ಈ ಬಾರಿಯ ಬಿಗ್ ಬಾಸ್ಗೆ ಹೊಸ ಮನೆ; ಹೊಸ ಲೇಔಟ್, ಹೊಸ ಲುಕ್
‘ಬಿಗ್ ಬಾಸ್’ ಮನೆ ಇಷ್ಟು ದಿನ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಇತ್ತು. ಆದರೆ, ಈಗ ಇದನ್ನು ಸ್ಥಳಾಂತರಿಸಲಾಗಿದೆ. ಇದರ ಕೆಲಸಗಳು ಹೇಗೆ ನಡೆದವು ಎಂಬ ಬಗ್ಗೆ ಮೇಕಿಂಗ್ ವಿಡಿಯೋದಲ್ಲಿ ತೋರಿಸಲಾಗಿದೆ. ನಾಲ್ಕು ತಿಂಗಳ ಕಾಲ ಹಗಲು-ರಾತ್ರಿ ಶ್ರಮ ಹಾಕಿ ಈ ಮನೆ ನಿರ್ಮಾಣ ಮಾಡಲಾಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 10’ರ (Bigg Boss Kannada Season 10) ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಸುದೀಪ್ ನೇತೃತ್ವದಲ್ಲಿ 10ನೇ ಸೀಸನ್ ನಡೆಯಲಿದೆ. ಈ ಸೀಸನ್ ಹಲವು ಹೊಸತನಕ್ಕೆ ಸಾಕ್ಷಿ ಆಗಲಿದೆ. ಇಂದು (ಅಕ್ಟೋಬರ್ 03) ಬಿಗ್ ಬಾಸ್ಗೆ ಸಂಬಂಧಿಸಿ ಸುದ್ದಿಗೋಷ್ಠಿ ಆಯೋಜನೆ ಮಾಡಲಾಯಿತು. ಈ ವೇಳೆ ಹಲವು ವಿಚಾರಗಳ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯ ಬಿಸ್ನೆಸ್ ಹೆಡ್ ಪ್ರಶಾಂತ್ ನಾಯಕ್ ಮಾತನಾಡಿದರು. ಹೊಸ ಮನೆಯ ನಿರ್ಮಾಣದ ವಿಚಾರವನ್ನೂ ತಿಳಿಸಲಾಗಿದೆ.
‘ಬಿಗ್ ಬಾಸ್’ ಮನೆ ಇಷ್ಟು ದಿನ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಇತ್ತು. ಆದರೆ, ಈಗ ಇದನ್ನು ಸ್ಥಳಾಂತರಿಸಲಾಗಿದೆ. ಇದರ ಕೆಲಸಗಳು ಹೇಗೆ ನಡೆದವು ಎಂಬ ಬಗ್ಗೆ ಮೇಕಿಂಗ್ ವಿಡಿಯೋದಲ್ಲಿ ತೋರಿಸಲಾಗಿದೆ. ನಾಲ್ಕು ತಿಂಗಳ ಕಾಲ ಹಗಲು-ರಾತ್ರಿ ಶ್ರಮ ಹಾಕಿ ಈ ಮನೆ ನಿರ್ಮಾಣ ಮಾಡಲಾಗಿದೆ. ಈ ಬಾರಿಯ ಬಿಗ್ ಬಾಸ್ ಮನೆಗೆ ಹೊಸ ರೀತಿಯ ಲೇಔಟ್ ನೀಡಲಾಗಿದೆ. ಲುಕ್ ಕೂಡ ಹೊಸದಾಗಿದೆ.
ಭಾರತದಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಪ್ರತಿ ಭಾಷೆಗೂ ಬೇರೆ ಬೇರೆ ಮನೆ ಇದೆ. ವಿಶೇಷ ಎಂದರೆ, ಈಗ ಕನ್ನಡದಲ್ಲಿ ನಿರ್ಮಾಣ ಆಗಿರೋದು ಭಾರತದಲ್ಲಿ ಇರುವ ಅತಿದೊಡ್ಡ ‘ಬಿಗ್ ಬಾಸ್’ ಮನೆ ಎನ್ನುವ ಖ್ಯಾತಿ ಇದಕ್ಕೆ ಸಿಕ್ಕಿದೆ. ಈ ಕುರಿತು ಪ್ರಶಾಂತ್ ನಾಯಕ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ಗೆ ಕಾಲಿಡೋ ಸ್ಪರ್ಧಿಗಳ ಸಂಭಾವ್ಯ ಪಟ್ಟಿ ಬಗ್ಗೆ ಇಲ್ಲಿದೆ ಮಾಹಿತಿ..
ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್ 10ನೇ ಸೀಸನ್’ ನಡೆಸಿಕೊಡೋಕೆ ಎಗ್ಸೈಟ್ ಆಗಿದ್ದಾರೆ. ಸಿನಿಮಾ ಕೆಲಸಗಳ ಮಧ್ಯೆ ನಿರೂಪಣೆಗೂ ಅವರು ಆದ್ಯತೆ ನೀಡುತ್ತಾರೆ. ದೊಡ್ಮನೆಯ ಲೇಔಟ್ ಯಾವ ರೀತಿಯಲ್ಲಿ ಇರಲಿದೆ ಎಂಬುದನ್ನು ಮೊದಲ ದಿನ ಸುದೀಪ್ ವಿವರಿಸಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ




