ್ಮನೆ ಒಳಗೆ ಹೋಗುವ ಸ್ಪರ್ಧಿಗಳು ಯಾರ್ಯಾರು ಎನ್ನುವ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪಟ್ಟಿ ಹರಿದಾಡುತ್ತಿದೆ. ಆ ಕುರಿತು ಇಲ್ಲಿದೆ ಮಾಹಿತಿ.

ಪ್ರತಿ ಬಾರಿ ಬಿಗ್ ಬಾಸ್ ಆರಂಭ ಆಗುವುದಕ್ಕೂ ಮೊದಲು ಒಂದಷ್ಟು ಹೆಸರುಗಳು ಓಡಾಡುತ್ತವೆ. ಪ್ರತಿ ಸೀಸನ್​ನಲ್ಲೂ ಇದು ಸರ್ವೇ ಸಾಮಾನ್ಯ. 10ನೇ ಸೀಸನ್ ಕೂಡ ಇದಕ್ಕೆ ಹೊರತಾಗಿಲ್ಲ. ಕಳೆದ ವರ್ಷದಂತೆ ಈ ವರ್ಷವೂ ಕಲಾವಿದರು, ಸೋಶಿಯಲ್ ಮೀಡಿಯಾ ಮೂಲಕ ಫೇಮಸ್ ಆದವರು​, ಯೂಟ್ಯೂಬರ್ಸ್, ಆ್ಯಂಕರ್​ಗಳು ಕೂಡ ಇರಲಿದ್ದಾರೆ ಎನ್ನಲಾಗುತ್ತಿದೆ.

‘ಕನ್ನಡತಿ’ ಧಾರಾವಾಹಿ ಮೂಲಕ ಫೇಮಸ್ ಆದ ರಂಜನಿ ರಾಘವನ್ ದೊಡ್ಮನೆಗೆ ಹೋಗುತ್ತಾರೆ ಎಂದು ಸುದ್ದಿ ಆಗಿದೆ. ಕಲರ್ಸ್ ಜೊತೆ ಅವರಿಗೆ ಒಳ್ಳೆಯ ಒಡನಾಟ ಇದೆ. ಆರ್​ಸಿಬಿ ಪರ ಆಡಿದ್ದ ವಿನಯ್ ಕುಮಾರ್ ಕೂಡ ದೊಡ್ಮನೆಗೆ ಹೋಗಲಿದ್ದಾರಂತೆ.

ಕೆಜಿಎಫ್ ಚಿತ್ರದಲ್ಲಿ ನಟಿಸಿದ್ದ ರೂಪಾ ರಾಯಪ್ಪ, ಕಿರುತೆರೆ ನಟ ರಾಜೇಶ್ ಧ್ರುವ, ಮಿಮಿಕ್ರಿ ಗೋಪಿ, ಬುಲೆಟ್ ಪ್ರಕಾಶ್ ಮಗ ರಕ್ಷಕ್ ಕೂಡ ದೊಡ್ಮನೆಯಲ್ಲಿ ಇರಲಿದ್ದಾರೆ. ಅದ್ವಿತಿ ಶೆಟ್ಟಿ ಕೂಡ ಬಿಗ್ ಬಾಸ್​ಗೆ ತೆರಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅವರು ಹೋಗುತ್ತಿಲ್ಲ. ಈ ಬಗ್ಗೆ ಅವರು ಟಿವಿ9 ಕನ್ನಡ ಡಿಜಿಟಲ್​ಗೆ ಸ್ಪಷ್ಟನೆ ನೀಡಿದ್ದಾರೆ. ಡಾಕ್ಟರ್ ಬ್ರೋ ಕೂಡ ದೊಡ್ಮನೆಗೆ ತೆರಳುತ್ತಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ‘ಬಿಗ್ ಬಾಸ್​’ಗೆ 10 ದಿನ ಬಾಕಿ ಇರುವಾಗ ಪ್ರಸಾರದ ಸಮಯ ತಿಳಿಸಿದ ಸುದೀಪ್

‘ಬಿಗ್ ಬಾಸ್ ಕನ್ನಡ ಸೀಸನ್ 10’ ಅಕ್ಟೋಬರ್ 08ರಿಂದ ಆರಂಭ ಆಗಲಿದೆ. ಓಪನಿಂಗ್ ದಿನ ಸಂಜೆ ಆರು ಗಂಟೆಗೆ ಶೋ ಪ್ರಾರಂಭ ಆಗಲಿದೆ. ಪ್ರತಿ ನಿತ್ಯ ರಾತ್ರಿ 9:30ಕ್ಕೆ ಈ ಎಪಿಸೋಡ್ ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ