Gaurav Khanna: ಬಿಗ್ ಬಾಸ್ ಹಿಂದ ಸೀಸನ್ 19ರ ವಿನ್ನರ್ ಆದ ಕಿರುತೆರೆ ನಟ

Bigg Boss Season 19 Winner: ಕಿರುತೆರೆ ನಟ ಗೌರವ್ ಖನ್ನಾ ಬಿಗ್ ಬಾಸ್ ಸೀಸನ್ 19ರ ವಿಜೇತರಾಗಿದ್ದಾರೆ. 50 ಲಕ್ಷ ರೂ. ಬಹುಮಾನ ಮತ್ತು ಟ್ರೋಫಿಯನ್ನು ಗೆದ್ದಿದ್ದಾರೆ. 14 ವಾರಗಳ ಕಾಲ ಮನೆಯಲ್ಲಿದ್ದು, ಆರಂಭದಲ್ಲಿ ಶಾಂತ ಸ್ವಭಾವದಿಂದ ಗಮನ ಸೆಳೆದಿದ್ದ ಗೌರವ್, ನಂತರ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದರು. ಫರ್ಹಾನಾ ಭಟ್ ಅವರನ್ನು ಸೋಲಿಸಿ, ಟ್ರೋಫಿ ಗೆದ್ದಿದ್ದಾರೆ.

Gaurav Khanna: ಬಿಗ್ ಬಾಸ್ ಹಿಂದ ಸೀಸನ್ 19ರ ವಿನ್ನರ್ ಆದ ಕಿರುತೆರೆ ನಟ
ಗೌರವ್ ಖನ್ನಾ
Updated By: ರಾಜೇಶ್ ದುಗ್ಗುಮನೆ

Updated on: Dec 08, 2025 | 7:47 AM

ಪ್ರಸಿದ್ಧ ಟಿವಿ ನಟ ಗೌರವ್ ಖನ್ನಾ ‘ಬಿಗ್ ಬಾಸ್ 19’ (Bigg Boss 19) ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಬಾರಿಯ ಬಿಗ್ ಬಾಸ್ ಸೀಸನ್ ಆಗಸ್ಟ್‌ನಲ್ಲಿ ಪ್ರಾರಂಭವಾಯಿತು. ಇದು ಭಾನುವಾರ (ಡಿಸೆಂಬರ್ 7) ಮುಕ್ತಾಯಗೊಂಡಿತು. ಈ ಸೀಸನ್‌ನಲ್ಲಿ, 16 ಸ್ಪರ್ಧಿಗಳು ಮತ್ತು ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಸೇರಿದಂತೆ ಒಟ್ಟು 18 ಜನರು ಭಾಗವಹಿಸಿದ್ದರು. ಅವರಲ್ಲಿ, ಗೌರವ್ ಖನ್ನಾ ವಿನ್ ಆಗಿದ್ದಾರೆ.

ಈ ಬಾರಿಯ ಫಿನಾಲೆಯಲ್ಲಿ ಗೌರವ್ ಖನ್ನಾ, ಫರ್ಹಾನಾ ಭಟ್, ಪ್ರಣೀತ್ ಮೋರ್, ಅಮಲ್ ಮಲಿಕ್ ಮತ್ತು ತಾನ್ಯಾ ಮಿತ್ತಲ್ ಇದ್ದರು. ಗ್ರ್ಯಾಂಡ್ ಫಿನಾಲೆ ಸಂಚಿಕೆಯಲ್ಲಿ, ಅಮಲ್ ಮಲಿಕ್ ಐದನೇ ಸ್ಥಾನ ಮತ್ತು ತಾನ್ಯಾ ಮಿತ್ತಲ್ ನಾಲ್ಕನೇ ಸ್ಥಾನ ಪಡೆದರು. ಟಾಪ್ 3ನಲ್ಲಿ ಇದ್ದವರ ಪೈಕಿ ಪ್ರಣೀತ್ ಮೋರ್ ಅವರ ಪ್ರಯಾಣ ಮೊದಲು ಕೊನೆಗೊಂಡಿತು. ಅದರ ನಂತರ, ಫರ್ಹಾನಾ ಭಟ್ ಅವರನ್ನು ಸೋಲಿಸಿ ಗೌರವ್ ಬಿಗ್ ಬಾಸ್ ಟ್ರೋಫಿಯನ್ನು ಗೆದ್ದರು.

ವಿಜೇತ ಗೌರವ್ ಖನ್ನಾ ಅವರಿಗೆ 50 ಲಕ್ಷ ರೂಪಾಯಿ ಬಹುಮಾನ ಮತ್ತು ಬಿಗ್ ಬಾಸ್ ಟ್ರೋಫಿ ನೀಡಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಹದಿನಾಲ್ಕು ವಾರಗಳ ಕಾಲ ಇರೋದು ಸುಲಭದ ಕೆಲಸವಲ್ಲ. ಸ್ಪರ್ಧಿಗಳು ಕಾರ್ಯಕ್ರಮದ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕು. ಈ ಸೀಸನ್‌ನಲ್ಲಿ ಗೌರವ್ ಮೊದಲಿಂದಲೂ ಅನೇಕರ ಫೇವರಿಟ್ ಆಗಿದ್ದರು.

ಬಿಗ್ ಬಾಸ್ ಸಾಕಷ್ಟು ಡ್ರಾಮಾ, ಹೊಡೆದಾಟ ಮತ್ತು ಕೂಗಾಟಗಳಿಂದ ಕೂಡಿದೆ. ಅದು ಕಾರ್ಯಕ್ರಮದ ಗುರುತು ಆಗಿರುವುದರಿಂದ, ಗೌರವ್ ಅವರ ಆಟವನ್ನು ಅಪಹಾಸ್ಯ ಮಾಡಲಾಯಿತು. ಏಕೆಂದರೆ ಅವರು ಕಾಮ್ ಆಗಿರುತ್ತಿದ್ದರು. ಆದರೆ ಆಟ ಮುಂದುವರೆದಂತೆ, ಗೌರವ್ ಬಿಗ್ ಬಾಸ್ ಮನೆಯಲ್ಲಿ ಪ್ರಬಲ ಸ್ಪರ್ಧಿಯಾದರು. ಅವರು ಫಿನಾಲೆಯಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡ ಮೊದಲ ಸ್ಪರ್ಧಿ. ಫಿನಾಲೆಗೆ ಟಿಕೆಟ್ ಗೆದ್ದ ನಂತರ, ಗೌರವ್ ಈಗ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಇದನ್ನೂ ಓದಿ: ಮತ್ತೆ ಬಿಗ್ ಬಾಸ್ ಮನೆಯಲ್ಲಿ ಕಳಪೆ ಪಟ್ಟ ಪಡೆದ ಗಿಲ್ಲಿ ನಟ: ಎಡವಿದ್ದು ಎಲ್ಲಿ?

‘ಬಿಗ್ ಬಾಸ್ 19’ ಗಾಗಿ ಗೌರವ್ ಖನ್ನಾ ಅತಿ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಜಿಕೆ ಎಂದು ಕರೆಯಲ್ಪಡುವ ಗೌರವ್ ಅಭಿಮಾನಿಗಳಲ್ಲಿ ಅತ್ಯಂತ ಜನಪ್ರಿಯರಾಗಿದ್ದಾರೆ. ಗೌರವ್ ವಾರಕ್ಕೆ ಸುಮಾರು 17.5 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಅಂದರೆ, ಅವರು ಹದಿನಾಲ್ಕು ವಾರಗಳಲ್ಲಿ 2.45 ಕೋಟಿ ರೂ. ಗಳಿಸಿದ್ದಾರೆ. ‘ಟೈಮ್ಸ್ ಆಫ್ ಇಂಡಿಯಾ’ ನೀಡಿದ ವರದಿಯ ಪ್ರಕಾರ, ಗೌರವ್ ಅವರ ಒಟ್ಟು ಸಂಪತ್ತು 15 ರಿಂದ 18 ಕೋಟಿ ರೂ.ಗಳ ನಡುವೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 7:46 am, Mon, 8 December 25