AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

 ರಿವೀಲ್ ಆಯ್ತು ‘ಡಂಕಿ’ ಸಿನಿಮಾದ ಕಥೆ; ಶಾರುಖ್ ಖಾನ್ ಪಾತ್ರ ಹೇಗಿರಲಿದೆ?

‘ಡಂಕಿ’ ಎಂದರೆ ಅದಕ್ಕೆ ‘ಡಾಂಕಿ ಫ್ಲೈಟ್’ ಎನ್ನುವ ಅರ್ಥವೂ ಇದೆ. ಅಂದರೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಅಕ್ರಮವಾಗಿ ವಲಸೆ ಹೋಗುವುದು. ಅಮೆರಿಕ ಹಾಗೂ ಕೆನಡ ಭಾಗದಲ್ಲಿ ಇದು ಹೆಚ್ಚಾಗಿದೆ. ಇದೇ ಕಥೆಯನ್ನು ರಾಜ್​ಕುಮಾರ್ ಹಿರಾನಿ ಹೇಳುತ್ತಿದ್ದಾರಂತೆ.

 ರಿವೀಲ್ ಆಯ್ತು ‘ಡಂಕಿ’ ಸಿನಿಮಾದ ಕಥೆ; ಶಾರುಖ್ ಖಾನ್ ಪಾತ್ರ ಹೇಗಿರಲಿದೆ?
ಡಂಕಿ
ರಾಜೇಶ್ ದುಗ್ಗುಮನೆ
|

Updated on: Oct 03, 2023 | 11:30 AM

Share

ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾದ (Dunki Movie) ಕೆಲಸ ಶುರುವಾಗಿ ಸಾಕಷ್ಟು ಸಮಯ ಕಳೆದಿದೆ. ಟೈಟಲ್ ರಿವೀಲ್ ಮಾಡೋಕೆ ಟೀಸರ್ ರಿಲೀಸ್ ಮಾಡಿದ್ದು ಬಿಟ್ಟರೆ ತಂಡದ ಕಡೆಯಿಂದ ಸಿನಿಮಾದ ಬಗ್ಗೆ ಯಾವುದೇ ಅಪ್​ಡೇಟ್ ಸಿಕ್ಕಿಲ್ಲ. ಈಗ ‘ಡಂಕಿ’ ಸಿನಿಮಾದ ಕಥೆಯ ಕುರಿತು ಹೊಸ ಸುದ್ದಿ ಒಂದು ಹರಿದಾಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಈ ಚಿತ್ರದ ಕಥೆ ಅಕ್ರಮ ವಲಸೆ ಬಗ್ಗೆ ಇದೆ ಎಂದು ಹೇಳಲಾಗುತ್ತಿದೆ.

‘ಡಂಕಿ’ ಎಂದರೆ ಅದಕ್ಕೆ ‘ಡಾಂಕಿ ಫ್ಲೈಟ್’ ಎನ್ನುವ ಅರ್ಥವೂ ಇದೆ. ಅಂದರೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಅಕ್ರಮವಾಗಿ ವಲಸೆ ಹೋಗುವುದು. ಅಮೆರಿಕ ಹಾಗೂ ಕೆನಡ ಭಾಗದಲ್ಲಿ ಇದು ಹೆಚ್ಚಾಗಿದೆ. ಇದೇ ಕಥೆಯನ್ನು ರಾಜ್​ಕುಮಾರ್ ಹಿರಾನಿ ಹೇಳುತ್ತಿದ್ದಾರಂತೆ. ಶಾರುಖ್ ಖಾನ್ ಕೂಡ ವಲಸಿಗನಾಗಿ ಕಾಣಿಸಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ರಾಜ್​ಕುಮಾರ್ ಹಿರಾನಿ ಅವರು ಯಾವುದೇ ಸಿನಿಮಾ ಮಾಡಿದರೂ ಸಾಕಷ್ಟು ಸೆನ್ಸಿಬಲ್ ಆಗಿ ಮಾಡುತ್ತಾರೆ. ಇದಕ್ಕೆ ‘ಪಿಕೆ’, ‘ಸಂಜು’ ಮೊದಲಾದ ಸಿನಿಮಾಗಳೇ ಸಾಕ್ಷಿ. ಈಗ ‘ಡಂಕಿ’ ಸಿನಿಮಾ ಕೂಡ ಹಾಸ್ಯಭರಿತವಾಗಿ ಮೂಡಿ ಬರಲಿದೆ ಎಂದು ಹೇಳಲಾಗುತ್ತಿದೆ.

ಡಂಕಿ ಸಿನಿಮಾದಲ್ಲಿ ಶಾರುಖ್ ಖಾನ್, ತಾಪ್ಸೀ ಪನ್ನು ಮೊದಲಾದವರು ನಟಿಸಿದ್ದಾರೆ. ಈ ಚಿತ್ರದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಲಿದೆ ಎನ್ನಲಾಗಿತ್ತು. ಇದಕ್ಕೆ ಶಾರುಖ್ ಖಾನ್ ಸ್ಪಷ್ಟನೆ ನೀಡಿದ್ದರು. ಕ್ರಿಸ್​ಮಸ್ ಪ್ರಯುಕ್ತ ಸಿನಿಮಾ ಡಿಸೆಂಬರ್ 22ರಂದು ರಿಲೀಸ್ ಆಗಲಿದೆ.

ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಜನವರಿ ತಿಂಗಳಲ್ಲಿ ರಿಲೀಸ್ ಆಗಿ ಗೆದ್ದಿತು. ಈಗ ‘ಜವಾನ್’ ಸಿನಿಮಾ ವಿಶ್ವ ಬಾಕ್ಸ್​​ ಆಫೀಸ್​ನಲ್ಲಿ 1100 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈಗ ‘ಡಂಕಿ’ ಸಿನಿಮಾ ಕೂಡ ಗೆದ್ದರೆ ಒಂದೇ ವರ್ಷದಲ್ಲಿ ಶಾರುಖ್ ಖಾನ್​ಗೆ ಮೂರನೇ ಗೆಲುವು ಸಿಗಲಿದೆ.

ಇದನ್ನೂ ಓದಿ: ‘ಡಂಕಿ’ Vs ‘ಸಲಾರ್’ ಫೈಟ್​ಗೆ ಹೆದರಿ ಕಾಲ್ಕಿತ್ತ ಸಿನಿಮಾಗಳು; ಎದ್ದಿದೆ ದೊಡ್ಡ ಅಲೆ

‘ಡಂಕಿ’ ಚಿತ್ರಕ್ಕೆ ಗೆಲುವು ಅಷ್ಟು ಸುಲಭದಲ್ಲಿ ಇಲ್ಲ. ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಡಿಸೆಂಬರ್ 22ರಂದೇ ರಿಲೀಸ್ ಆಗಲಿದೆ. ಹೀಗಾಗಿ ‘ಡಂಕಿ’ ಹಾಗೂ ಸಲಾರ್’ ಮಧ್ಯೆ ಭರ್ಜರಿ ಪೈಪೋಟಿ ಏರ್ಪಡಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ